ಪ್ರಸ್ತುತ ಕಾಶ್ಮೀರದಲ್ಲೇನಾಗುತ್ತಿದೆ ಎಂದು ಗಮನಿಸಿದ್ದೀರಾ?

ಪ್ರಸ್ತುತ ಕಾಶ್ಮೀರದಲ್ಲೇನಾಗುತ್ತಿದೆ ಎಂದು ಗಮನಿಸಿದ್ದೀರಾ?

Comments

ಬರಹ

 

ಪ್ರಸ್ತುತ ಕಾಶ್ಮೀರದಲ್ಲೇನಾಗುತ್ತಿದೆ ಎಂದು ಗಮನಿಸಿದ್ದೀರಾ? ಪ್ರತ್ಯೇಕತಾವಾದಿ ಸಂಘಟನೆ ಹುರ್ರಿಯತ್ ಕಾನ್ಫರೆನ್ಸ್ ಕಾಶ್ಮೀರದಲ್ಲಿ ತನ್ನದೇ ಆದ ಹೊಸ ಕ್ಯಾಲೆಂಡರ್ ಬಿಡುಗಡೆ ಮಾಡಿದೆ. ಇಡೀ ದೇಶಕ್ಕೆ ಭಾನುವಾರ ರಜಾ ದಿನವಾದರೆ ಕಾಶ್ಮೀರಕ್ಕೆ ಶುಕ್ರವಾರ ರಜಾದಿನ! ಶನಿವಾರ ಅರ್ಧ ದಿನ ಶಾಲೆ ತೆರೆಯುತ್ತವೆ, ಭಾನುವಾರ ಪೂರ್ಣಕಾಲ ಪಾಠಪ್ರವಚನ ನಡೆಯುತ್ತವೆ. ಸರಕಾರಿ ಕಚೇರಿಗಳೂ ಭಾನುವಾರ ತೆರೆಯಲಾರಂಭಿಸಿವೆ. ಇಂತಹ ಕ್ಯಾಲೆಂಡರ್ ಇರುವುದು ಇಸ್ಲಾಮಿಕ್ ದೇಶಗಳಲ್ಲಿ ಮಾತ್ರ!! ಬುರ್ಖಾ ಹಾಕದೆ ಹೋದ ಹೆಣ್ಣುಮಕ್ಕಳ ತಲೆ ಬೋಳಿಸಿದ, ಆಸಿಡ್ ಹಾಕುತ್ತೇವೆ ಎಂದು ಬೆದರಿಸಿದ ಘಟನೆಗಳು ಕಾಶ್ಮೀರದಲ್ಲಿ ಮೊದಲಿನಿಂದಲೂ ಸಂಭವಿಸುತ್ತಾ ಬಂದಿವೆ. ಅಷ್ಟೇಕೆ, ಅತ್ಯಾಚಾರವೆಸಗಿದ ಮಾವನನ್ನು ಗಂಡ ಎಂದು ಒಪ್ಪಿಕೊಂಡು, ಗಂಡನನ್ನು ಮಗನೆಂಬಂತೆ ಕಾಣು ಎಂಬ ತೀರ್ಪು ಕೊಟ್ಟ ‘ಇಮ್ರಾನಾ’ ಪ್ರಕರಣ ಉತ್ತರ ಪ್ರದೇಶ ದಲ್ಲಿ ನಡೆದು ನಾಲ್ಕು ವರ್ಷಗಳೂ ಕಳೆದಿಲ್ಲ. ಸಾನಿಯಾ ಮಿರ್ಜಾಳ ಲಂಗದ ಮೇಲೇ ಕೆಂಗಣ್ಣುಬೀರಿದ ‘ಫತ್ವಾ’ ಇನ್ನೂ ಹಸಿಯಾಗಿಯೇ ಇದೆ. ಇವೆಲ್ಲಾ ಯಾವುದರ ಸೂಚನೆ? ಇಂತಹ ತಾಲಿಬಾನಿ ಮನಸ್ಥಿತಿಯ ಬಗ್ಗೆ ನಾವೂ ಭಯಪಡದೆ ಇರಲಾದೀತೆ? ಕಾಶ್ಮೀರದಂತಹ ಒಂದು ರಾಜ್ಯದಲ್ಲಿ ಮುಸ್ಲಿಮರು ಬಹುಸಂಖ್ಯಾತರಾದರೆ ಅಲ್ಲಿನ ನೀತಿ-ನಿಯಮಗಳೇ ಬದಲಾಗು ವುದಾದರೆ ಉಳಿದ ರಾಜ್ಯಗಳಲ್ಲೂ ಅದೇ ಪರಿಸ್ಥಿತಿ ಸೃಷ್ಟಿಯಾದರೆ ಕಥೆಯೇನಾದೀತು?

ಬೀಬಿ ಐಶಾಳ ಕರುಣಾಜನಕ ಕಥೆಯನ್ನು ಬಿಡಿಸಿಟ್ಟ ‘ಟೈಮ್’ ಮ್ಯಾಗಝಿನ್, ತನ್ನ ಕವರ್ ಪೇಜ್ ಮೇಲೆ “What Happens if We(America) Leave Afghanistan…” ಎಂದು ಪ್ರಶ್ನಿಸಿದೆ. ಕಾಶ್ಮೀರದಲ್ಲಾಗುತ್ತಿರುವ ಕಹಿ ಅನುಭವದ ಹಿನ್ನೆಲೆಯಲ್ಲಿ ನಮ್ಮ ದೇಶದ ಭವಿಷ್ಯದ ಬಗ್ಗೆಯೂ ಸ್ವಲ್ಪ ಯೋಚಿಸಿ… What Happens if Muslims become majority?!

 

 ವಿ ಸು : ಕೃಪೆ : ಅಂತರ್ಜಾಲ - http://pratapsimha.com

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet