ಇದುವೆ ಜೀವನನಾ........

ಇದುವೆ ಜೀವನನಾ........

ಕೆಲವೊಬ್ಬ ಪೋಷಕರು ತಮ್ಮ ಮಕ್ಕಳಿಗೆ ಇನ್ನಿಲ್ಲದ ಮುತುವರ್ಜಿ. ಆದರೂ ಆರೋಗ್ಯ ಹದಗೆಡತ್ತೆ. ಅದೇ ರಸ್ತೆಯ ಬದಿಯಲ್ಲಿನ ಮಕ್ಕಳ ಪೋಷಕರಿಗೆ ದಿನದ ಕೂಳು ನೋಡಿದರೆ ಸಾಕು ಎನ್ನುವಂತಿರುತ್ತಾರೆ. ಅವರ ಮಕ್ಕಳು ಎಲ್ಲೆಲ್ಲೋ ಬಿದ್ದು ಹೊರಳಾಡಿ, ಗಲೀಜಾಗಿದ್ದರೂ ಯಾವುದೇ ಖಾಯಿಲೆ ಕಸಾಲೆ ಹತ್ತಿರ ಸುಳಿದಿರುವುದಿಲ್ಲ. ಹಾಗೇ ವಿದ್ಯಾಭ್ಯಾದ ಕನಸು ಹೊತ್ತು ಮಕ್ಕಳಿಗೆ ಇನ್ನಿಲ್ಲದಂತೆ ಮನೆ ಪಾಠ, ನೂತನ ಪುಸ್ತಕಗಳು, ಓದುವಾಗ ಹಾಲು, ಹಣ್ಣು, ಓದಲಿಕ್ಕೆ ಇನ್ನಿಲ್ಲದ ವ್ಯವಸ್ಥೆ ಕಲ್ಪಿಸಿದರೂ ಮಗ ಪರೀಕ್ಷೆಯಲ್ಲಿ ಢುಂಕಿ. ಅದೇ ಮನೆಯಲ್ಲಿ ಯಾವುದೇ ಕೇರ್  ತೆಗದುಕೊಳ್ಳದ ವಿದ್ಯಾರ್ಥಿ ಡಿಸ್ಟಿಂಕ್ಷನ್.

ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಿ ಬಸ್ ಏಜೆಂಟಾಗಿಯೋ ಇಲ್ಲಾ ಯಾವುದೋ ಫೈನಾನ್ಸ್ ಕಂಪೆನಿಯಲ್ಲಿ ಪಿಗ್ಮಿ ವಸೂಲಿ ಮಾಡುತ್ತಾ ಬದುಕುತ್ತಿರುತ್ತಾನೆ. ಅದೇ ಎರಡು ಮೂರು ಸಲ ಫೇಲ್ ಆದ ವಿದ್ಯಾರ್ಥಿ ಉತ್ತಮ ಕೆಲಸದಲ್ಲಿ ಆರಾಮಾಗಿ ಇರುತ್ತಾನೆ. ಇದು ರಾಜಕೀಯದ ಒತ್ತಡವೋ ಅಥವಾ ಹಣದ ಆಮಿಷವೋ ಅದು ಬೇರೆ ಮಾತು ಆದರೆ ಆತ ಮಾತ್ರ ಸುಖವಾಗಿಯೇ ಇರುತ್ತಾನೆ.

ಕಷ್ಟಪಡುವವರು ಕೆಲವೊಂದಿಷ್ಟು ಜನನ್ನ ಬಿಟ್ಟರೆ, ಅವರ ಬಡತನ ರೇಖೆ ಮತ್ತಷ್ಟು ಕೆಳಗೆ ಹೋಗುತ್ತಲೇ ಇರುತ್ತದೆ. ಸುಖ ಪಡುವವರು ಸುಖ ಪಡುತ್ತಲೇ ಇರುತ್ತಾರೆ. ಇದರ ಬಗ್ಗೆ ಸ್ವಾಮೀಜಿಯೊಬ್ಬರು ಹೇಳಿದ ಮಾತು ನೆನಪಿಗೆ ಬರುತ್ತದೆ. ಸುಖ ಪಡುವವನು ನಂತರ ಕಷ್ಟ ಪಡುತ್ತಾನೆ. ಅದೇ ಕಷ್ಟ ಅನುಭವಿಸುವವನು ನಂತರ ಸುಖ ಪಡುತ್ತಾನೆ ಅಂದಿದ್ದರು. ಇದು ಕೆಲವೊಂದಿಷ್ಟು ಕೇಸ್ ಗಳಲ್ಲಿ ಮಾತ್ರ ಸತ್ಯವಾಗಿದೆ. ಮಿಕ್ಕ ಕೇಸ್ ಗಳು ಎಂದಿನಂತೆಯೇ ಇರುತ್ತದೆ.

ದೇಶ ತಾಂತ್ರಿಕವಾಗಿ ಸಾಕಷ್ಟು ಮುಂದುವರೆಯುತ್ತಿದೆ. ಆದರೆ ದಿನ ನಿತ್ಯದ ಜೀವನದಲ್ಲಿನ ಹಲವಾರು ವ್ಯವಸ್ಥೆಗಳು ಹಾಗೆಯೇ ಇದೆ. ಮುಂದುವರೆಯುತ್ತಲೇ ಇದೆ. ಅನ್ಯಾಯ, ಅಕ್ರಮ ಸಾಮಾನ್ಯ ಎನ್ನುವ ಮಾತು ಕೇಳಿ ಬರುತ್ತಲೇ ಇರುತ್ತದೆ. ತಿಳಿದವರೇ ಇಂತಹುದನ್ನು ಮಾಡುವುದು ಹೆಚ್ಚು ಎನ್ನುವುದು ಸಾಬೀತಾಗಿದೆ. ಹಾಗಾದರೆ ದೇಶ ಬದಲಾವಣೆ ಹಾದಿಯಲ್ಲಿ ಹೋದಾಗ ನಾವು ಬದಲಾಗಬೇಕಲ್ಲವೆ. ಆರ್ಥಿಕವಾಗಿ ಸಧೃಡರಾಗಬೇಕು. ಜೊತೆಗೆ ಸ್ವಲ್ಪ ಮಟ್ಟಿಗಾದರೂ ದೇಶದ ಅಭಿಮಾನ ಇರಬೇಕಲ್ಲವೆ. ಪಾಲಿಸುತ್ತಿದ್ದೀವಾ ಪ್ರಶ್ನೆ.

ರಾಜಕೀಯ ವ್ಯವಸ್ಥೆ ಏನಾದರೂ ಬದಲಾವಣೆ ತರುತ್ತಿದೆಯಾ. ಮತ್ತದೇ ಬಯ್ದಾಟ.

ಹಾಗಾದರೆ ಇದುವೇ ಜೀವನನಾ........

Rating
No votes yet

Comments