ಹಳದಿ ಬೂಟಿನ ಹುಡುಗಿ...

ಹಳದಿ ಬೂಟಿನ ಹುಡುಗಿ...

ಬರಹ

ಹಳದಿ ಬೂಟಿನ ಹುಡುಗಿ. ಮುಂಬೈಗೆ ಬಂದು ಅದ್ಯಾವಾಗಲೋ ಆಗಿದೆ. ಈಗ ಕಥೆ ಹೊರಬಿದ್ದಿದೆ. ಹೌದು..! ನಿರ್ದೇಶಕ ಅನುರಾಗ್ ಕಶ್ಯಪ್ ಮುಂಬೈನ ಸತ್ಯ ಘಟನೆ ಮೇಲೆ ಒಂದು ಚಿತ್ರ ಮಾಡಿದ್ದಾರೆ. "ದಟ್ ಗರ್ಲ್ ಇನ್ ಯಲೋ ಬೂಟ್ಸ್" ಅನ್ನೊ ಚಿತ್ರದಲ್ಲಿ ಹಳದಿ ಬೂಟ್ ಧರಿಸಿದ ಯುವತಿಯ ಕರಾಳ ಕಥೆಯ ನೋವಿದೆ. ಜರ್ಮನ್ ದಿಂದ ಬಂದ ಈಕೆಯ ಕಥೆ ನಿಜಕ್ಕೂ ಸಂಕಟ ತರುತ್ತದೆ. ಮುಂಬೈನಂತಹ ಹೊಲಸು ಜಗತ್ತಿನ ಕಾಮಪೀಪಾಸುಗಳು ಮುಗ್ಧ ಹುಡುಗಿಯ ಜೀವನದ ದಿಕ್ಕೇ ಬದಲಿಸಿ ಹಾಕಿದ್ದಾರೆ....

ಅದೆಲ್ಲೋ ಕಥೆ ಓದಿದ ನಿರ್ದೇಶಕ ಅನುರಾಗ್ ಕಶ್ಯಪ್ ಚಿತ್ರ ರೂಪ ಕೊಟ್ಟಿದ್ದಾರೆ. ಮುಂಬೈನ ಸಂದಿ-ಗೊಂದಿಗಳ ಜಾಲಾಡಿ ಅಲ್ಲಿ ಕೆಟ್ಟ ದಂಧೆಯ ಕ್ರೂರ ರೂಪವನ್ನ ಚಿತ್ರದಲ್ಲಿ ಯಥಾವತ್ತು ತೋರುವ ಪ್ರಯತ್ನ ಮಾಡಿದ್ದಾರೆ. ಮಸಾಜ್ ಪಾರ್ಲರ್ ಗಳಂತಹ "ದಂಧಾ" ಜಾಗಳಲ್ಲಿಯ ನೈಜ ಚಿತ್ರಣ ನೀಡುವ ಸಾಹಸವನ್ನೂ ತೋರಿದ್ದಾರೆ. ವಿದೇಶದಿಂದ ಭಾರತಕ್ಕೆ ಬರುವ ಪರದೇಶಿಗಳ ಪಾಡನ್ನ ಭಾರತಿಯರಿಗೆ ತಿಳಿಸಲು ಒಳ್ಳೆ ಪ್ಲಾನ್ ಮಾಡಿಕೊಂಡಿದ್ದಾರೆ...

ರೀಲ್ ಕಥೆಯಲ್ಲಿ ಬರುವ ಹುಡುಗಿ ಹೆಸರು ರುಥ್. ಅಪ್ಪನನ್ನ (ನಟ ನಾಸೀರುದ್ದೀನ ಷಾ ರನ್ನ) ಹುಡುಕಿಕೊಂಡು ಭಾರತಕ್ಕೆ ಬರುತ್ತಾಳೆ. ತನ್ನಪ್ಪ ಒಬ್ಬ ಫೋಟೋಗ್ರಾಫರ್ ಅನ್ನೋದು ಬಿಟ್ರೆ, ಪತ್ತೆ ಹಚ್ಚಲು ಬೇಕಾದ ಯಾವುದೇ ಮಾಹಿತಿಗಳಿಲ್ಲದೇನೆ ರುಥ್ ಮುಂಬೈಗೆ ಬಂದಿಳಿದು ಬಿಡ್ತಾಳೆ. ನಂತರ ಎಲ್ಲವೂ ಕರಾಳ..ಕರಾಳ. ಅಷ್ಟೊಂದು ಕೆಟ್ಟದಾಗಿ ಅತಿಥಿ ಸತ್ಕಾರ ಮಾಡುತ್ತದೆ ಮುಂಬೈ. ವಿದೇಶಿ ಎಂಬುವ ಒಂದೇ ಕಾರಣಕ್ಕೆ ರುಥ್ ಳನ್ನ ಎಲ್ಲರೂ ಸುಲಿದು ಬಿಡುತ್ತಾರೆ...ಸ್ನೇಹಿತನಂತೆ ಕಂಡ ವ್ಯಕ್ತಿಯೂ ದೇಹದ ವಾಂಛೆ ತೀರಿಸಿಕೊಂಡು ಬಿಡ್ತಾನೆ ....

ಇದೆನ್ನೆಲ್ಲ ನೋಡಲು ಚಿತ್ರ ಇನ್ನು ತೆರೆಗೆ ಬಂದಿಲ್ಲ. ಇದೇ ತಿಂಗಳ ತೆರೆಗೆ ಬರುವ ಸಾಧ್ಯೆತೆನೂ ಇದೆ. ಆದ್ರೆ, ಅದಕ್ಕೂ ಮುಂಚೆ "ದಟ್ ಗರ್ಲ್ ಇನ್ ಯಲೋ ಬೂಟ್ಸ್" ಟೊರೆಂಟೋ ಇಂಟರ್ ನ್ಯಾಷ್ನಲ್ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿದೆ. ಉತ್ತಮ ಪ್ರತಿಕ್ರಿಯೆಯನ್ನೂ ಪ್ರೇಕ್ಷಕರು ನೀಡಿದ್ದಾರೆ. ಭಾರತೀಯರು ಚಿತ್ರ ನೋಡಿ ತಮ್ಮ ಮೈಂಡ್ ಸೆಟ್ ಬದಲಿಸಿಕೊಳ್ಳುತ್ತಾರೆಂಬ ಭಾರೀ ವಿಶ್ವಾಸವೂ ನಿದೇರ್ಶಕ ಕಶ್ಯಪ್ ಗಿದೆ.

ಇನ್ನೊಂದು ವಿಶೇಷತೆನೂ ಇಲ್ಲಿದೆ. ರುಥ್ ಪಾತ್ರದ ಹುಡುಗಿ ಬೇರೆ ಯಾರೂ ಅಲ್ಲ. ದೇವ್ ಡಿ ಚಿತ್ರದ ಅದೇ ಕಾಲ್ಕಿ ಕೋಚ್ಚಿನ್ ಇಲ್ಲಿ ಹಳದಿ ಬೂಟಿನ ಹುಡುಗಿ. ನೈಜ ಕಥೆಗೆ ನೈಜ್ ವಿದೇಶಿಯನ್ನೇ ನಿರ್ದೇಶಕ ಕಶ್ಯಪ್ ಆಯ್ಕೆ ಮಾಡಿಕೊಂಡಿದ್ದಾರೆ. ಆದ್ರೆ, ಕಾಲ್ಕಿ ಜರ್ಮನ್ ದಿಂದ ಬಂದವಳಲ್ಲ. ಬದಲಿಗೆ ಫ್ರೆಂಚ್ ಬ್ಯೂಟಿಯಿಕೆ. ಅದು ಹೇಗೆ ನಂಟು ಬೆಳೆಯಿತೋ ಏನೋ. ಅನುರಾಗ್ ಕಶ್ಯಪ್ ಜೊತೆಗೆ ಚೆಲುವೆ ಅನುರಾಗ ಸಂಗಮ ಬೆಳೆದು ಬಿಟ್ಟಿದೆ. ಬಾಲಿವುಡ್ ನಲ್ಲಿ ಇವರ ಮಧ್ಯೆದ ಅಫೇರ್ ಬಗೆಗಿನ ಕಥೆನೂ ಕೇಳಿ ಬರುತ್ತಿದೆ. ಹಾಗಂತ ಇದು ಅದೆಷ್ಟು ದಿನ ಉಳಿಯುತ್ತದೆಯೋ ಗೊತ್ತಿಲ್ಲ. "ದಟ್ ಗರ್ಲ್ ಇನ್ ಯಲೋ ಬೂಟ್ಸ್" ಚಿತ್ರ ಮನಸ್ಸಿನಲ್ಲಿ ಉಳಿಯೋದು ಗ್ಯಾರಂಟಿ. ಸೋ ವೇಟ್ ಫಾರ್ ಫಾರೆನ್ ಗರ್ಲ್...

- ರೇವನ್ ಪಿ.ಜೇವೂರ್