ಮನೆ ಎಂದರೆ ನಿಮಗೆ ನೆನಪಾಗುವುದು ಯಾವ ಮನೆ?

Submitted by Neeramelinagulle on Tue, 09/21/2010 - 12:09
ಬರಹ

ಮನೆ ಎಂದರೆ ನಿಮಗೆ ನೆನಪಾಗುವುದು ಯಾವ ಮನೆ? ಬಹುಶ ಚಿಕ್ಕ ವಯಸ್ಸಿನಲ್ಲಿ ಆಟ ವಾಡಿದ ಮನೆ? ತಂದೆ ತಾಯಿ ಅಜ್ಜಿ ತಾತ ಜೊತೆ ಇದ್ದ ಮನೆ? ಈಗಿರುವ  ಮನೆ? ಮನೆ ಗಿಂತ ಹೆಚ್ಚಾಗಿ ಮನೆಯೊಳಗಿನ ನೆನಪುಗಳು? ಕೆಲವು ವಸ್ತು ಗಳು ಎಂದು ನಿನ್ನದಗುವುದಿಲ್ಲ ಎಂದು ಮೊದಲೇ ತಿಳಿದಿದ್ದರೆ, ಅದರ ಜೊತೆ ಗಾಡವಾದ ಸಂಭಂದ ಬೆಳೆಯುವುದಿಲ್ಲ ಅನ್ನಿಸುತ್ತೆ. ಇದು ಟೆಂಪೊರರಿ ಮನೆಗಳಿಗೂ ಅನ್ವಯ ವಾಗುತ್ತೆ. ಇನ್ನು ಆಳವಾಗಿ ಯೋಚಿಸಿದರೆ ಮನೆಗಿಂತ ಹೆಚ್ಚಾಗಿ ಮನೆಯಲ್ಲಿ ಇರುವ ವ್ಯಕ್ತಿಗಳು ಮುಖ್ಯ ಅನಿಸುತ್ತದೆ. ಸ್ವಂತ ಮನೆಯೋ ಬಾಡಿಗೆ ಮನೆಯೋ . ಚಿಕ್ಕಂದಿನಲ್ಲಿ ತಂದೆ ತಾಯಿ ಅಜ್ಜಿ ತಾತ ಹಾಗು ಒಡಹುಟ್ಟಿದವರು ಜೊತೆಯಲ್ಲಿ ಇರುತ್ತಾರೆ. ಅದು ಒಂದು ರೀತಿಯ ಪರಿಪೂರ್ಣ ಮನೆ. ಅಲ್ಲಿ ಎಲ್ಲವು ಇರುತ್ತದೆ. ಆದರೆ ಆ ವಯಸ್ಸಿನಲ್ಲಿ ತಿಳಿಯುವುದಿಲ್ಲ ಬದುಕಿನ ಎಂತ ಸಂತೋಷದ ದಿನಗಳು ಅವು ಎಂದು. ಹಾಗೆ ಮುಂದೆ ಹಾಸ್ಟೆಲ್ ಇರಬಹುದು ಅಥವಾ ಓದುವುದಕ್ಕಾಗಿ ಗೆಳಯ/ಗೆಳತಿಯರ ಜೊತೆ ಬೇರೆ ಮನೆ . ಈ ಮನೆಯಲ್ಲಿ ಸ್ವಾತಂತ್ರ್ಯ ವೂ ಸ್ವಾತಂತ್ರ್ಯ..!.ಎಷ್ಟೊತ್ತಿಗಾದರು ಮನೆಗೆ ಬರಬಹುದು ಏನಾದರು ಮಾಡಬಹುದು. ಇಲ್ಲಿಯೂ ಮನೆಗಿಂತ ಮುಖ್ಯ ವಾಗಿ ನಮಗೆ ಇಷ್ಟವಾಗುವುದು ಇದ್ದಕ್ಕಿದ್ದಂತೆ ಸಿಕ್ಕ ಸ್ವಾತಂತ್ರ್ಯ.. ಮದುವೆಯ ನಂತರ ಮತ್ತೊಂದು ಮನೆ. ಹೊಸ ಜೀವನ ಆರಂಭ ಮಾಡುವ ಮನೆ.  ಈ ಮನೆಯಲ್ಲಿ ಎಲ್ಲವು ಹೊಸತು. ಸಂಸಾರಕ್ಕೆ ಸುಸ್ವಾಗತ! ಈ ಮನೆ ಯನ್ನು ಪ್ರಪಂಚದ ಅತ್ಯಂತ ಚೆಂದದ ಮನೆಯಗಿಸುವ ಆಸೆ. ಈ ಮನೆಯಲ್ಲಿ ಇಷ್ಟವಾಗುವುದು ಹೊಸ ಜೀವನದ ಕನಸುಗಳು , ನಮ್ಮ ಪುಟ್ಟ ಮನೆ ಎಂಬ ಆಸೆ.  ಇಲ್ಲಿಂದ ಮುಂದೆ ನಮ್ಮ ಮಕ್ಕಳು ಜೊತೆಗಿರುವ ಕಾಲ. ಇಷ್ಟರಲ್ಲಿ ನಮ್ಮದೇ ಸ್ವಂತ ಮನೆ ಕಟ್ಟಿಸಿರಬಹುದು/ಕೊಂಡಿರಬಹುದು ಅಥವಾ ಬಾಡಿಗೆ ಮನೆಯಲ್ಲೇ ಜೀವನ ಕಳೆದಿರಬಹುದು. ಈ ಮನೆಯಲ್ಲಿ ನೆನಪಾಗಿ ಉಳಿಯುವುದು ನಮ್ಮ ಮಕ್ಕಳ ಪುಟ್ಟ ಪುಟ್ಟ ಹೆಜ್ಜೆಗಳು, ಅವರ ನಗು , ಅವರೊಡನೆ ಕಳೆದ ಸಮಯ. ಈ ಮನೆಯು ಇಷ್ಟವಾಗುವುದು ಮಕ್ಕಳಿಂದ. ಮುಂದೆ  ಮತ್ತೊಂದು ಜೀವನ ಚಕ್ರ ನಿಮ್ಮ ಕಣ್ಣ ಮುಂದೆ  ಓಡು ತ್ತದೆ  ..ನಿಮ್ಮ ಮಕ್ಕಳ ಬದುಕು. ಆ ಬದುಕಿನ ಚಕ್ರ ದಲ್ಲಿ  ನೀವು  ಅವರ ಜೊತೆ ಇರುವ ಸನ್ನಿವೇಶ ಬಂದರೆ ಆ ಮನೆ ನಿಮಗೆ ಇಷ್ಟವಾಗುವುದು ಮಕ್ಕಳು ಹಾಗು ಮೊಮ್ಮಕ್ಕಳು ಸಂತೋಷ ದಿಂದ ಇರುವುದನ್ನು ನೋಡಿ. ಆ ಅದೃಷ್ಟ ಇಲ್ಲವಾದರೆ ಇಳಿ ವಯಸಿನಲ್ಲಿ ನೀವು ಹಾಗು ನಿಮ್ಮ ಸಂಗಾತಿ ಇಬ್ಬರೇ . ಈ ಮನೆಯು ಬಹುಶ ಇಷ್ಟವಾಗುವುದು ನಮ್ಮ ಸಂಗಾತಿಯು ನಮ್ಮ ಜೊತೆ ಇರುವುದರಿಂದ. ಒಬ್ಬರೇ ಆದ ಮೇಲೆ? ಗೊತ್ತಿಲ್ಲ. ಈಗ ಹೇಳಿ, ನಿಮಗೆ ನೆನಪಾಗು ವುದು ಯಾವ ಮನೆ?