ಬಾ ಸಖಿ ನನ್ನೀ ಮನಕೆ

ಬಾ ಸಖಿ ನನ್ನೀ ಮನಕೆ

ಬರಹ

ಕೋಟಿ ಕೋಟಿ ಭಾವಕೆ
ಕನಸಿನ ವೇದನೆಗೆ ಸಾಕ್ಷಿ ಆಗಲು ಬಾ ಸಖಿ ನನ್ನೀ ಮನಕೆ !!
ಮೋಹನ ಮುರಳಿಯ ಇಂಪಾದ ದನಿಗೆ
ಮಂಜಿನ ತಂಪಿನ ಸಿಂಚನಕೆ ಬಾ ನನ್ನೊಂದಿಗೆ !!

ಸರಿಗಮ ಕೆ ಪದನಿ ಆಗು ಬಾರೆ
ಉಸಿರ ಸ್ವರಕೆ ರಾಗವಾಗಿ ಬಾರೆ
ಸ್ಪರ್ಶದ ಅನುಭವ ವಾಗಿ ಬಾರೆ..
ಸಿಹಿಯಾದ ವೇದನೆಯಾಗಿ  ಬಾ !!

ಅಲೆಗಾಗಿ ಕಾದಿರುವ ಕಡಲಾದೆ ನಾ
ಮೋಡದ ನೀರಿಕ್ಷೆಯ ನವಿಲಾದೆ
ಸ್ವರದ ದಾಹದ ಕೊಳಲಾದೆ
ಬಳಲಿದ ಮನಕೆ ಆಸರೆಯ ಒಡಲಾಗಲು ಬಾ!!