ರಕ್ಷಾ ಬಂಧನದ ಪ್ರಯುಕ್ತ ಒಂದು ಸ್ವರಚಿತ ಕವನ! - "ನೂಲಿನ ನಂಟು"

ರಕ್ಷಾ ಬಂಧನದ ಪ್ರಯುಕ್ತ ಒಂದು ಸ್ವರಚಿತ ಕವನ! - "ನೂಲಿನ ನಂಟು"

ಬರಹ

ಸಹೃದಯರೇ,


ಸಂಪದ ಬಳಗದ ನನ್ನ ಎಲ್ಲಾ ಸಹೋದರರಿಗೂ ನಿಮ್ಮ ಸಹೋದರಿಯಿಂದ ರಕ್ಷಾ ಬಂಧನದ ಶುಭಾಶಯಗಳು! ನಿಮ್ಮೆಲ್ಲರಿಗೂ ಒಳ್ಳೆಯದಾಗಲೆಂದು ಈ ತಂಗಿಯ ಹಾರೈಕೆ!


ಬೆಚ್ಚನೆಯ ಮಡದಿಯು
ಮನಸಲಿ ಅಚ್ಚೊತ್ತಿರುವಾಗ
ತಂಗಿಯ ನೆನಪುಗಳೆಲ್ಲ
ಕೊರೆವ ಛಳಿಯಂತೆ


ಮನವು ಮರೆತಿರುವಾಗ
ಕಾಲ ಮರೆಯಗೊಡುವುದೆ?
ಬೆಸೆಯಿಸಿದೆ ಬಾಂಧವ್ಯವ
ರಾಖಿಯ ನೂಲಿನಂತೆ!


- ಸೌಮ್ಯ ಶಾಸ್ತ್ರಿ, ಬೆಂಗಳೂರು