ಸಾರಿಗೆ ಇಲಾಖೆಗೆ ಹಣ - ಜನರ ಜೇಬು ಭಣ ಭಣ!!

ಸಾರಿಗೆ ಇಲಾಖೆಗೆ ಹಣ - ಜನರ ಜೇಬು ಭಣ ಭಣ!!

ಬರಹ

 

ಮಾನ್ಯ ಸಾರಿಗೆ ಸಚಿವರಿಗೆ ನಮಸ್ಕಾರಗಳು.

ಪದೇ- ಪದೇ ಪ್ರಯಾಣಯಾನ ದರದ ಏರಿಕೆಯಿಂದ ಜನ( ಬೆಂಗಳೂರಿನ ಹಾಗು ರಾಜ್ಯದ)  ಬೇಸತ್ತು ಹೋಗಿದ್ದಾರೆ.  ಆದರೆ ದರಗಳನ್ನು ಏರಿಸದೆ ನಿಮಗೂ ಬೇರೆ ವಿಧಿಯಿಲ್ಲ ಎಂಬುದು ಮೇಲ್ನೋಟಕ್ಕೆ ತಿಳಿದುಬರುತ್ತದೆ.  ಈ ಪತ್ರವನ್ನು ಒಂದು ಜವಾಬ್ದಾರಿಯುತ ಪ್ರಜೆಯೊಬ್ಬನ ಸಲಹೆಯೆಂದು ತಿಳಿದುಕೊಳ್ಳಿ. 

ಈ ಪತ್ರವು ಸಾರ್ವಜನಿಕರ ಹೊರೆ ಹಾಗು ಸಾರಿಗೆ ಇಲಾಖೆಯ ಖರ್ಚನ್ನೂ ಸರಿದೂಗಿಸಬಹುದು ಎಂಬುದು ನನ್ನ ಅನಿಸಿಕೆ.

ಪ್ರಸ್ತುತ ಬಸ್ ದರಗಳು ಹಾಗು ಬಸ್ ದರ ಏರಿಕೆಯೂ ಯಾವುದೇ ವಿವೇಚನೆಯಿಲ್ಲದ್ದು ಎಂಬುದರಲ್ಲಿ ಸಂಶಯವಿಲ್ಲ. ಉದಾ: ಒಂದು ಲೀಟರ್ ಪೆಟ್ರೋಲ್‍ಗೆ ೩ ರೂ. ದರ ಜಾಸ್ತಿಯಾದರೆ ಪ್ರತಿಯೊಂದು ಟಿಕೇಟಿನ ಮೇಲೂ ಒಂದೊಂದು ರೂ., ದಿನದ ಪಾಸಿನ ಮೇಲೆ ೩ರೂ., ಮಾಸಿಕ ಪಾಸಿನ ಮೇಲೆ ೬೦ ರೂ., ಏರಿಸುವುದರಲ್ಲಿ ಯಾವ ಅರ್ಥವಿದೆ?

ಈಗ ದಿನದ ಪಾಸಿಗೆ ಐ.ಡಿ. ಕಾರ್ಡ್ ಕಡ್ಡಾಯ ಮಾಡುವುದೂ ಒಂದು ಹಣ ಸುಲಿಯುವ ಧಂದೆ ಎಂದರೆ ತಪ್ಪಾಗಲಾರದು.

ಬೆಂ..ಸಾ. ಸಂಸ್ಥೆಯು ಪ್ರತಿಯೊಬ್ಬರಿಂದಲೂ ಐ.ಡಿ. ಕಾರ್ಡ್‌ಗೆ ೨೫ರೂ ವಸೂಲಿ ಮಾಡಿ ಬ್ಯಾಂಕಿನಲ್ಲಿ ಫಿಕ್ಸೆಡ್ ಮಾಡುವ ಯೋಚನೆ ಇರುವಂತೆ ಕಾಣುತ್ತದೆ.

ಬಸ್‌ದರಗಳನ್ನು ಏರಿಸುವುದನ್ನು ಕಂಡಾಗ ಭಾರತೀಯ ಜನತಾ ಪಕ್ಷ ನಡೆಸಲು "ಫಂಡ್ ಕಲೆಕ್ಷನ್" ಮಾಡುತ್ತಿರುವ ಹಾಗೆ ಕಾಣುತ್ತದೆ.

ಇನ್ನು ಟಿಕೇಟ್ ದರಗಳಾದರೊ ದೇವರಿಗೇ ಪ್ರೀತಿ! ಐದು ಕಿಲೊಮೀಟರ್ ದೂರಕ್ಕೆ ೧೦ರೂ ಕೊಡುವ ದುಸ್ಥಿತಿ ಬೆಂಗಳೂರಿನ ಶ್ರೀಸಾಮಾನ್ಯನಿಗೆ ಬಂದೊದಗಿದೆ. ಹಾಗೆ ಯೋಚಿಸಿದ್ದಲ್ಲಿ "ಸಾರ್ವಜನಿಕ ಸಾರಿಗೆ ಪ್ರತಿ ಕಿಲೋಮೀಟರಿಗೆ ೨ರೂಪಾಯಿಯಷ್ಟು ದುಬಾರಿಯೇ?"

ಪ್ರತಿ ಕಿಲೋಮೀಟರಿಗೊಂದರಂತೆ ಸ್ಟೇಜ್‌ಗಳನ್ನು ಮಾಡಿದ ಪುಣ್ಯಾತ್ಮನಾರೋ ದೇವರೇ ಬಲ್ಲ.

ಈಗಿರುವ "ಸ್ಟೇಜ್" ಆಧಾರಿತ ದರಗಳನ್ನು ಬಿಟ್ಟು "ಕಿಲೋಮೀಟರ್" ಆಧಾರಿತ ದರಗಳನ್ನು ವಿಧಿಸಿ ಸಾರಿಗೆ ವಲಯದಲ್ಲಿ ಕ್ರಾಂತಿ ಮಾಡುವ ಸದವಕಾಶ ಕರ್ನಾಟಕ ಸರ್ಕಾರಕ್ಕಿದೆ ಎಂದರೆ ಅತಿಶಯೋಕ್ತಿಯಾಗಲಾರದು.

ವೈಜ್ಞಾನಿಕವಾಗಿ ಟಿಕೇಟ್ ದರ ವಿಧಿಸುವ ಮಾದರಿ ಲೆಕ್ಕವನ್ನು ಈ ಕೆಳಗೆ ನೀಡಲಾಗಿದೆ.

ಸಾಮಾನ್ಯ ಬಸ್ಸುಗಳಿಗೆ (ಪರಿಸರ ವಾಹಿನಿ,ಸುವರ್ಣ ಹಾಗು ಪುಷ್ಪಕ್)

ಡೀಸಲ್ ದರ ಪ್ರತಿ ಲೀಟರಿಗೆ ೪೦ರೂ (ಸಾರ್ವಜನಿಕರಿಗೆ ೪೨ರೂ. ಆದರೆ ಸಾರಿಗೆ ಇಲಾಖೆಗೆ ರಿಯಾಯಿತಿ ದರದಲ್ಲಿ ಡೀಸಲ್ ಪೂರೈಕೆ ಆಗುತ್ತದೆಂಬುದು ಎಲ್ಲರಿಗೂ ತಿಳಿದ ವಿಚಾರ).

ಎಲ್ಲ ಬಸ್ಸುಗಳ ಕೆ.ಎಮ್.ಪಿ.ಎಲ್ ( ಕಿಲೋ ಮೀಟರ್ ಪ್ರತಿ ಲೀಟರಿಗೆ) ಸರಾಸರಿ: 2.5 ಕೆ.ಎಮ್.ಪಿ.ಎಲ್.

ಹಾಗಿದ್ದಲ್ಲಿ ಒಂದು ಬಸ್ಸಿಗೆ ಪ್ರತಿ ಕಿ.ಮೀ.ಗೆ ತಗಲುವ ವೆಚ್ಚ: 40/2.5=16ರೂ.

ಒಂದು ಬಸ್ಸಿನಲ್ಲಿ ಸರಾಸರಿ 50 ಜನ ಇದ್ದರೆ

ಪ್ರತಿಯೊಬ್ಬ ಪ್ರಯಾಣಿಕನಿಗೆ ಒಂದು ಕಿ.ಮೀ.ಗೆ ತಗಲುಗುವ ಖರ್ಚು: 16/50= 0.32 ರೂಗಳು

ಪ್ರತಿ ಬಸ್ಸಿಗೆ,ಪ್ರತಿ ಕಿ.ಮೀ.ಗೆ ನಿರ್ವಹಣಾ ವೆಚ್ಚ 8 ರೂ ಎಂದು ಹಿಡಿದರೂ ಪ್ರತಿ ಪ್ರಯಾಣಿಕನಿಗೆ ಒಂದು ಕಿ.ಮೀ.ಗೆ ತಗಲುವ ನಿರ್ವಹಣಾ ವೆಚ್ಚ 8/50 = 0.16 ರೂಗಳು

ಒಟ್ಟು 32+16=48 ಪೈಸೆಗಳು.. ಅಂದಾಜು ಪ್ರತಿ ಕಿ.ಮೀ.ಗೆ 50 ಪೈಸೆಗಳು..

 

 

 

ಕನಿಷ್ಟ ದರ 3ರೂ ಎಂದು ನಿಗದಿ ಪಡಿಸಿದ್ದಲ್ಲಿ

ಸಂಭಾವ್ಯ ದರಪಟ್ಟಿ ಹೀಗಿರುತ್ತದೆ:

 

ಪ್ರಯಾಣ ದೂರ (ಕಿ.ಮೀ.ಗಳಲ್ಲಿ )

ಪ್ರಯಾಣ ದರ

(ರೂ.ಗಳಲ್ಲಿ )

<6

3

6 to 8

4

8 to 10

5

10 to 12

6

12 to 14

7

ಹೀಗೆ ಪಟ್ಟಿ ಮುಂದುವರೆದು ಗರಿಷ್ಟ ದರ 15 ರೂ. ಗಳಿಗೆ ಮುಗಿಯುವುದು.

ದಿನದ ಪಾಸು: 30 ರೂ.

ಸಂಸ್ಥೆಯು ನಷ್ಟದಲ್ಲಿದೆ ಅದ್ದರಿಂದ ಪ್ರಯಾಣ ದರ ಏರಿಕೆ ಎಂದು ಹೇಳಿಕೆ ನೀಡುವಾಗ ಸಚಿವರು ತುಸು ಯೋಚಿಸಬೇಕು. ಏಕೆಂದರೆ ಸರ್ಕಾರಿ ಸ್ವಾಮ್ಯದ ಸಾರಿಗೆ ಸಂಸ್ಥೆಯು ಲಾಭಕ್ಕಾಗಿ ಕೆಲಸ ಮಾಡದೆ ಜನರಿಗಾಗಿ ಕೆಲಸ ಮಾಡಿದರೆ ಒಳಿತು. ನೆರೆ ರಾಜ್ಯಗಳ ಬಸ್ ದರಗಳು ಬೆಂ..ಸಾ. ಸಂಸ್ಥೆಗೆ ಮಾದರಿಯಾಗಲಿ.

 

ವಂದನೆಗಳೊಂದಿಗೆ

ನಾಗರಾಜ ಸಾಠೆ

ಬೆಂಗಳೂರು.