ಪ್ರವಾಸದ ಕತೆ
ನೋಡಲಾ ನಮ್ಮ ಕಡೆ ಊರು ನೋಡಿ ನೋಡಿ ಬೇಜಾರು ಆಗೈತೆ. ಶೃಂಗೇರಿ,ಹೊರನಾಡು,ಧರ್ಮಸ್ಥಳ, ಸುಬ್ರಹ್ಮಣ್ಯ ಎಲ್ಲಾ ನೋಡ್ಕಂಡು ಬರುವಾ. ಹೆಂಗಿದ್ರು ಏನು ಕ್ಯಾಮೇ ಇಲ್ಲಾ ಅಂದ ನಮ್ಮ ವಾಸನೆ ಗೌಡಪ್ಪ. ಸರಿ ನೀವು ಹೇಳಿದ ಮ್ಯಾಕೆ ಮುಗೀತು ಹೋಗುವಾ ಅಂದು ಇಸ್ಮಾಯಿಲ್ ಬಸ್ ಬುಕ್ ಮಾಡಿದ್ವಿ. ಸರಿ ನಿಂಗ, ತಂಬಿಟ್ಟು ರಾಮ ಅವನ ಹೆಂಡರು, ಸುಬ್ಬ, ದೊನ್ನೆ ಸೀನ, ತಂತಿ ಪಕಡು ಸೀತು, ಸುಬ್ಬಿ ಎಲ್ಲಾ ಹೊರಡೋದು ಅಂತಾ ಆತು. ಗೌಡಪ್ಪ ಎಲ್ಲರದ್ದೂ ಕಾಸು ಇಸ್ಕಂಡಿದ್ದ. ಬಡ್ಡೆ ಹೈದ ತನ್ನ ಚಾರ್ಜ್ ಫ್ರೀ ಮಾಡ್ಕಂಡಿದ್ದ. ರಾಜಮ್ಮನ ಮೊಮ್ಮಗಳಿಗೆ ಅರ್ಧ ಟಿಕೆಟ್ ಮಾಡಿದ್ದ. ಲಾಸ್ ಆಯ್ತದೆ ಅಂತ.
ಸರಿ ಬೆಳಗ್ಗೆನೇ ಹಳ್ಳಿಗೆ ಇಸ್ಮಾಯಿಲ್ ಬಸ್ ಬಂತು. ಬಸ್ಸಿಗೆ ಪೂಜೆ ಮಾಡಿದ್ದು ಹೆಂಗಿತ್ತು ಅಂದ್ರೆ ಮಾರ್ವಾಡಿ ಮದುವೆ ಆದಂಗೆ ಆಗಿತ್ತು. ಇಸ್ಮಾಯಿಲ್ ರಸ್ತೆ ಕಾಣಕ್ಕಿಲ್ಲಾ ಅಂತಿದ್ದ. ಲೇ ಹೂವು ತೆಗೆರೀಲಾ ಇಲ್ಲಾ ಅಂದ್ರೆ ಎಲ್ಲಾರಿಗೂ ಹೊಗೆ ಹಾಕಿಸ್ಬಿಟಾನು ಅಂದ ಗೌಡಪ್ಪ. ಸರಿ ಮಧ್ಯೆ ಮಧ್ಯೆ ಲೀಸರ್. ಚೊಂಬು ಹಿಡ್ಕಂಡು ಗದ್ದೇತಾವ ಹೋಗೋವು. ಎಲ್ಲೂ ಊಟ ಸಿಗಕ್ಕಿಲ್ಲಾ ಅಂತಾ ನಿಂಗ ಹಿಂದಿನ ದಿನ ಸಾನೆ ರೊಟ್ಟಿ ಪೋಣಿಸಿದ್ದ. 10ಕಿಮೀಗೂ ಬಸ್ ಸ್ಟಾಪ್ ಆಗೋದು. ಅದಕ್ಕೇ ಅಂತಾ ಹಿಂದಗಡೆ ದೊಡ್ಡ ನೀರಿನ ಡ್ರಮ್ ಮಡಗಿದ್ವಿ. ಸುಬ್ಬಿ ಸೀಟಿನ ಮುಂದೆ ಕುಸನ್ ಮಡಗಿದ್ವಿ. ಅಂಗೇನಾದ್ರೂ ಆಕ್ಸಿಡೆಂಟ್ ಆದ್ರೂ ಹಲ್ಲು ಚೆನ್ನಾಗಿರಲೀ ಅಂತಾ. ಸರಿ ಹೊರನಾಡು ಬಂತು ನೋಡ್ರಲಾ ಅಂದಾ ಇಸ್ಮಾಯಿಲ್. ಬಡ್ಡೇ ಹತ್ತಾವು ಹೊರನಾಡು ಅಂದ್ರೆ ಯಾವುದೋ ಬೇರೆ ರಾಜ್ಯದ ಪ್ರದೇಸ ಅಂದ್ಕಂಡಿದ್ವು. ಸರಿ ದೇವರ ದರ್ಸನ ಆತು. ಇಷ್ಟೇ ಏನ್ಲಾ ಇಲ್ಲಿ ಅಂದ ಸುಬ್ಬ. ನಾವಡರ ಮನೆಗೆ ಹೋಗುವಾ ಅಂದಾ ತಂಬೂರಿ. ಮುಂಚೆನೇ ಅವರು ಹಲ್ಲು ನೋವು ಅಂತಿದಾರೆ, ಯಾಕೆ ಅಲ್ಲೂ ತಲೇ ತಿನ್ನಕ್ಕಾ ಹತ್ತರಲಾ ಬಸ್ಸು ಅಂತ, ಅಲ್ಲಿಂದ ಶೃಂಗೇರಿಗೆ ಊಟಕ್ಕೆ ಹೋದರೆ ಸಲ್ಟು ತೆಗೀರಿ ಅಂದ್ರು. ಗೌಡಪ್ಪ ಸಲ್ಟು ಪಂಚೆ ಎಲ್ಡೂ ತೆಗೆದು ಚೆಡ್ಯಾಗೆ ನಿಂತ. ಒಳ್ಳೆ ಕಾಡಮ್ಮೆ ಕಡೆಯೋರು ತರಾ ಕಾಣೋನು. ಏ ಥೂ, ಪಂಚೆ ಉಟ್ಟುಕೊಳ್ಳಿ ಮಾರಾಯ್ರೆ ಅಂದ್ರು. ಅಲ್ಲಿ ಇದ್ದೋರು ಮಕ್ಕಳು ಕಳ್ಳ ಅನ್ನೋವು. ಮೀಸೆ ಸಣ್ಣದು ಮಾಡಕ್ಕೆ ಆಗಕ್ಕಿಲ್ವಾ ಅಂದ್ಲು ಗೌಡನ ಹೆಂಡರು. ರಾಜಮ್ಮನ ಹಣೆ ದಪ್ಪ ಆಗಿತ್ತು. ಯಾಕವ್ವಾ. ನಿದ್ದೆಗಣ್ಣಾಗೆ ಕಿಟಕಿಗೆ ಡಿಕ್ಕಿ ಹೊಡೆದು ಹಂಗೆ ಆಗೈತೆ ಅಂದಾ ಅವಳ ಗಂಡ ತಂಬಿಟ್ಟು ರಾಮ. ಸರಿ ಎಲ್ಲಾ ಗಡದ್ದಾಗಿ ತಿಂದ್ವು. ಅಲ್ಲಿದ್ದ ಅಡುಗೆ ಭಟ್ಟ. ಇನ್ನು ಎಸ್ಟು ದಿನಾ ಇರುತ್ತೀರಿ ಅಂದಾ. ಯಾಕಪ್ಪಾ. ನೀವು ಹಿಂಗೆ ಒಬ್ಬಬ್ಬೊರು ಹತ್ತತ್ತು ಜನದ್ದು ತಿಂದರೆ ಅಡುಗೆ ಜಾಸ್ತಿ ಮಾಡಬೇಕು ಮಾರಾಯ್ರೆ ಅಂದ. ಸುಬ್ಬ ಅಂತೂ ಹಂಗೇ ಬಾಯಿಗೆ ತುರುಕ್ತಾ ಇದ್ದ. ಹೊರಗೆ ಬಂದ್ರೆ ಇಸ್ಮಾಯಿಲ್ ಸ್ಟೇರಿಂಗ್ ಮ್ಯಾಕೆ ಬಿದ್ಗಂಡಿದ್ದ. ಯಾಕಲಾ ರಂಜಾನ್ ಕಲಾ ಏನು ತಿನ್ನಂಗಿಲ್ಲ ಅಂದ. ಗ್ಯಾಸ್ ಆಗೈತೆ ಅಂತಾ ಅವಾಗವಾಗ ಒಮೇಜ್ ನುಂಗೋನು.
ಸರಿ ಅಲ್ಲಿಂದ ಧರ್ಮಸ್ಥಳಕ್ಕೆ ಹೊಂಟ್ವಿ. ಶೃಂಗೇರಿಯಲ್ಲಿ ತಿಂದದ್ದು ಎಲ್ಲಾ ಕಿಟಕಿಯಿಂದ ಹೊರ ಹಾಕಿದ್ವು. ಬಸ್ಸಿನ ಸೈಡ್ ನೋಡಿ ಎದುರುಗಡೆಯಿಂದ ಬಂದ ವಾಹನದೋರು ಅವರೇ ಮಣ್ಣಾಗೆ ಇಳಸೋರು. ಎಲ್ಲಿ ವಾಂತಿ ಮಾಡಿದ್ದು ನಮ್ಮ ವಾಹನಕ್ಕೆ ಅಂಟ್ಕತದೆ ಅಂತಾ. ಸರಿ ಕಾಫಿ ಕುಡಿಯವಾ ಅಂತಾ ಹೋಟೆಲ್ ಪಕ್ಕಾ ನಿಲ್ಸಿದ್ರೆ. ನಮ್ಮನ್ನು ಬಿಟ್ಟು ಬೇರೆ ಯಾರೂ ಇಲ್ಲ. ವಾಸನೆ ಅಂಗಿತ್ತು. ಮ್ಯಾನೇಜರ್ ಮೂಗು ಮುಚ್ಕಂಡು ಕಾಸು ಇಸ್ಕಂಡಿದ್ದ. ಇಸ್ಮಾಯಿಲ್ ಬಸ್ ತೊಳೆಯಕ್ಕೆ ಅಂತಾ 500ರೂಪಾಯಿ ಕಿತ್ತಿದ್ದ. ಸರಿ ಧರ್ಮಸ್ಥಳಕ್ಕೆ ಹೋದ್ರೆ ಗೌಡಪ್ಪಂಗೆ ವೀರೇಂದ್ರ ಹೆಗಡೆ ಪರಿಚಯ ಅಂತಾ ಹೋದ. ಹೊರಗಡೆ ಇದ್ದ ಸೆಕ್ಯೂರಿಟಿ. ಲೇ ಯಾಕಲೇ ನಿನ್ನೆ ರಾತ್ರಿ ಡ್ಯೂಟಿಗೆ ಬಂದಿಲ್ಲಾ ಅಂದ. ಗೌಡಪ್ಪಂಗೆ ಆಶ್ಚರ್ಯ. ಯಾಕಲೇ ಹೆಂಗೈತೆ ಮೈಗೆ. ನೋಡಿದ್ರೆ ಗೌಡಪ್ಪನ ಮೀಸೆ ನೋಡಿ ಸೆಕ್ಯೂರಿಟಿಯೋನು ಅಂದ್ಕೊಂಡಿದ್ನಂತೆ. ಸರಿ ವೀರೇಂದ್ರ ಹೆಗಡೆಯವರು ಬಂದು ಗೌಡಪ್ಪಂಗೆ ದೇವಸ್ಥಾನದಾಗೆ ಉಣ್ಕಂಡು ಹೋಗು ಒಳ್ಳೆದಾಯ್ತದೆ ಅಂದ್ರು. ಗೌಡಪ್ಪ ಆನೆಯಿಂದ ಆಸೀರ್ವಾದ ಮಾಡಿಸ್ಕಳಕ್ಕೆ ಹೋದ್ರೆ ಮಾವುತ ನಿನ್ನನ್ನ ನೋಡಿ ಆನೆ ಹೆದರುತೈತೆ ಅಂದಾ. ಏ ಥು. ಸುಬ್ರಹ್ಮಣ್ಯಕ್ಕೆ ಹೋದ್ವಿ.ಎಲ್ಲಿ ಕಾಲಿಟ್ರೂ ಜಾರೋದು. ಇದೇನ್ಲಾ ಬಚ್ಚಲು ಆದಂಗೆ ಆಗೈತೆ ಅಂದಾ ಗೌಡಪ್ಪ. ಸರಿ ಮಾರು ಉದ್ದ ನೀರು ನೋಡ್ಕಂಡು. ಅದರಾಗೆ ಮಕ್ಕೊಂಡು ತಲೆ ನೆನಸ್ಕಂಡ್ವಿ. ದರ್ಸನಕ್ಕೆ ಹೋದ್ವಿ. ಗೌಡಪ್ಪ ದೈವ ಪರವಸ ಆಗಿದ್ದ. ಮಗನ ಕುತ್ತಿಗೆಗೆ ಹಾವು ಬಂದು ಸುತ್ಕಂಡಿತ್ತು. ನೋಡಿ ಮಾರಾಯ್ರೆ ಎಂತಾ ಭಕ್ತರು ಅಂತಾ ಗೌಡಪ್ಪಂಗೆ ಸಾನೇ ನಮಸ್ಕಾರ. ಗೌಡಪ್ಪ ಮಾತ್ರ ಕಣ್ಣು ನಿಗರಿಸಿಕೊಂಡು ಕೂತಿದ್ದ. ಇಲ್ಲಿ ಇನ್ಯಾವ ಪ್ರಾಣಿ ಐತಲಾ ಅಂದ.
