ವಿದ್ಯುತ್ ಸಮಸ್ಯೆ- ಹೊಂದಾಣಿಕೆಯೊಂದೇ ಶಾಶ್ವತ ಪರಿಹಾರ.
ಈ ಲೇಖನದಲ್ಲಿ ವಿದ್ಯುತ್ ಸಮಸ್ಯೆಗೆ ಪರಿಹಾರವಾಗಬಹುದಾದ ಉಪಾಯವೊಂದನ್ನು ಸೂಚಿಸಿದ್ದೆ.
ಇದು ಹೊಂದಾಣಿಕೆಯ ಮಾರ್ಗವೇ ಹೊರತು ಶಾಶ್ವತ ಪರಿಹಾರವಲ್ಲ ಎಂದು ಕೆಲವರು ಆಕ್ಷೇಪಿಸಿದ್ದಾರೆ.
ನಾನು ಹೇಳಿದ ದಾರಿ ಕೇವಲ ಹೊಂದಾಣಿಕೆಯಲ್ಲ. ನಮ್ಮ ದೇಶದ ಮಟ್ಟಿಗೆ ಅದು ಶಾಶ್ವತ ಪರಿಹಾರ.
ನಮ್ಮ ಜನರ ನಡವಳಿಕೆಯೇ ವಿಚಿತ್ರ. ವಿದ್ಯುತ್ ಬೇಕು. ಎಲ್ಲಾ ಆಧುನಿಕ ಸವಲತ್ತುಗಳು ಬೇಕು. ಅದೂ ಅತ್ಯಂತ ಕಡಿಮೆ ವೆಚ್ಚದಲ್ಲಿ ಸಿಗಬೇಕು. ಯಾವುದೇ ತ್ಯಾಗಕ್ಕೂ ಸುತಾರಾಂ ಸಿದ್ಧರಿಲ್ಲ! ಆದರೆ ಪರಿಸರ ನಾಶವಾಗಬಾರದು.
ನಾವು ಮಾಡುತ್ತ್ತಿರುವ ತಪ್ಪುಗಳಿಗಾಗಿ ರಾಜಕಾರಣಿಗಳನ್ನು ದೂಷಿಸುತ್ತಿರುವ "ಕ್ರಾಂತಿಕಾರಿ"ಗಳನ್ನು ನೋಡಿದರೆ ನಗಬೇಕೋ ಅಳಬೇಕೋ ತಿಳಿಯುವುದಿಲ್ಲ.
ಕಡಿಮೆ ವೆಚ್ಚದ ವಿದ್ಯುತ್.
ಕಡಿಮೆ ವೆಚ್ಚದ ವಿದ್ಯುತ್ ಗಾಗಿ ಇರುವುದು ಎರಡೇ ದಾರಿಗಳು,
೧. ಜಲವಿದ್ಯುತ್ : ಇದಕ್ಕಾಗಿ ಸಹ್ಯಾದ್ರಿಯನ್ನು ನೆಲಸಮಗೊಳಿಸಬೇಕು. ಸಹ್ಯಾದ್ರಿ ಮುಖ್ಯವೋ ಎ.ಸಿ, ಫ್ಯಾನ್, ಟಿವಿ ಮುಖ್ಯವೋ ನಿರ್ಧರಿಸಬೇಕಾದವರು ನಾವೇ.
೨. ಅಣುವಿದ್ಯುತ್: ಇದಕ್ಕಾಗಿ ರಂಪಾಟವೇ ನಡೆದುಹೋದೀತು! ಇಂಧನಕ್ಕಾಗಿ ಬೇರೆ ದೇಶದ ಜೊತೆ ಒಪ್ಪಂದ ಮಾಡಿಕೊಂಡರೆ ಮನಮೋಹನ ಸಿಂಗ್ ದೇಶದ್ರೋಹಿ. ಸೋನಿಯಾ ದೇಶವನ್ನು ಮಾರಲು ಯತ್ನಿಸುತ್ತಿದ್ದಾರೆ ಎಂಬ ಬೊಬ್ಬೆ ಶುರುವಾಗುತ್ತದೆ.
ಸೌರವಿದ್ಯುತ್, ಗಾಳಿಯಂತ್ರದ ವಿದ್ಯುತ್ತನ್ನು ಜನ ಕೇಳುವಷ್ಟು ಕಡಿಮೆ ದರಕ್ಕೆ ಕೊಡಲಾಗುವುದಿಲ್ಲ.
ವಿದ್ಯುತ್ ಯಾಕೆ ಬೇಕು?
ಮುಖ್ಯವಾಗಿ ಕೃಷಿಗೆ ಮತ್ತು ಸಣ್ಣ ಕೈಗಾರಿಕೆಗಳಿಗೆ. ಬೆಂಗಳೂರಿನಲ್ಲಿ ದೊಡ್ಡ ದೊಡ್ಡ ಕಟ್ಟಡಗಳನ್ನು ಕಟ್ಟಿ ಸುತ್ತಲೂ ಗಾಜು ಕೂಡಿಸಿ ಎ.ಸಿ ಹಾಕಲಾಗುತ್ತದೆ. ಎ.ಸಿ ಯಿಂದಾಗಿ ಮತ್ತೆ ಬಿಸಿಯೇರಿಕೆ ಬಿಸಿಯೇರಿಕೆಯಿಂದ ತಪ್ಪಿಸಿಕೊಳ್ಳಲು ಮತ್ತೆ ಎ.ಸಿ! ಸುಳಿಯೊಳಗೆ ಮತ್ತೆ ಒಳಸುಳಿ.
