ಚಂಗೂಲಿ ಸ್ವಾಮಿ ರೋಡ್ ಷೋ - ಗೌಡಪ್ಪನ ಸತ್ಕಾರ
ಬೆಳಗ್ಗೆನೇ ಗೌಡಪ್ಪ ಟ್ರಾಕ್ಟರ್ ಹೊಡಕಂಡು ಹೊಂಟಿದ್ದ. ಮಗಂದು ಒಂದು ಸೈಡ್ ಬ್ಲೇಡ್ ಸೆಟ್ ಹೋಗಿತ್ತು. ಮಕ್ಕಂಡಂಗೆ ಕಾಣೋನು. ನನ್ನನ್ನು, ಸುಬ್ಬ,ನಿಂಗ,ಕಿಸ್ನ,ಕೋದಂಡನ್ನ ನೋಡಿದ್ದೇನೆ, ಗಪ್ ಅಂತಾ ನಿಲ್ಲಿಸಿದ. ಹತ್ರಲಾ ಬೇಗ ಅಂದ. ಎಲ್ಲಿಗಿರೀ ಗೌಡ್ರೆ ಅಂದಾ ಸುಬ್ಬ. ಮೊದಲು ಹತ್ತಲಾ ಅಂತಿದ್ದಾಗೆನೇ ಎಲ್ಲಾರೂ ಟ್ರಾಕ್ಟರ್ ಹತ್ತಿದ್ವಿ. ನೋಡಿದ್ರೆ ತೆಂಗಿನ ತೋಟಕ್ಕೆ ಕರೆದುಕೊಂಡು ಹೋದ. ನೋಡ್ರಲಾ ತಪ್ಪು ತಿಳಿಬೇಡ್ರಿ. ನಾಳೆ ಸಂತೆ ಐತೆ ಒಂದು ಸಾವಿರ ಎಳ್ಳೀರು ಕೊತ್ತೀನಿ ಅಂತಾ ಪಕ್ಕದ ಹಳ್ಳಿ ರಹೀಮ್ ಗೆ ಮಾತ್ ಕೊಟ್ಟಿದ್ದೆ ಕಲಾ. ನೋಡಿದ್ರೆ ಕೆಲಸಗಾರರು ಯಾರು ಬಂದಿಲ್ಲ. ಸ್ವಲ್ಪ ಸಹಾಯ ಮಾಡ್ರಿ ಅಂತಾ ಮರದಿಂದ ಎಳ್ಳೀರು ಕೀಳೋದಿಂದ, ಟ್ರಾಕ್ಟರ್್ಗೆ ಲೋಡನ್ನು ನಮ್ಮ ಕೈಲೇ ಮಾಡಿಸಿದ. ಬಾಡಿಲ್ಲಿ ಇರೋ ವಾಟರ್ ಕಂಟೆಂಟ್ಸ್ ಎಲ್ಲಾ ಹೋಗಿತ್ತು. ಇದನ್ನ ಸರಿ ಮಾಡಕ್ಕೆ ದಿನಾ 10ಲೀ ನೀರು ಕುಡಿಬೇಕು ಅಂತಿದ್ದ ಕೋದಂಡ. ಗೌಡಪ್ಪ ಮಾತ್ರ ಮರಕ್ಕೆ ಕಾಲು ಕೊಟ್ಕಂಡು ಬೀಡಿ ಹೊಡಿತಾ ನಿಂತಿದ್ದ.
ಬೇಗ ಹಾಕ್ರಲೇ ಟೇಮ್ ಆಯ್ತದೆ ಅಂತಿದ್ದ ಬಡ್ಡೆ ಐದ. ಲೇ ನೋಡಿದ್ಯಾ ಗೌಡಪ್ಪನ ಚಂಗುಲಿ ಬುದ್ದಿಯಾ, ಮಗಾ ನಮ್ಮ ಕೈಲೇ ಎಲ್ಲಾ ಕೆಲ್ಸ ಮಾಡ್ಸವ್ನೆ ಅಂತಾ ಸುಬ್ಬ ಸಾನೇ ಗೊಣಗುತ್ತಾ ಇದ್ದ. ಸರೀ ಎಳ್ಳೀರು ಎಲ್ಲಾ ಲೋಡಾತು. ನಡೀರಿ ಹಳ್ಳಿ ಕಡೆಗೆ ಅಂತಾ ಹೊಂಟ್ವಿ. ನೋಡ್ರಲಾ ನೀವು ಸಾನೇ ಕೆಲಸ ಮಾಡಿದೀರ ಅಂತಾ ಎಲ್ಲಾರಿಗೂ ಒಂದು ಮೂರು ಎಳ್ಳೀರು ಕೊಟ್ಟ. ಪಾಪ ಒಂದು 20 ಮರ ಹತ್ತಿದ್ದ ಕಿಸ್ನ, ಏದುಸಿರಾ ಬಿಡ್ತಾ ಇದ್ದ. ಮಗಾ ಎಲ್ಲಿ ಮನೆಮುಂದೆ ಕೆಂಡ ಹಾಕಿಸ್ಕಂತಾನೋ ಅಂತಾ ಭಯ ಇತ್ತು. ನಮ್ಮೂರು ಸರ್ಕಲ್ ಹತ್ರ, ದೂರದಿಂದ ಯಾವುದೋ ಕೆಂಪು ಬಾವುಟ ಕಟ್ಟಿರೋ ಅಂಬಾಸಿಡರ್ ಕಾರ್ ಬತ್ತಾ ಇತ್ತು. ನಾವು ಯಾರೋ ಸಿ.ಐ.ಟಿ.ಯುನೋರು ಅಂದ್ಕಂಡಿದ್ವಿ. ಸರ್ಕಲ್್ನಾಗೆ ಟ್ರಾಕ್ಟರ್ ನ್ನ ಗಪ್ ಅಂತಾ ನಿಲ್ಲಿಸಿದೋನೆ, ಗೌಡಪ್ಪ ಓಡು ಹೋಗಿ ಕಾರ್ ಮುಂದೆ ಮಕ್ಕೊಂಡ. ಕಾರಿನ ಗಾಲಿ ಸರಿಯಾಗಿ ಗೌಡಪ್ಪನ ತಲೆತಾವ ಬಂದು ನಿಲ್ತು. ಲೇ ಸ್ವಲ್ಪ ಹೆಚ್ಚು ಕಮ್ಮಿಯಾಗಿದ್ರೂ ನಾನು ಜೈಲಿಗೆ ಹೋಗಬೇಕಾಗಿತ್ತಲ್ಲೋ ಮಂಗ್ಯಾ ನನ್ಮಗನೆ ಅಂತಾ ಕಾರ್ ಡ್ರೇವರ್ ಬಗ್ಗಿ ನೋಡದಾ, ಗೌಡಪ್ಪ ಏಳೋಬೇಕಾದ್ರೆ ಕಾರಿನ ಬ್ಯಾನೆಟ್ ತಲೆಗೆ ಹೊಡೆದಿತ್ತು.
ಕಾರಿನಿಂದ ಕಾವಿ ಬಣ್ಣದ ನೈಟಿ ಧರಿಸಿದ ವ್ಯಕ್ತಿಯೊಂದು ಕೆಳಗಿಳಿತು. ಯಾರಪ್ಪಾ ನೀನು. ನನ್ನ ಕಾರಿಗೆ ಬಿದ್ದು ಹೊಗೆ ಹಾಕಸ್ಕಂತಾ ಇದ್ಯಲ್ಲಪ್ಪಾ, ಸಿವ,ಸಿವ ಅಂತು. ನಾನು ಮರಿಗೌಡ ಅಂತಾ ಗೌಡಪ್ಪ ಅವರ ಕಾಲು ಹಿಡುಕೊಂಡು, ಬುದ್ದಿ ನಿಮ್ಮನ್ನ ನೋಡದೆ ಸಾನೇ ದಿನಾ ಆಗಿತ್ತು. ನಿಮ್ಮ ಪಾದ ಹಳ್ಳಿಗೆ ಮಡಗಬೇಕು, ನಿಮ್ಮ ಹೈ ಹೀಲ್ಡ್ ಮರದ ಎಕ್ಕಡ ಅಲ್ಲ ಪಾದುಕೆಗೆ ಪೂಜೆ ಮಾಡಬೇಕು. ಅಂಗೇ ನೀವು ನಮ್ಮ ಹಳ್ಳಿಗೆ ಬಂದು ಆದರದ ಸತ್ಕಾರ ಸ್ವೀಕರಿಸಿ. ನಮ್ಮ ಜಲ್ಮವ ಪಾವನ ಮಾಡಿ ಸಿವನೇ ಅಂದ ಗೌಡಪ್ಪ. ಈ ಪೇಸ್ ಕಟ್ ಎಲ್ಲೋ ನೋಡಿದಿನಲಾ, ಸುಮ್ಕಿರಲಾ,
ನೋಡಲೇ ಗೌಡ, ನಾನು ಮೈಸೂರಿಗೆ ಅರ್ಜೆಂಟಾಗಿ ಹೊಂಟೀನೋ ಯಪ್ಪಾ, ಯಡಿಯೂರಪ್ಪನ ಕಾರ್ಯಕ್ರಮ ಐತಲೇ, ಅಲ್ಲಿ ಬಾಳ ಸ್ವಾಮೀಜಿ ಬತ್ತಾ ಇದಾರೆ ಬಿಡಲೇ, ಇಲ್ಲಾ ಅಂದ್ರೆ ಮಠಕ್ಕೆ ಅನುದಾನ ಬರೋದಿಲ್ಲೋ, ಅಂಗೇ ಒಂದು ಮೂರು ಟ್ರಾನ್ಸಫರ್ ಮಾಡಿಸಬೇಕು ನಾಳೆ ಬರ್ತೀನಿ ಬಿಡಲೇ ಅಂತು ನೈಟಿ ಧಾರಿ ವ್ಯಕ್ತಿ. ಈ ಪೇಸ್ ಕಟ್ ಎಲ್ಲೋ ನೋಡಿದಿನಲಾ, ಸುಮ್ಕಿರಲಾ,ಯಾರ್ರೀ ಗೌಡ್ರೆ ಇವರು ಅಂದ ಕಿಸ್ನ, ಇವರು ಹುಬ್ಬಳ್ಳಿ ಏಳುನೂರು ಮಠದ ಚಂಗೂಲಿ ಸ್ವಾಮಿ ಕನ್ರಲಾ, ನೀವು ಆಸೀರ್ವಾದ ತಗೊಳ್ಳಿ ಅಂತಾ ನಮ್ಮನ್ನೂ ಕಾಲಿಗೆ ಬೀಳಿಸಿದ. ಕಾಲ್ನಾಗೆ ಸಾನೇ ಕೊಳೆ ಇತ್ತು. ಅಂಗೇ ಇಸುಬು ಆಗಿತ್ತು. ಪಾದ ಪೂಜೆ ಮಾಡಿ ಮಾಡಿ ಕಾಲು ಪಾಚಿ ಕಟ್ಟಿದಂಗೆ ಆಗಿತ್ತು. ಐದು ರೂಪಾಯಿ ಸೈಬಾಲ್ ಹಚ್ಚಿದ್ರು. ಒಂದಪ ಕೋದಂಡನ ಮೇಲೆ ಮರದ ಚಪ್ಪಲಿ ಇಟ್ಟರು ನೋಡಿ ಮಗಂದು ತಲೆ ಮೇಲೆ ಗುನ್ನ ಹೊಡದಂಗೆ ಆಗಿತ್ತು. ಕಡೆಗೆ ಸ್ವಾಮಿ ಹತ್ತಿರ ಇದ್ದ ಪ್ರಸಾದದ್ದ ಅರಿಸಿನ, ಇಭೂತಿನೇ ಬಳಿದ್ವಿ.