ಸರಿ ಎಲ್ಲಾ ರಾತ್ರಿ ಊರಿಗೆ ವಾಪಸ್ಸು ಹೊಂಟ್ವಿ. ಸೀಟಿಗೆ ಹೊಡೆದಾಡೋವು. ಏ ಥೂ. ಕಿಟಕಿ ಸರೀ ಇಲ್ಲಾ ಅಂತಾ ಕೂಗಾಡೋವು. ಇಸ್ಮಾಯಿಲ್ ಹೊಡೆಯೋ ಸ್ಪೀಡಿಗೆ ಯಾರೂ ಸೀಟ್ನಾಗೆ ಇರ್ತಿರಲಿಲ್ಲ. ಸರಿ ಬೆಳಗ್ಗೆ 5ಗಂಟೆಗೆ ಚಾನಲ್ ಪಕ್ಕ ಬಸ್ಸು ನಿಲ್ಲಿಸಿದ. ಎಲ್ಲಾವೂ ಚಾಗೆ ಅಂತಾ ಇಳಿದ್ರೆ. ಧಪ್,ಧಪ್ ಅಂತಾ ಸವಂಡ್ ಬರೋದು. ನೋಡಿದ್ರೆ ಎಲ್ಲಾವೂ ಚಾನಲ್ನಾಗೆ ಬಿದ್ದಿದ್ವು. ಲೇ ಇಲ್ಲಿ ಯಾಕಲಾ ನಿಲ್ಲಿಸ್ದೆ. ನಮ್ದೂಕೆ ನಮಾಜಗೆ ಟೇಂ ಆಗೈತೆ ಅಂದಾ. ಸರಿ ಎಲ್ಲಾ ಬಂದ್ವಿ. ನೋಡಿದ್ರೆ ಸುಬ್ಬ, ಗೌಡಪ್ಪನೇ ಇಲ್ಲಾ. ಒಂದು ವಾರ ಆದ್ ಮ್ಯಾಕೆ ಬಂದ್ವು. ಯಾಕ್ರಲಾ. ಲೇ ಚಾನಲ್ನಾಗೆ ಬಿದ್ದು. ಅಂಗೇ ಯಾವದೋ ಊರಿಗೆ ಹೋಗಿದ್ವಿ. ಮೈಯೆಲ್ಲಾ ನೋಡಲಾ ಅಂದ ಸುಬ್ಬ. ಚಾನಲ್ನಾಗೆ ಬಿದ್ದು ಮೈಯೆಲ್ಲಾ ಕಿತ್ತು ಹೋಗಿರೋ ಡಬ್ಬದ ತರಾ ಆಗಿತ್ತು. ಅಲ್ಲಿ ಯಾರ ಹತ್ರನೋ ಬಸ್ ಚಾರ್ಜ್ ಇಸ್ಕಂಡ್ ಬಂದಿದ್ರಂತೆ. ಅವರಿಗೆ ಎಂ.ಒ ಮಾಡಿದ್ರು. ಈಗ ಪ್ರವಾಸ ಅಂದ್ರೆ ಮಳೆಗಾಲದಲ್ಲಿ ಬೇಡ ಮಾರಾಯ್ರೆ ಅಂತಾನೆ ಗೌಡಪ್ಪ.
Comments
ಉ: ಪ್ರವಾಸದ ಕತೆ
In reply to ಉ: ಪ್ರವಾಸದ ಕತೆ by prasannasp
ಉ: ಪ್ರವಾಸದ ಕತೆ
In reply to ಉ: ಪ್ರವಾಸದ ಕತೆ by manju787
ಉ: ಪ್ರವಾಸದ ಕತೆ
In reply to ಉ: ಪ್ರವಾಸದ ಕತೆ by prasannasp
ಉ: ಪ್ರವಾಸದ ಕತೆ
ಉ: ಪ್ರವಾಸದ ಕತೆ
In reply to ಉ: ಪ್ರವಾಸದ ಕತೆ by thewiseant
ಉ: ಪ್ರವಾಸದ ಕತೆ
ಉ: ಪ್ರವಾಸದ ಕತೆ
In reply to ಉ: ಪ್ರವಾಸದ ಕತೆ by ಗಣೇಶ
ಉ: ಪ್ರವಾಸದ ಕತೆ
ಉ: ಪ್ರವಾಸದ ಕತೆ
In reply to ಉ: ಪ್ರವಾಸದ ಕತೆ by gopinatha
ಉ: ಪ್ರವಾಸದ ಕತೆ
ಉ: ಪ್ರವಾಸದ ಕತೆ
In reply to ಉ: ಪ್ರವಾಸದ ಕತೆ by kavinagaraj
ಉ: ಪ್ರವಾಸದ ಕತೆ
ಉ: ಪ್ರವಾಸದ ಕತೆ
In reply to ಉ: ಪ್ರವಾಸದ ಕತೆ by GirishS
ಉ: ಪ್ರವಾಸದ ಕತೆ
In reply to ಉ: ಪ್ರವಾಸದ ಕತೆ by komal kumar1231
ಉ: ಪ್ರವಾಸದ ಕತೆ