ಕ್ರಿಕೆಟಿನ ಮೂರ್ಖ ನಿಯಮಗಳು
ಮೊನ್ನೆ ಶ್ರೀಲಂಕಾದಲ್ಲಿ ದಿಲ್ಶನ್ ಎಂಬವನ ಸಮಯಪ್ರಜ್ನೆಯಿಂದ ಸೆಹ್ವಾಗ ನಿಗೆ ಶತಕ ತಪ್ಪಿದ ಸಂಗತಿ ನಿಮ್ಮಲ್ಲಿ ಹಲವರಿಗೆ ನೆನಪಿರಬಹುದು. ಎದುರಾಳಿಗೆ ಅತಿ ಕಡಿಮೆ ರನ್ನು ನೀಡುವುದು ಯಾವುದೇ ಬೌಲರ್ ಮಾಡಬೇಕಾದ ಕೆಲಸ. ಅಂಥ ಅವಕಾಶವನ್ನು ಬಳಸಿಕೊಳ್ಳದಿದ್ದರೆ ಅವನ ಮೇಲೆ ಮ್ಯಚ್ ಫಿಕ್ಸಿಂಗ್ ಆರೋಪ ಹೊರಿಸಬಹುದು. ಉದಾಹರಣೆಗೆ ಸೆಮಿಫೈನಲಿಗೆ ತೇರ್ಗಡೆಯಾಗಲು ರನ್ ಸರಾಸರಿ ಮುಖ್ಯ ಅಂತಿಟ್ತುಕೊಳ್ಳಿ, ಆಗ ನೋಬಾಲ್ ಮೂಲಕ ಕೇವಲ ಒಂದು ರನ್ ಬಿಡುವುದು ತಂಡದ ಹಿತದೃಷ್ಟಿಯಿಂದ ಮುಖ್ಯವೋ ಅಥವಾ ಸರಿಯಾದ ಎಸೆತ ಎಸೆದು ಬೌಂಡರಿಯೋ ಸಿಕ್ಸರೋ ನೀಡುವುದು ಮುಖ್ಯವೋ? ಆಗ ಸರಿಯಾದ ಎಸೆತ ಎ೩ಸೆದರೆ ತಂಡದ ಹಿತ ಬಲಿಕೊಟ್ಟಂತೆ ಆಗುತ್ತೆ. ಉದ್ದೇಶಪೂರ್ವಕವಾಗಿ ನೋಬಾಲ್ ಎಸೆದುದರಿಂದ ರಣದೀವ್ ಅನ್ನುವ ಎಸೆತಗಾರನಿಗೆ ಶಿಕ್ಷೆಯೂ ದಿಲ್ಶನ್ನನಿಗೆ ದಂಡವೂ ಆಯಿತು. ಕ್ರಿಕೆಟಿನ ನಿಯಮವನ್ನು ಬಳಸಿಕೊಂಡುದಕ್ಕೆ ಯಾಕೆ ಶಿಕ್ಷೆ ಕೊಟ್ಟರೋ ಅರ್ಥವಾಗುವುದಿಲ್ಲ. ಶ್ರೀಲಂಕಾದವರೇನೂ ಸಾಚಾ ಅಲ್ಲ ಅಂತ ಎಲ್ಲರಿಗೂ ಗೊತ್ತು ಬಿಡಿ. ಅದಕ್ಕೆ ಮುರಲಿಧರನ್ ಕೈ ನೇರಗೊಳಿಸಿ ಎಸೆಯುವ ಬೌಲಿಂಗ್ ಸಾಕ್ಷಿ. ಅದು ಬಿಡಿ. ಆದರೆ ಕ್ರಿಕೆಟಿನ ನಿಯಮಗಳನ್ನು ರೂಪಿಸುವವರು ಈರೀತಿಯ ಮ್ಯಾನಿಪುಲೇಶನ್ ಗೆ ಅವಕಾಶ ಇಲ್ಲದಂತೆ ಮತ್ತು ತರ್ಕಬದ್ಧವಾಗಿ ನಿಯಮಗಳನ್ನು ರೂಪಿಸಬೇಕಾದುದು ಅಗತ್ಯ. ಕ್ರಿಕೆಟಿನಲ್ಲಿ ಬಾಲ್ ಡೆಡ್ ಆಗುವವರೆಗೂ ಅದು ಆಟದಲಿ ಇರುತ್ತೆ ಅಂತ ಸಾಮಾನ್ಯ ನಿಯಮ. ಈ ಮುಖ್ಯ ನಿಯಮವನ್ನು ಪರಿಗಣಿಸದೆ ನೋಬಾಲ್ ಮೊದಲೋ ಸಿಕ್ಸರ್ ಮೊದಲೊ ಎಂಬ ಪ್ರಶ್ನೆಗಳೇ ಮುಖ್ಯವಾದಾಗ ಈ ರೀತಿಯ ಮೂರ್ಖತನಗಳು ಕಾಣುತ್ತವೆ.ಬಾಲ್ ಡೆಡ್ ಆಗೋದು ಚೆಂಡು ಬೌಂಡರಿ ಹೊರಗೆ ಹೋದಾಗ ಅಥವಾ ಓಟ ನಿಂತಾಗ. ನೋಬಾಲ್ ಎಸೆದ ತಕ್ಷಣ ಬಾಲ್ ಡೆಡ್ ಆಗುತ್ತದಾದರೆ ನೋಬಾಲ್ ನಲ್ಲಿ ರನ್ನೌಟ್ ಆಗೂದು ಹೇಗೆ? ಬಾಲ್ ಡೆಡ್ ಆಗದೆ ಗೆಲ್ಲುವುದು ಎನ್ನುವ ನಿಯಮವೇ ತಪ್ಪು.