ಬರೆಯುವ ಚಟ ಬೆನ್ನು ಹತ್ತಿ (ನಿದ್ದೆ ಹತ್ತದಾದಾಗ) ಮಾಡಿದ ಅಪರಾಧಗಳು

ಬರೆಯುವ ಚಟ ಬೆನ್ನು ಹತ್ತಿ (ನಿದ್ದೆ ಹತ್ತದಾದಾಗ) ಮಾಡಿದ ಅಪರಾಧಗಳು

ಬದುಕು

ನೆನಪಿರದ ಆರಂಭ
ಅರಿವಿಲ್ಲದ ಅಂತ್ಯದ ನಡುವೆ,
ಕನಸೆಂಬ ಬಿಸಿಲ್ಗುದುರೆಯ ಹಿಂದೆ
ಗೊತ್ತು ಗುರಿಯಿಲ್ಲದ ಅಲೆಮಾರಿಯ ಓಟ.


ಗುಲಾಭಿ

ಪ್ರೀತಿ ಪ್ರೇಮಕೆ ಸಂಕೇತ
ಗುಲಾಭಿಯೇ ಏಕೆ...?
ನವಿರಾಗಲಿ ಬದುಕು ಎಂಬ ಆಸೆಗೆ
ಹೂವಿನ ಹೋಲಿಕೆ.
ಜೊತೆಗೇ ಎಚ್ಚರಿಸುತಿದೆ ಮುಳ್ಳು
ಎಡವಿದರೆ ಮಾಯದ ಗಾಯವಾದೀತು ಜೋಕೆ


 


ನೀ ಯಾರೇ...?

ಪ್ರತಿ ರಾತ್ರಿ ನಿದಿರೆಯಲಿ ಕನಸಾಗಿ ಬರುವವಳು,
ನಾ ಕುಡಿವ ಮದಿರೆಯಲಿ ನಶೆಯಾಗಿ ಬರುವವಳು,
ನನಸಾಗಿ ಎದುರಿನಲ್ಲಿ ಬರಲೊಲ್ಲೆಯೇಕೆ....?
ಕಾಡಿದುದು ಸಾಲದೇ.... ಕೃಪೆ ತೊರೆ ಕನ್ನಿಕೆ.

Rating
No votes yet

Comments