ಪರಿಸರ ರಕ್ಷಣೆಗಾಗಿ ಒಂದು ತಾಸು ಬೇಗ ಏಳಲು ತಯಾರಿಲ್ಲದ ಜನರ ಬಗ್ಗೆ ನನಗೆ ಮರುಕವಿದೆ. ಇವರು ವಿದ್ಯುತ್ ಕೊರತೆ ಅನುಭವಿಸುತ್ತಿರುವುದು ಸರಿಯಾಗೇ ಇದೆ.
ಅಷ್ಟಕ್ಕೂ ಪರಿಹಾರವಾದರೂ ಎಷ್ಟು ಸುಲಭದ್ದು...
೧. ಒಂದು ತಾಸು ಬೇಗ ಏಳುವುದು.
೨. ಟಿವಿ ನೋಡುವುದನ್ನು ಬಿಡುವುದು.
ಇವೆರಡಕ್ಕೆ ತಯಾರಿಲ್ಲದವರಿಗಾಗಿ ನಾವು ಸಹ್ಯಾದ್ರಿಯನ್ನು ನಾಶಮಾಡಬೇಕೆ? ಅಮೇರಿಕದೊಂದಿಗೆ ದೇಶದ ರಕ್ಷಣಾ ರಹಸ್ಯಗಳನ್ನು ಹಂಚಿಕೊಳ್ಳಬೇಕೇ?
ವಿದ್ಯುತ್ ಬೇಡಿಕೆ ಹೆಚ್ಚಾಗಿರುವುದೇ ಝಗಮಗಿಸುವ ಮಾಲ್ ಗಳಲ್ಲಿ, ಟಿವಿ ನೋಡುಗರಲ್ಲಿ ಎ.ಸಿ ಬಳಕೆದಾರರಲ್ಲಿ. ಇವನ್ನು ಕಡಿಮೆ ಮಾಡಿದರಾಗದೇ?
ಬೇರೆ ದೇಶದಲ್ಲಿ ಸಮಸ್ಯೆ ಯಾಕಿಲ್ಲ?
ಸಿಂಪಲ್ಲು! ಅಲ್ಲಿನ ಜನಸಂಖ್ಯೆ ಮತ್ತು ವಿಸ್ತೀರ್ಣ ನಮ್ಮ ದೇಶದ ಒಂದು ಜಿಲ್ಲೆಯಷ್ಟು ಮಾತ್ರ!
ಅಮೇರಿಕೆಯಲ್ಲಿ ವಿದ್ಯುತ್ ಉಳಿತಾಯಕ್ಕಾಗಿ ಬೇಸಿಗೆ ಮತ್ತು ಛಳಿಗಾಲದಲ್ಲಿ ಒಂದು ಘಂಟೆ ಗಡಿಯಾರವನ್ನು ಹಿಂದಕ್ಕೆ ಮುಂದಕ್ಕೆ ಮಾಡುತ್ತಾರೆ. ನಾಲ್ಕು timezone ಗಳಾಗಿ ವಿಂಗಡಿಸಿ ಹಗಲು ಹೊತ್ತಿನಲ್ಲಿ ವಿದ್ಯುತ್ ಬಳಕೆ ಕಡಿಮೆಯಾಗುವಂತೆ ನೋಡಿಕೊಳ್ಳುತ್ತಾರೆ. ಇದಕ್ಕೆ ಅಲ್ಲಿನ ಜನರು ಸಹಕರಿಸುತ್ತಾರೆ. ಅದಕ್ಕೇ ಅಲ್ಲಿ ಸಮಸ್ಯೆ ಇಲ್ಲ.
ಸವಲತ್ತುಗಳು ಬೇಕು ಎಂದು ದುರಾಸೆ ಪಡುತ್ತಿರುವವರು ನಾವು. ಸವಲತ್ತು ಕೊಟ್ಟವರಿಗೆ ಓಟು ಹಾಕುತ್ತೇವೆ. ಅವರು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ. ಅವರನ್ನು ಬೈದು ಉದ್ದುದ್ದದ ಲೇಖನಗಳನ್ನು ಬರೆಯುತ್ತೇವೆ.
ನಮ್ಮ ದೇಶದ ಬೆಳವಣಿಗೆಗೆ ಕಂಟಕರು ನಾವೇ!
