‘ಟೂರಿಂಗ್ ಟಾಕೀಸ್ : ಸಿನಿಮಾ ಓದುವುದು ಹೇಗೆ?’---- ಚಲನಚಿತ್ರ ರಸಗ್ರಹಣ ಶಿಬಿರ
ಸಂವಾದ ಡಾಟ್ ಕಾಂ(www.samvaada.com) ಸಿನೆಮಾ, ಟಿ ವಿ, ರಂಗಭೂಮಿ ಸೇರಿದಂತೆ ದೃಶ್ಯ ಮಾಧ್ಯಮಗಳಲ್ಲಿ ಅಕೆಡೆಮಿಕ್ ಅರಿವಿನ ಗುಣಮಟ್ಟದ ಪಠ್ಯವನ್ನು ಅಭಿವೃದ್ಧಿಪಡಿಸುವ ಜವಾಬ್ದಾರಿಯನ್ನು ಸ್ವಯಂ ಗುರುತಿಸಿಕೊಂಡು ಆ ನಿಟ್ಟಿನಲ್ಲಿ ಸದಭಿರುಚಿಯ ಚಿತ್ರ ಪ್ರದರ್ಶನ, ಸಂವಾದ, ಚಲನಚಿತ್ರ ಚಿಂತನ ಶಿಬಿರ ಇತ್ಯಾದಿಗಳನ್ನು ಆಯೋಜಿಸುತ್ತ ಬಂದಿದೆ. ಜೊತೆಗೆ ಈ ಎಲ್ಲಾ ಚಟುವಟಿಕೆಗಳನ್ನು ಅಂತರ್ಜಾಲ ತಾಣದಲ್ಲೂ ಲೇಖನ/ಪಠ್ಯ ರೂಪದಲ್ಲಿ ದಾಖಲಿಸುತ್ತಾ ಬಂದಿದೆ. ಸಂವಾದ ಡಾಟ್ ಕಾಂ ತನ್ನ ಸಿನಿಮಾ ಕುರಿತಾದ ಪಠ್ಯ ಮತ್ತು ಚಟುವಟಿಕೆಗಳಿಂದಾಗಿ ಕನ್ನಡ ಅಂತರ್ಜಾಲ ಪ್ರಪಂಚದಲ್ಲಿ ಗಮನ ಸೆಳೆಯುವಂತೆ ಕಾರ್ಯ ನಿರ್ವಹಿಸುತ್ತಿದೆ.
ಸಂವಾದ ಡಾಟ್ ಕಾಂ ಯುವಸಮೂಹದಲ್ಲಿ ಚಲನಚಿತ್ರದ ಬಗೆಗೆ ವೈಚಾರಿಕ ಪರಿಕಲ್ಪನೆಯನ್ನು ನೀಡಬಹುದಾದ ಮೂರು ದಿನಗಳ ‘ಟೂರಿಂಗ್ ಟಾಕೀಸ್ : ಸಿನಿಮಾ ಓದುವುದು ಹೇಗೆ?’ ಎಂಬ ಶೀರ್ಷಿಕೆಯ ಚಲನಚಿತ್ರ ರಸಗ್ರಹಣ ಶಿಬಿರವೊಂದನ್ನು ಆಗಸ್ಟ್ 27, 28 ಮತ್ತು 29ರಂದು ತುಮಕೂರು ಬಳಿಯ ಓದೇಕರ್ ಫಾರಂನಲ್ಲಿ ಆಯೋಜಿಸಿದೆ.
ಶಿಬಿರಕ್ಕೊಂದು ಉದ್ದೇಶ:
ಕ್ರೆಡಿಟ್ ಕಾರ್ಡ್ ಅಥವಾ ನಗದಿನ ಮೂಲಕ ಟಿಕೆಟ್ ಖರೀದಿಸುತ್ತೇವೆ. ಸಿನೆಮಾ ನೋಡಿ ಹೊರಬರುತ್ತೇವೆ. ನೋಡಿದ ಸಿನೆಮಾ ಬಗ್ಗೆ ಎರಡು ಮಾತನಾಡಿ ಒಂದು ಕಡೆ ಸರಾಸರಿ ಪ್ರೇಕ್ಷಕನಾಗಿ ಉಳಿದು, ನಾವು ಆಡಿದ ಮಾತುಗಳೆಲ್ಲ ಆಳವಾದ ವಿಮರ್ಶೆ ಎಂದೇ ಭಾವಿಸಿ ಬಿಡುತ್ತೇವೆ - ಇದು ಅಹಂಕಾರ ಎಂದು ಕೂಡ ನಮ್ಮ ಅರಿವಿಗಿರುವುದಿಲ್ಲ. ಇದು ನಮ್ಮಲ್ಲಿ ಅನೇಕರ, ಬಹುಸಂಖ್ಯಾತರ ಸತ್ಯ. ಹೆಚ್ಚಿನ ಮಟ್ಟಿಗೆ ಯುವ ಪ್ರೇಕ್ಷಕನನ್ನು ವ್ಯಾಖ್ಯಾನಿಸಲು ಬಳಸಬಹುದಾದ ಸಾರ್ವತ್ರಿಕಗೊಂಡಿರುವ ಸತ್ಯ.
