ಹಳ್ಳಿ ಹೈದ ಪೇಟೆಗೆ ಬಂದ

ಹಳ್ಳಿ ಹೈದ ಪೇಟೆಗೆ ಬಂದ

Comments

ಬರಹ

ಚಾನಲ್ ಒಂದರಲ್ಲಿ ಹಳ್ಳಿ ಹೈದ ಪೇಟೆಗೆ ಬಂದ ಶೀರ್ಷಿಕೆಯಡಿಯಲ್ಲಿ ಬರುತ್ತಿರುವ ರಿಯಾಲಿಟಿ ಷೋ ಬಗ್ಗೆ ಒಂದೆರೆಡು ಸಾಲು.

ಹಳ್ಳಿಯಲ್ಲಿ ತಮ್ಮದೇ ರೀತಿ ರಿವಾಜುಗಳಿಗೊಳಪಟ್ಟು ನೆಮ್ಮದಿಯ ಬದುಕನ್ನು ನಡೆಸಿಕೊಂಡು ಬಂದ ಹಳ್ಳಿ ಮುಗ್ದ ಹೈದರನ್ನು ಕರೆತಂದು ಪೇಟೆಯ ಬೆಡಗಿಯರ ಕೈಗೊಂಬೆ ಮಾಡಿಸಿ ಪ್ರೇಕ್ಷಕರಿಗೆ ಮಜಾ ಉಣಿಸುವುದು ಎಷ್ಟರ ಮಟ್ಟಿಗೆ ಸರಿ. ಬಂದ ಹೈದರಲ್ಲಿ ಕೆಲವರು ಸಂಸಾರಸ್ಥರು. ಒಬ್ಬರಂತೂ (ಮಂಚೀಕೇರಿಯವರು) ಅವರ ಪತ್ನಿ ಗರ್ಭಿಣಿ, ಬಿಟ್ಟು ಬರುವುದು ಹೇಗೆ ಎಂದು ಹೇಳಿದ್ದನ್ನೂ ಬಿತ್ತರಿಸಿದ್ದಾರೆ. ಎರಡು ತಿಂಗಳ ಬೆಡಗು ಬಿನ್ನಾಣಗಳ ಬದುಕಿನ ನಂತರ ಸಿಗಬಹುದಾದ ಹಣ ಬೇರೆ ಇದೆಲ್ಲದರ ನಂತರ ಬಂದ ಇವರು ಮೊದಲಿನಂತೆ ಅಥವಾ ಇನ್ನೂ ಉತ್ತಮವಾಗಿ ತಮ್ಮ ಸಂಸಾರದೊಂದಿಗೆ ಹೊಂದಿಕೊಂಡು ಬಾಳಬಹುದೇ. ಮೊನ್ನೆ ಒಬ್ಬರಂತೂ ಒಬ್ಬ ಬೆಡಗಿಯು ಧರಿಸಿದ ಅಂಗಿ ಚಡ್ಡಿಯನ್ನೆ ನೆನಪಿನ ಕಾಣಿಕೆಯಾಗಿ ಕೇಳಿದ್ದೂ ಇದೆ. ಇದನ್ನೆಲ್ಲಾ ಗಮನಿಸಿದಾಗ ಈ ರಿಯಾಲಿಟಿ ಷೋ ಬೇಕಾಗಿತ್ತೇ?

ಇನ್ನು ಪೇಟೆ ಹುಡುಗಿ ಹಳ್ಳಿ ಲೈಫು ನಡೆಸಿಲ್ಲವೇ? ನಡೆಸಿದ್ದೇನೋ ನಿಜ. ಇದಕ್ಕೂ ಅದಕ್ಕೂ ವ್ಯತ್ಯಾಸ ಇದೆ. ಹುಡುಗಿಯರನ್ನು ಒಂದು ಕುಟುಂಬದ ಉಸ್ತುವಾರಿಗೆ ವಹಿಸಿಕೊಡಲಾಗಿತ್ತು. ಆದರೆ ಹರೆಯದ ಹೈದರನ್ನು ಹರೆಯದ ಅವರೇ ಹೇಳುವಂತೆ ಬೆಡಗಿಯರ ಕೈಗೆ ನೀಡಲಾಗಿದೆ. ಇದರ ಪರಿಣಾಮ ಏನಾಗಬಹುದು? ಇದು ಕುಟುಂಬಕ್ಕೆ - ಸಮಾಜಕ್ಕೆ  (ಅವರಿಗೆ ಹಣ ಬರುವುದರಿಂದ) ಒಳಿತಾಗಬಹುದುದೇ? ಅಥವಾ ಕಂಟಕವಾಗಬಹುದೇ? ಈ ಹೈದರು ಮುಂದೆ ಮಾನಸಿಕ ಸ್ವಾಸ್ಥ್ಯ ಇಟ್ಟುಕೊಳ್ಳ ಬಲ್ಲರೇ? ಈ ಬಗ್ಗೆ ಒಂದು ಚಿಂತನೆ ನಡೆದಿದೆಯೇ? ಒಮ್ಮೆ ಅವಘಡ ಸಂಭವಿಸಿದಲ್ಲಿ ಪರಿಹಾರ?

ಒಳಿತಾದರೆ ಸಂತೋಷ, ವ್ಯತಿರಿಕ್ತವಾದರೆ ಜವಾಬ್ದಾರಿ ಯಾರು ಹೊರಬೇಕು. ಈ ಬಗ್ಗೆ ಚಿಂತನೆ ಅಗತ್ಯ  ಈ ಬಗ್ಗೆ ಸಾಮಾಜಿಕ ಕಳಕಳಿ ಇರುವ ಸಾಮಾಜಿಕ ಕಾರ್ಯಕರ್ತರು, ಸಂಘ ಸಂಸ್ಥೆಗಳ ಗಮನ ಇರಬೇಡವೇ?

ಗುಡ್ಡ ಸುಟ್ಟಮೇಲೆ ದರಕು ಒಬ್ಬಳಿಸುವ ಬದಲು ಚಿಂತಿಸಿ ಹೆಜ್ಜೆ ಇಡಬಾರದೇ?

ನಿಮ್ಮೆಲ್ಲರ ಅಭಿಪ್ರಾಯ? ??????

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet