ULFA ಕೋಪಕ್ಕೆ ಕಾರಣ ನಮಗೆ ಗೊತ್ತ ?

ULFA ಕೋಪಕ್ಕೆ ಕಾರಣ ನಮಗೆ ಗೊತ್ತ ?

ಇವತ್ತು ಎಲ್ಲಾ ಸಮಾಚಾರ ಚಾನಲ್ ಗಳಲ್ಲಿ ಬರೀ "ಅಸ್ಸಾಂ ಹಿಂಸಾಚಾರದ" ಸುದ್ದಿನೇ ! ಅಸ್ಸಾಂನಲ್ಲಿ ಸುಮಾರು ೬೯ ಹಿಂದಿ ಮಾತಾಡುವ ಜನರನ್ನ ULFA ಗುಂಡಿಕ್ಕಿ ಕೊಂದಿದೆ. ಇದರಿಂದ ಅಸ್ಸಾಂನಿಂದ ಹಿಂದಿಗರ ವಲಸೆ ಶುರುವಾಗಿದೆ. ಎಲ್ಲಾ ಚಾನಲ್ ಗಳಲ್ಲೂ ವಿಮರ್ಶಕರು ಬೆರಳು ತೋರಿಸ್ತಾ ಇರೋದು ಪಾಕಿಸ್ತಾನದ ISI, ಬಾಂಗ್ಲಾದೇಶ etc etc. ಪಾಕಿಸ್ತಾನದಿಂದ, ಬಾಂಗ್ಲಾದೇಶದಿಂದ ಶಸ್ತ್ರಾಸ್ತ್ರ ದೊರಕಿರಬಹುದು ಆದ್ರೆ ಈ ರೀತಿ ಹಿಂಸಾಚಾರಕ್ಕೆ ನಮ್ಮ ನೆರೆ ದೇಶದವರು ನೇರ ಕಾರಣವೆ ? ಮೊದಮೊದಲು ಇದನ್ನ ನಂಬಬೋದಿತ್ತು. ಆದ್ರೆ ಈಗ ನಾವೂ ಕೂಡ ಹಿಂದಿಗರ ಚಾಳಿಯನ್ನ ಕಣ್ಣಾರೆ ನೋಡಿದ್ದೇವೆ. ಭಾರತದಲ್ಲಿ ಎಲ್ಲೂ ಅವ್ರು ಬೇರೆ ಭಾಷೆಗೆ, ಬೇರೆ ಸಂಸ್ಕ್ರುತಿಗೆ ಮರ್ಯಾದೆ ಕೊಡೋದೇ ಇಲ್ಲ. ಅದೇನೋ ದುರಹಂಕಾರ. ಮಾತೆತ್ತಿದ್ರೆ ಹಿಂದಿ ರಾಷ್ತ್ರಭಾಷೆ ಅನ್ನೋದು, ಬೇರೆ ಭಾಷಿಕರನ್ನ ಅಪಹಾಸ್ಯ ಮಾಡೊದು - ಈ ತರ ಚಾಳಿನ ತೋರಿಸ್ತಾ ಇದ್ರೆ, ಯಾರ್ಗೆ ಆಗ್ಲಿ ಉರ್ದೋಗಲ್ವಾ ? ಒದ್ದು ಓಡುಸ್ಬೇಕು ಅಂತ ಅನ್ಸೊಲ್ವಾ ?

ನಮ್ಮ ಲಾಲೂ ಇತ್ತಿಚೆಗೆ ರೈಲ್ವೇ ಇಲಾಖೆಯಲ್ಲಿ ಹೊರಡಿಸಿದ ಮಸೂದೆಯನ್ನೇ ನೋಡಿ: ದೇಶದ ಎಲ್ಲ ರಾಜ್ಯಗಳಲ್ಲಿ ಸಂಚರಿಸುವ ರೈಲುಗಳಲ್ಲಿ ಕೇವಲ ಹಿಂದಿ ಮತ್ತು ಇಂಗ್ಲಿಷ್ ನಾಮಪಲಕ ಮಾತ್ರ ಇರಬೇಕು ಅಂತ ! ಇದಕ್ಕೂ ಮೋದಲು ಕರ್ನಾಟಕದ ರೈಲ್ವೆ ಟಿಕೆಟಿನಲ್ಲಿ ಕನ್ನಡ ಮಾಯ ಆಗಿದೆ - ಯಾರೂ ನೋಡ್ಕೊಂಡೇ ಇಲ್ಲ ! ಇದರ ಅರ್ಥ ಏನು ? ದೇಶದ ಎಲ್ಲಡೆ ರೈಲ್ವೆ ಹುದ್ದೆಗಳ್ಗೆ ಕೇವಲ ಹಿಂದಿಯವರ್ನೇ ನೇಮಕ ಮಾಡೋದು. recruitmentನ ಉತ್ತರಪ್ರದೇಶ, ಬಿಹಾರದಲ್ಲೇ ನೇಡೆಸಿ, ಅಲ್ಲೇ ಜನರನ್ನ ನೇಮಕಾತಿ ಮಾಡಿ, ಕೆಲಸಕ್ಕೆ ಬೇರೆ ಬೇರೆ ರಾಜ್ಯಗಳಿಗೆ ಕಳಿಸೋದು. ರಾಜ್ಯದ ಮೂಲ ವಾಸಿಗಳಿಗೆ ಕೆಲಸವೇ ಇಲ್ಲ !

ಇನ್ನು ರಾಷ್ತ್ರಭಾಷೆ ಅಂತ ಹೇಳಿ ಎಲ್ಲ ಕಡೆ ಬಲವಂತವಾಗಿ ಹಿಂದಿ ಹೇರಿಕೆ ಮಾಡಿ ದೇಸಿ ಭಾಷೆಗಳ Marketಗಳನ್ನ ಕ್ಷೀಣಿಸ್ತಾ ಇರೋದು. ಇವತ್ತು ಕನ್ನಡ ಚಿತ್ರರಂಗ ಮತ್ತೆ ಇತರ ಕನ್ನಡ ಮನೋರಂಜನೆ ಉದ್ದಿಮೆಗಳ ದುಃಸ್ತಿತಿಗೆ 'ಕ್ಶೀಣಿಸುತ್ತಿರೋ ಮಾರುಕಟ್ತೆನೇ' ಕಾರಣ. ನಮ್ಮ ಕನ್ನಡ ಮತ್ತು ಇತರ ಭಾಷೆಗಳನ್ನ ಕ್ಷೀಣಿಸಿ ತಾನೆ ಹಿಂದಿ ಬೆಳ್ದಿರೋದು ?

ಬೆಂಗಳೂರಲ್ಲಿ ನಾವು ಈಗೀಗ ನೋಡ್ತಾ ಇದ್ದಿವಿ - IBM ಸಾಂಸ್ಕ್ರುತಿಕ ಕಾರ್ಯಕ್ರಮದಲ್ಲಿ ಹಿಂದಿಗರು ಕನ್ನಡ ಹಾಡುವುದನ್ನ ನಿಲ್ಲಿಸಿದ್ದು, ಹಿಂದಿಗರು ಇಲ್ಲಿ ತೆರೆಯುವ ಎಲ್ಲಾ ಉದ್ದಿಮೆಗಳಲ್ಲಿ ಬರೀ ಹಿಂದಿಗರಿಗೇ ಕೆಲಸ ಕೊಡ್ತಾ ಇರೋದು, ಕನ್ನಡದ ಬಗ್ಗೆ ಅವರ ತಾತ್ಸಾರ ಮನೋಭಾವ , ಇದನ್ನೆಲ್ಲಾ

ನಮ್ಮ ದೇಶ ಕೇವಲ ಹಿಂದಿ ಮಾತಾಡವ್ರ ದೇಶ ಆಗ್ಬಿಟ್ಟಿದೆ. Parasites ತರ ಎಲ್ಲಾ ಕಡೆ ದೇಸಿ ಸಂಸ್ಕ್ರುತಿಯನ್ನ ನಾಶ ಮಾಡ್ತಾ ಇದಾರೆ. ನನಗನ್ನಿಸೋ ಪ್ರಕಾರ ಇದು ULFA ಕೋಪಕ್ಕೆ ನೇರ ಕಾರಣ. ಕೇಂದ್ರ ಸರ್ಕಾರದವ್ರು ಮಲತಾಯಿ ದೋರಣೆ ಬಿಟ್ಟು ಎಲ್ಲ ರಾಜ್ಯ ಮತ್ತು ಭಾಷೆಗಳ್ನ ಮೊದ್ಲು ಸಮಾನವಾಗಿ ನೋಡ್ಬೇಕು. ಅದು ಬಿಟ್ಟು ಎನೇನೋ ಸಬೂಬು ಹೇಳ್ಕೊಂಡ್ ಕೂತಿದ್ರೆ ಇವತ್ತು ಅಸ್ಸಾಂ, ನಾಳೆ ಕರ್ನಾಟಕ

Rating
No votes yet

Comments