ಕನ್ನಡಿಗರೆ ಕೇಳುವ ಹಾಗೆ ಕೂಗಿ, ಇಲ್ಲದೆ ಹೋದರೆ ಮರೆಯಾಗಿ ಹೋಗುವಿರಿ ಎಚ್ಚರ...
ಕನ್ನಡಿಗರೆ ಕೇಳುವ ಹಾಗೆ ಕೂಗಿ, ಇಲ್ಲದೆ ಹೋದರೆ ಮರೆಯಾಗಿ ಹೋಗುವಿರಿ ಎಚ್ಚರ...
ಕನ್ನಡ ನಾಡು, ನುಡಿ ಅಂದಕೂಡಲೆ ಎಲ್ಲರ ಕಿವಿಗಳು ನೆಟ್ಟಗೆ ನಿಂತು ಮುಂದೇನು ಕೇಳುವುದು ಎಂದು ಕಾಯುವಂತಹ ಭಾಷೆ ನಮ್ಮದು. ಎಲ್ಲಾ ಭಾವನೆಗು ಪ್ರತ್ಯೇಕ ಪದಗಳ ಬಳಕೆ, ಪ್ರತ್ಯೇಕ ಉಚ್ಛಾರಣೆ ಇರುವುದೆಂದರೆ ಅದು ನಮ್ಮ ಭಾಷೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ನಮ್ಮ "ಕನ್ನಡ" ಭಾಷೆ. ಪಕ್ಕದ ಮನೆಯವರು ನಮ್ಮ ಮನೆಗೆ ಬಂದು ಕುಡಿಯೋಕೆ ನೀರು ಬೇಕು ಎಂದರೆ, ಬಾಯಾರಿದ ಅವರಿಗೆ ಕುಡಿಯಲು ನೀರು ಕೊಟ್ಟು ನಾವು ತೃಪ್ತಿ ಪಡುತ್ತೇವೆ, ಕೆಲವೊಮ್ಮೆ ಎರಡು ಕೊಳಗ ನೀರು ತುಂಬಿಟ್ಟಿದು ಪಕ್ಕದ ಮನೆಯವರು ಕುಡಿಯಲು ನೀರು ಅವತ್ತಿನ ದಿನಕ್ಕೆ ಇಲ್ಲವೆಂದು ಕೇಳಿದರೆ ಒಂದು ಕೊಳಗ ಕೊಡುವ ಮನೋಭಾವ ನಮ್ಮದು, ಆದರೆ ನಮಗೆ ಎಂದು ಉಳಿಸಿಕೊಂಡಿರುವ ಒಂದು ಕೊಳಗದ ನೀರನ್ನು ಕೂಡ ಅವರಿಗೆ ಕೊಡುವಂತಹ ಬುದ್ದಿವಂತಿಕೆ ಬೇಡ. ನಮ್ಮ ರಾಜ್ಯದ ಸಂಸ್ಕೃತಿಯನ್ನು ಎತ್ತಿ ಹಿಡಿಯುವಂತಹ ಹಬ್ಬಗಳನ್ನು ನಮ್ಮ ಮಾದ್ಯಮಗಳಲಿ ಆಚರಣೆ ಮಾಡುವುದು ಮೊದಲಿಂದ ಬಂದಂತಹದು, ಹೊರರಾಜ್ಯದ ಜನರಿಗೆ ಹಾಗು ಅವರ ಸಂಸ್ಕೃತಿಗೆ ನಾವು ಕೂಡ ಬೆಲೆ ಕೊಡೋದು ಎಲ್ಲವು ಸರಿ, ಆದರೆ ಬಹಳವಾದ ಪ್ರಾಮುಖ್ಯತೆ ಎಷ್ಟರ ಮಟ್ಟಿಗೆ ಅಂದರೆ ನಮ್ಮನ್ನೆ ನಾವು ಮರೆತು ನಮ್ಮ ರಾಜ್ಯದಲ್ಲಿ, ಅವರ ಸಂಸ್ಕೃತಿ, ಅವರ ಜನರ ಜಾಗೃತಿ, ಅವರ ಅಭಿವೃಧಿಯನ್ನು ಎತ್ತಿ ತೋರುವಂತೆ, ಮೂಲೆಮೂಲೆಗೆ ಸುದ್ದಿ ತಲುಪಿಸುವಂತಹ ಟಿವಿ ಮಾದ್ಯಮದಲ್ಲಿ, ಒಂದು ಕಾರ್ಯಕ್ರಮದ ಉದ್ದೇಶ, ಹಣ ಮಾಡುವ ಉದ್ದೇಶ ಮಾತ್ರವೆ ಕಾರಣವಾಗಿ, ನಮ್ಮ ಸಂಕೃತಿಯನ್ನು ಮರೆಮಾಡುವ ಪ್ರಯತ್ನ ಬೇಡ...
ಇದು ಪ್ರತಿಯೊಬ್ಬ ಕನ್ನಡಿಗನ ಕೂಗು ಕೂಡ...
ಕೆಂಪುಸೂರ್ಯ...
ಕಾನನಬ್ರಹ್ಮ...