ಅಲ್ರೀ ಗೌಡ್ರೆ ಹುಬ್ಬಳ್ಯಾಗೆ ಮೂರು ಸಾವಿರ ಮಠ ಕೇಳಿದೀವಿ. ಇದ್ಯಾರು ಏಳನೂರು ಅಂದಾ ಸುಬ್ಬ. ಲೇ ಅವರು 3ಸಾವಿರ, ಮಠಕ್ಕೆ ಬಾಡಿಗೆ ಕೊಡ್ತಾರೆ ಅದಕ್ಕೆ ಅದು ಮೂರುಸಾವಿರ ಮಠ ಕಲಾ ಅಂದ. ಇವರು ಊರ ಹೊರಗಿರೋ ಅವರ ಮಠಕ್ಕೆ 700ರೂಪಾಯಿ ಬಾಡಿಗೆ ಕೊಡ್ತಾರೆ ಅದಕ್ಕೆ ಇವರದು ಏಳನೂರು ಮಠ, ಅಂದೋನು 20ಸಾವಿರ ಅಡ್ವಾನ್ಸ್ ಕಲಾ ಅಂದ. ಇವರ ಪೋಟೋನ ಟೇಸನ್ ನಲ್ಲಿ ನೋಡೀದೀನಿ ಅಂದಾ ಸುಬ್ಬ. ಹೂ ಕಲಾ ಮುಂಚೆ ಈ ವಯ್ಯ ಗಾಂಜಾ ಮಾರ್ತಿದ್ದ, ಅನುಕಂಪದ ಆಧಾರದ ಮೇಲೆ ಬಿಡುಗಡೆಯಾಗಿ ಈಗ ಸ್ವಾಮಿ ಆಗಿದಾರಲಾ. ಸರಿ ಸ್ವಾಮಿ ಬರಲ್ಲ ಅಂತಾ. ಗೌಡಪ್ಪ ಬರಲೇಬೇಕು ಅಂತಾ. ಹಿಂಗೆ ಅರ್ಧಗಂಟೆ ಚರ್ಚೆ ನಡೀತು. ಮಗಾ ಡ್ರೇವರ್ ಹಂಗೇ ಒಂದ್ ಜಂಪ್ ನಿದ್ದೆ ತೆಗದಿದ್ದ. ರಾತ್ರಿಯೆಲ್ಲಾ ಡ್ರೇವಿಂಗ್ ಮಾಡಿದ್ನಂತೆ. ಯಾರಿಗಾದ್ರೂ ಡ್ರೇವರ್ ಆಗಿರಿ. ಆದ್ರೆ ಸ್ವಾಮಿಗೆ ಮಾತ್ರ ಆಗಬೇಡಿ. ಬರೀ ಹಣ್ಣು,ಹಂಪಲು,ಗೆಡ್ಡೆ ಗೆಣಸು ತಿನ್ಕಂಡು ಇರಬೇಕಾಯ್ತದೆ ಅಂತಿದ್ದ. 5ಕೆಜಿ ಡವನ್ ಆಗಿದೀನಿ. ಈಸ ಸುಗರ್ ಬಂದೈತೆ ಅಂದ. ಏ ಥೂ, ಸೇವೆ ಅನ್ನು. ಸೇವೆಗೆ ಒಂದಿಷ್ಟು ಬೆಂಕಿಹಾಕ.
ಸರಿ ಬರ್ತೀನಿ ನನ್ನನ್ನ ಬೇಗ ಕಳಿಸಬೇಕಪ್ಪ ಅಂತೂ ಸ್ವಾಮೀಜಿ. ಸರಿ ಗೌಡಪ್ಪ ಟ್ರಾಕ್ಟರ್್ನಾಗೆ ಇರೋ ಎಳ್ಳೀರೆಲ್ಲಾ ಅಲ್ಲೇ ಸುರಿದು. ಲೇ ನಿಂಗ ನೀನು ನೋಡ್್ಕಂತಾ ಇರು ಸ್ವಾಮೀಜಿಯವರನ್ನ ಊರ್ನಾಗೆ ಹಿಂಗೆ ಒಂದು ರವಂಡ್ ಹಾಕ್ಸಿ ಹೋಗಿ ಬಂದು ಬಿಡ್ತೀನಿ ಅಂದ. ಸರಿ ಸ್ವಾಮೀಜಿ ಟ್ರಾಕ್ಟರ್ ಹತ್ತಕ್ಕೆ ಅಂತಾ ನೈಟಿನಾ ಮೊಣಕಾಲು ತನಕ ಎತ್ತಿದ್ರು. ಹತ್ತಕ್ಕೆ ಆಗಲಿಲ್ಲಾ. ಇನ್ನೂ ಎತ್ತಿದರೆ ಡಿಸ್ಕೊಸಾಂತಿ ಆಯ್ತದೆ ಅಂತಾ ಕಡೆಗೆ ನಾನು, ಸುಬ್ಬ,ಗೌಡಪ್ಪ ಸೇರಿ ಸ್ವಾಮೀಜಿನಾ ಅನಾಮತ್ತಾಗಿ ಎತ್ತಿ ಟ್ರಾಕ್ಟರ್ ಒಳಗೆ ಎಳ್ಳೀರು ತರಾ ಒಗೆದ್ವಿ. ಅಮ್ಮಾ ಅಂತು ಸ್ವಾಮೀಜಿ. ನೈಟಿ ಉದ್ದ ಬಿಟ್ಕಂದು ಸಾಯಿಬಾಬಾ ಸ್ಟೈಲ್ನಾಗೆ ಒಂದು ಕೈನಾಗೆ ಕಾಂಗ್ರೆಸ್ ಹಸ್ತ ಆಸೀರ್ವಾದ ಇನ್ನೊಂದು ಕೈನಾಗೆ ಕಮಲದ ಹೂವು. ಬಿಜೆಪಿ ಕಾರ್ಯಕರ್ತರು ನೋಡಿದ್ರೆ ಎಲ್ಲಿ ಅನುದಾನ ಮಿಸ್ ಆಯ್ತದೋ ಅಂತಾ, ನಡೀಲಾ ಊರೊಳಕ್ಕೆ ಅಂತಾ ಗೌಡಪ್ಪ ಟ್ರಾಕ್ಟರ್್ನ್ನ ಹಳ್ಳಿ ಕಡೆಗೆ ಹೊಂಡಿಸಿದ.
ಕೆಟ್ಟ ಬಿಸಿಲು ಸ್ವಾಮೀಜಿ ನೈಟಿನಾ ಎತ್ಕಂಡು ಮುಖಾ ಒರೆಸ್ಕಂತಾ ಇದ್ರು. ಮುಂದೆ ನಾನು, ಸುಬ್ಬ, ಕೋದಂಡ, ದೊನ್ನೆ ಸೀನ ಎಲ್ಲಾ ಚಂಗೂಲಿ ಸ್ವಾಮಿಗಳಿಗೆ ಜಯವಾಗಲಿ. ಮಾನವ ಕುಲಕ್ಕೆ ಜಯವಾಗಲಿ ಅಂತಾ ಹೊಂಟ್ವಿ. ಸಾನೇ ಡಾನ್ಸ್, ಚಂಗೂಲಿ ಚಂಗೂಲಿ ಸ್ವಾಮೀಜಿ, ಬರೇ ಚಂಗೂಲಿ ಬುದ್ದಿ ಅಂತಾ ಹಾಡು. ಲೇ ಹಾಡು ನಿಲ್ಲಿಸ್ರಲಾ ಅಂದಾ ಗೌಡಪ್ಪ. ಯಾಕ್ರೀ, ಲೇ ಇದೇನು ಅಣ್ಣಮ್ಮದೇವಿ ಉತ್ಸವ ಏನ್ರಲಾ ಅಂದ. ಸ್ವಾಮಿ ಬಿಸಿಲ್ನಾಗೆ ನಿಂತು, ನಿಂತು ಸಾಕಾಗಿ ಹೋಗಿತ್ತು. ಮಧ್ಯಾಹ್ನ ಹನ್ನೆರೆಡು ಗಂಟೆ, ನಮ್ಮೂರು ಹೆಣ್ಣು ಐಕ್ಳು ಪಲ್ಲಕ್ಕಿ ನಿಲ್ಲಿಸದಂಗೆ ಮನೆ ಮನೆಗೂ ಟ್ರಾಕ್ಟರ್ ನಿಲ್ಲಿಸಿ ಸ್ವಾಮೀಜಿಗೆ ಪೂಜೆ ಮಾಡೋದೆಯಾ. ಸ್ವಾಮಿ ಮುಖದಾಗೆ ಲೀಟರ್ ಗಟ್ಟಲೆ ನೀರು ಇಳಿತಾ ಇತ್ತು. ಬೆವರು ಒರೆಸಕ್ಕೆ ಅಂತಾ ಕೊಟ್ಟಿದ್ದ ಟವಲ್ ಹಿಂಡಿದ್ರೆ ಒಂದು ಅರ್ಧ ಕೊಡ ಸಾಲ್ಟ್ ವಾಟರ್ ಬಂದಿತ್ತು. ಕಿಸ್ನಂಗೆ ಛತ್ರಿ ಕೊಟ್ಟು ಸ್ವಾಮಿಗೆ ಹಿಡಕಳಲೆ ಅಂದ್ರೆ ಮಗಾ ಹಿಂದಗಡೆ ಬರೋ ಫಿಗರ್್ಗೆ ಲೈನ್ ಹೊಡಿತಾ ಇದ್ಗ. ಒಂದು ಸಾರಿ ಗುಂಡ್ಯಾಗೆ ಟ್ರಾಕ್ಟರ್ ಇಳಿತು ನೋಡಿ. ಕಿಸ್ನ ಮತ್ತು ಸ್ವಾಮಿ ಟ್ರಾಕ್ಟರ್ ಹಿಂಬದಿಯಿಂದ ಹಂಗೇ ಎಗರಿಕೊಂಡು ಮಕಾಡೆ ಬಿದ್ದಿದ್ರು. ಮತ್ತೆ ಸ್ವಾಮೀಜಿನಾ ಮೂಟೆ ಚೀಲ ಎಸೆದಂಗೆ ಮತ್ತೆ ಟ್ರಾಕ್ಟರ್್ಗೆ ಹಾಕಿದ್ವಿ.
ಎಲ್ಲಾವೂ ಹಾಲು, ಬಾಳೆಹಣ್ಣು, ಮಜ್ಜಿಗೆ ಕೊಡ್ತಾ ಇದ್ರು. ಎಷ್ಟು ಅಂತಾ ಕುಡಿತಾರೆ, ಕಡೆಗೆ ಹೊಟ್ಟೆ ತೊಳಸಿ ಸ್ವಾಮೀಜಿ ಟ್ರಾಕ್ಟರ್ ಪಕ್ಕ ಹೋಗಿ ವಾಂತಿ ಮಾಡಿದ್ದೇ ಮಾಡಿದ್ದು. ಮುಂಡೇವು ಪಂಚಾಮೃತ ಅಂತಾ ಲೋಟದಾಗೆ ಹಿಡಿದು ಕೈನಾಗೆ ಹಾಕ್ಕೊಂಡು ಕುಡಿದು, ತಲೆಗೆ ಒರೆಸೋವು. ಗೌಡಪ್ಪ ಏನಲಾ ಇದು ಅಂದ. ಎಲ್ಲಾ ಸಿವನ ಪ್ರಸಾದ. ಮಧ್ಯಾಹ್ನ ಮೂರಾದ್ರೂ ಮೆರವಣಿಗೆ ಮುಗಿಲೇ ಇಲ್ಲ. ಸ್ವಾಮೀಜಿ ಮುಖ ಅರ್ಧ ಕಪ್ಪಗೆ ಮಿಕ್ಕರ್ಧ ಬೆಳ್ಳಗೆ ಕಾಣ್ತಾ ಇತ್ತು. ಮಗಂದು ಸನ್ ಸ್ಟ್ರೋಕ್ ಆಗ್ ಬಿಟ್ಟೈತೆ. ಲೇ ಮಗನೇ ಗೌಡ ನನ್ನನ್ನ ಬಿಡಲೇ ಅಂದ್ರು ಸ್ವಾಮೀಜಿ. ಅಜ್ಜರೆ ಇನ್ನು ಎರಡೇ ಕೇರಿ ಐತೆ ಆಮ್ಯಾಕೆ ನೀವು ಹೋಗಿರುವಂತೆ ಅಂದಾ ಗೌಡಪ್ಪ. ಊಟ ಬೇರೆ ಇಲ್ಲಾ, ಸ್ವಾಮೀಜಿ ಕೈನಾಗೆ ಆಸೀರ್ವಾದ ಮಾಡಿದ್ರೆ ಸಕ್ತಿ ಇಲ್ಲದೆ ಹಸ್ತ ನೆಲ ನೋಡೋದು. ಸರಿ ಮೆರವಣಿಗೆ ಮುಗೀತು. ಈಗ ಸಿದ್ದೇಸನ ಗುಡಿತಾವ ಸ್ವಾಮೀಜಿಯವರ ಆಸೀರ್ವಚನ ಅಂದಾ ