ತಿರುಕನ ನುಡಿಗಳು
"ಮೌನದಾಚರಣೆಯಲ್ಲಿ ಕೆಲವರು ಕಾಗದದ ಮೇಲೆ, ಸ್ಲೇಟಿನಮೇಲೆ ಬರೆದು ತೋರಿಸಿದರೆ ಮತ್ತೆ ಕೆಲವರು ಕೈಕಾಲು ಅಲ್ಲಾಡಿಸಿ ಅಭಿನಯಿಸಿ ತೋರಿಸುತ್ತಾರೆ. ಆದರೆ ಇವುಗಳೆಲ್ಲ ಮೌನವಲ್ಲ. ನೃತ್ಯಾಭಿನಯ; ಆದರೆ ನಿಜವಾದ ಮೌನದಲ್ಲಿ ಮನಸ್ಸು ಮೌನವಾಗಿರಬೇಕು". 'ಯೋಗಿಗಳ ಸಿದ್ದಸ್ಥಿತಿಯಲ್ಲಿ ಅವರು ಮೌನವಾಗಿರುತ್ತಾರೆ'. "ಸೃಷ್ಟಿ, ಸ್ಥಿತಿ,ಲಯ ಕರ್ತೃಗಳಾದ ಬ್ರಹ್ಮ, ವಿಷ್ಣು, ಮಶೆಶ್ವರರನ್ನು ಅವರವರ ಕಾರ್ಯಕ್ಷೇತ್ರದಲ್ಲಿ ಬೇರೆ ಬೇರೆಯಾಗಿ ಹೆಸರಿಸಿದರೂ ಮೂಲ ಚೈತನ್ಯವು ಒಂದೇ ಆಗಿರುತ್ತದೆ. ಅದೇ ಪರಬ್ರಹ್ಮ". "ಚೆನ್ನಾಗಿ ಸುಟ್ಟ ಮಡಕೆಯನ್ನು ನೀರಲ್ಲಿ ಮುಳುಗಿಸಿಟ್ಟರೆ ಅದು ಕರಗುವುದಿಲ್ಲ. ಅದೇ ಸುಡದ ಹಸಿ ಮಡಕೆಯನ್ನು ನೀರಲ್ಲಿರಿಸಿದರೆ ಅದು ಮಣ್ಣೇ ಆಗುತ್ತದೆ. ಅದರಂತೆಯೇ ಸಿದ್ಧಿಯನ್ನು ಪಡೆದ ಯೋಗಿಯು ಎಲ್ಲೇ ಇದ್ದರೂ ಆತನು ಕೆಡುವುದಿಲ್ಲ. ಅದೇ ಢೋಂಗಿ ಸನ್ಯಾಸಿಗೆ ಎಲ್ಲೂ ಬೆಲೆ ಇರುವುದಿಲ್ಲ".