ಸಿನೆಮಾ ನೋಡಲು ಬೇಕಾಗಿರುವ ನಮ್ರತೆ, ವಿನಯ, ಸಿನೆಮಾ ನಿಶ್ಯಬ್ದವಾಗಿ, ಉಳಿದು ಹೇಳುತ್ತಾ ಹೋಗುವುದನ್ನು ಗ್ರಹಿಸಲು ಬೇಕಾಗಿರುವ ಶಿಸ್ತು ಇಲ್ಲವಾಗಿವೆ ಎಂಬ ಕೊರತೆ ನಮ್ಮಲ್ಲಿ ಬಹಳಷ್ಟು ಜನರನ್ನ ಕಾಡುತ್ತಿದೆ. ಆ ಕೊರತೆ ನೀಗಿಸುವ ನಿಟ್ಟಿನಲ್ಲಿ ಸಂವಾದ ಡಾಟ್ ಕಾಂ ಈ ಶಿಬಿರದ ಆಯೋಜನೆ ಮಾಡುತ್ತಿದೆ.
ಶಿಬಿರದ ಸಂಪನ್ಮೂಲ ವ್ಯಕ್ತಿಗಳು ಮತ್ತು ಅತಿಥಿಗಳು:
ಪಿ. ಶೇಷಾದ್ರಿ , ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕರು
ಗುರುಪ್ರಸಾದ್, ಮಠ ಖ್ಯಾತಿಯ ನಿರ್ದೇಶಕರು.
ಶಶಾಂಕ್, ಮೊಗ್ಗಿನ ಮನಸು ಖ್ಯಾತಿಯ ನಿರ್ದೇಶಕರು.
ಪುಟ್ಟಸ್ವಾಮಿ ಕೆ ಎಸ್, ‘ಸಿನಿಮಾ ಯಾನ’ ಕೃತಿ ಕರ್ತೃ, ವಿಮರ್ಶಕರು
ಡೇವಿಡ್ ಬಾಂಡ್, ಫ್ರೆಂಚ್ ಸಿನೆಮಾ ವಿಮರ್ಶಕರು.
ಡಾ| ಸಿ ಸೋಮಶೇಖರ್, ಜಿಲ್ಲಾಧಿಕಾರಿಗಳು, ತುಮಕೂರು ಜಿಲ್ಲೆ.
ಶೇಖರ್ ಪೂರ್ಣ, ಕನ್ನಡ ಸಾಹಿತ್ಯ ಡಾಟ್ ಕಾಂನ ಸಂಪಾದಕರು
ಕಾರ್ಯಕ್ರಮದ ಹೆಚ್ಚಿನ ವಿವರಗಳು ಸಂವಾದ ಡಾಟ್ ಕಾಂ ನ ಈ ಲಿಂಕ್‌ನಲ್ಲಿ ಲಭ್ಯವಿರುತ್ತವೆ:
http://samvaada.com/themes/pages/8/touring_talkies_shibira.htm
ಶಿಬಿರಕ್ಕೆ ನೋಂದಾವಣೆ ಮೂಲಕ ಮಾತ್ರ ಪ್ರವೇಶ.
ನೋಂದಾವಣೆಗೆ ಕೊನೆಯ ದಿನಾಂಕ 25-08-2010
ಹೆಚ್ಚಿನ ವಿವರಗಳು ಮತ್ತು ಶಿಬಿರಕ್ಕೆ ನೋಂದಾಯಿಸಲು ಸಂಪರ್ಕ:ಅರೇಹಳ್ಳಿ ರವಿ: 99004 39930, ಕಿರಣ್ ಎಂ: 97317 55966