ನಿಮ್ಮ ವಾಹನಕ್ಕೆ ಇಂಧನ ತುಂಬಿಸಿಕೊಳ್ಳುವಾಗ ಗಮನಿಸಬೇಕಾದ ಅಂಶಗಳು

ನಿಮ್ಮ ವಾಹನಕ್ಕೆ ಇಂಧನ ತುಂಬಿಸಿಕೊಳ್ಳುವಾಗ ಗಮನಿಸಬೇಕಾದ ಅಂಶಗಳು

ಬರಹ

 

ನಿಮ್ಮ ವಾಹನಕ್ಕೆ ಇಂಧನ ತುಂಬಿಸಿಕೊಳ್ಳುವಾಗ ಗಮನಿಸಬೇಕಾದ ಅಂಶಗಳು


ನಿಮ್ಮ ಕಾರ್  ಬೈಕ್ ಅಥವಾ ಇನ್ನಿತರ ಯಾವುದೇ ವಾಹನಕ್ಕೆ ಇಂಧನ ತುಂಬಿಸಿಕೊಳ್ಳಬೇಕಾದಲ್ಲಿ  ವಾತಾವರಣ ತಂಪಿರುವಾಗ ಮಾತ್ರ ಅಂದರೆ ಬೆಳಿಗ್ಗೆ ಮತ್ತು ಸಂಜೆ ಅಥವಾ ರಾತ್ರೆ ಮಾತ್ರ, ತುಂಬಿಸಿಕೊಳ್ಳಿ.
ಯಾಕೆಂದರೆ ಇಂಧನ ನಿಲ್ದಾಣದ ಹೌದಿ ಅಥವಾ ಟ್ಯಾಂಕಿಯನ್ನು ನೆಲದಡಿಯಲ್ಲೇ ನಿರ್ಮಿಸಿರುತ್ತಾರೆ,  ಮತ್ತು ವಾತಾವರಣ ತಂಪಿದ್ದಷ್ಟೂ ಇಂಧನದ ಸಾಂದ್ರತೆ ಜಾಸ್ತಿಯಿದ್ದು, ವಾತಾವರಣದ ಬಿಸಿಏರುತ್ತಿದ್ದಂತೆ ಇಂಧನ ಕೂಡಾ ತನ್ನ ಸಾಂದ್ರತೆ ಕಡಿಮೆಯಾಗಿಸಿ ಗಾತ್ರದಲ್ಲಿ ಹಿಗ್ಗುತ್ತದೆ.
        1.   ಅದಕ್ಕೇ ನೀವು ಬೆಳ್ಳಂಬೆಳಗ್ಗೆ ,ಸಂಜೆ ಅಥವಾ ವಾತಾವರಣ ತಂಪಿರುವ ಸಮಯದಲ್ಲಿ ಇಂಧನ  ತುಂಬಿಸಿಕೊಂಡರೆ ಅದು ನಿಮ್ಮ ಒಂದು ಲೀಟರ್ ಗೆ  ಅಳತೆಯಲ್ಲಿ ಸರಿಯಾದ ಒಂದು ಲೀಟರ್ ಆಗಿಯೇ ಸಿಗುತ್ತದೆ.
ಇಂಧನ ವ್ಯಾಪಾರದಲ್ಲಿ ವಾತಾವರಣದ ಉಷ್ಣತೆ ಮತ್ತು ಸಾಂದ್ರತೆ ಮುಖ್ಯ ಪಾತ್ರ ವಹಿಸುತ್ತವೆ.
ವಾತಾವರಣದ ಉಷ್ಣತೆಯಲ್ಲಿ ಒಂದು ಡಿಗ್ರಿಯ ಏರುವಿಕೆಯೂ  ಕೂಡಾ ಮುಖ್ಯ ವಿಷಯವೇ ಆಗುತ್ತದೆ.
ಯಾವ  ಇಂಧನ ನಿಲ್ದಾಣದಲ್ಲಿ ಕೂಡಾ ಉಷ್ಣತಾಸೂಚಿ ಅಥವಾ ಅದರ ಪರಿಹಾರ ಕ್ರಮವಿರುವುದಿಲ್ಲ.
       2.   ಇನ್ನೊಂದು ಮುಖ್ಯ ವಿಷಯವೆಂದರೆ ನೀವು ನಿಮ್ಮ ವಾಹನದ ಇಂಧನದ ಹೌದಿ ( ಟ್ಯಾಂಕ್) ಅರ್ಧ ಖಾಲಿ ಇರುವಾಗಲೇ ಪುನಃ ತುಂಬಿಸಿಕೊಳ್ಳಿ, ಯಾಕೆಂದರೆ ನಿಮ್ಮ ಇಂಧನದ ಹೌದಿ   ಅರ್ಧಕ್ಕಿಂತ ಜಾಸ್ತಿ ಖಾಲಿಯಿರುವಾಗ ಆ ಜಾಗವನ್ನು ಗಾಳಿ ಆಕ್ರಮಿಸಿಕೊಂಡಿರುತ್ತದೆ.ಮತ್ತು ನಿಮ್ಮ ಇಂಧನ ನೀವು ಯೋಚಿಸುವುದಕ್ಕಿಂತಲೂ ಬೇಗನೇ ಆವಿಯಾಗುತ್ತಿರುತ್ತದೆ
      3.   ಇನ್ನೊಂದು ಉಪಯುಕ್ತ ಸಲಹೆ ಎಂದರೆ ಇಂಧನದ ನಿಲ್ದಾಣದಲ್ಲಿ ಅವರು ಇಂಧನ ತುಂಬಿಸಿಕೊಳ್ಳುತ್ತಿರುವಾಗ ನೀವು ನಿಮ್ಮ ವಾಹನಕ್ಕೆ  ಇಂಧನ ಎಂದಿಗೂ ತುಂಬಿಸಿಕೊಳ್ಳಬೇಡಿ. ಯಾಕೆಂದರೆ ಅವರು ತಮ್ಮ  ಹೌದಿಯನ್ನು ತುಂಬಿಸಿಕೊಳ್ಳುತ್ತಿರಬೇಕಾದರೆ ಸಾಮಾನ್ಯವಾಗಿ ಅದರಲ್ಲಿನ ತಳದಲ್ಲಿದ್ದ   ಕಲ್ಮಷಗಳೆಲ್ಲವೂ (ತೇಲಾಡುವ ಹಾಗೂ ಮತ್ತಿತರ , ಧುಳಿಸಿ) ಮೇಲಕ್ಕೆದ್ದು ಹಾಕಿಸಿಕೊಳ್ಳುತ್ತಿರುವ ಇಂಧನದ ಮೂಲಕ ನಿಮ್ಮ ವಾಹನಕ್ಕೆ  ಸೇರುವ ಸಾಧ್ಯತೆಯಿರುತ್ತದೆ.


 ಈ ಮೇಲಿನ ವಿಷಯಗಳು ನಿಮ್ಮ ಹಣಕ್ಕೆ ಸರಿಯಾದ ಮೌಲ್ಯ ದೊರಕಿಸಿಕೊಡುವ  ಸಲಹೆಗಳೆಂದು ಭಾವಿಸುತ್ತೇನೆ.