ಹಾಗೆ ನೋಡಿದರೆ ಮಾಲ್, ಟಿವಿ, ಎ.ಸಿ ಬಳಕೆ ಕಡಿಮೆ ಮಾಡಿದರೆ ನಮ್ಮ ರಾಜ್ಯದ ವಿದ್ಯುತ್ ಕೊರತೆ ನೀಗಿಸಬಹುದು. ನಮ್ಮ ಎ.ಸಿ, ಟಿವಿಗಳಿಗಾಗಿಯೂ ವಿದ್ಯುತ್ತನ್ನು ಖರೀದಿ ಮಾಡಿ, ರಾತ್ರಿ ಶಾಪಿಂಗಿಗೆ ವಿದ್ಯುತ್ ಉತ್ಪಾದಿಸಿ ಎಂದು ಕೇಳಿದರೆ ಅದು ದುರಾಸೆ ಅಷ್ಟೇ!
ಮುಂದಿನ ಹತ್ತು, ಇಪ್ಪತ್ತು ವರ್ಷಗಳ ನಂತರವೂ ಈಗ ಉತ್ಪಾದನೆಯಾಗುತ್ತಿರುವಷ್ಟು ವಿದ್ಯುತ್ ಸಾಕು. ನಾವು ಎಚ್ಚರಗೊಳ್ಳಬೇಕಷ್ಟೇ! ಚಿಂತಿಸಬೇಕಾದವರು ನಾವೇ; ವೈಜ್ಞಾನಿಕವಾಗಿಯೂ, ನೈತಿಕವಾಗಿಯೂ!
Comments
ಉ: ವಿದ್ಯುತ್ ಸಮಸ್ಯೆ- ಹೊಂದಾಣಿಕೆಯೊಂದೇ ಶಾಶ್ವತ ಪರಿಹಾರ.
In reply to ಉ: ವಿದ್ಯುತ್ ಸಮಸ್ಯೆ- ಹೊಂದಾಣಿಕೆಯೊಂದೇ ಶಾಶ್ವತ ಪರಿಹಾರ. by prasannasp

In reply to ಉ: ವಿದ್ಯುತ್ ಸಮಸ್ಯೆ- ಹೊಂದಾಣಿಕೆಯೊಂದೇ ಶಾಶ್ವತ ಪರಿಹಾರ. by udaygonda

In reply to ಉ: ವಿದ್ಯುತ್ ಸಮಸ್ಯೆ- ಹೊಂದಾಣಿಕೆಯೊಂದೇ ಶಾಶ್ವತ ಪರಿಹಾರ. by harsha.st
ಉ: ವಿದ್ಯುತ್ ಸಮಸ್ಯೆ- ಹೊಂದಾಣಿಕೆಯೊಂದೇ ಶಾಶ್ವತ ಪರಿಹಾರ.
In reply to ಉ: ವಿದ್ಯುತ್ ಸಮಸ್ಯೆ- ಹೊಂದಾಣಿಕೆಯೊಂದೇ ಶಾಶ್ವತ ಪರಿಹಾರ. by udaygonda
ಉ: ವಿದ್ಯುತ್ ಸಮಸ್ಯೆ- ಹೊಂದಾಣಿಕೆಯೊಂದೇ ಶಾಶ್ವತ ಪರಿಹಾರ.
ಉ: ವಿದ್ಯುತ್ ಸಮಸ್ಯೆ- ಹೊಂದಾಣಿಕೆಯೊಂದೇ ಶಾಶ್ವತ ಪರಿಹಾರ.
In reply to ಉ: ವಿದ್ಯುತ್ ಸಮಸ್ಯೆ- ಹೊಂದಾಣಿಕೆಯೊಂದೇ ಶಾಶ್ವತ ಪರಿಹಾರ. by raghusp

In reply to ಉ: ವಿದ್ಯುತ್ ಸಮಸ್ಯೆ- ಹೊಂದಾಣಿಕೆಯೊಂದೇ ಶಾಶ್ವತ ಪರಿಹಾರ. by thesalimath
ಉ: ವಿದ್ಯುತ್ ಸಮಸ್ಯೆ- ಹೊಂದಾಣಿಕೆಯೊಂದೇ ಶಾಶ್ವತ ಪರಿಹಾರ.
In reply to ಉ: ವಿದ್ಯುತ್ ಸಮಸ್ಯೆ- ಹೊಂದಾಣಿಕೆಯೊಂದೇ ಶಾಶ್ವತ ಪರಿಹಾರ. by raghusp
ಉ: ವಿದ್ಯುತ್ ಸಮಸ್ಯೆ- ಹೊಂದಾಣಿಕೆಯೊಂದೇ ಶಾಶ್ವತ ಪರಿಹಾರ.
In reply to ಉ: ವಿದ್ಯುತ್ ಸಮಸ್ಯೆ- ಹೊಂದಾಣಿಕೆಯೊಂದೇ ಶಾಶ್ವತ ಪರಿಹಾರ. by raghusp
ಉ: ವಿದ್ಯುತ್ ಸಮಸ್ಯೆ- ಹೊಂದಾಣಿಕೆಯೊಂದೇ ಶಾಶ್ವತ ಪರಿಹಾರ.
In reply to ಉ: ವಿದ್ಯುತ್ ಸಮಸ್ಯೆ- ಹೊಂದಾಣಿಕೆಯೊಂದೇ ಶಾಶ್ವತ ಪರಿಹಾರ. by mpneerkaje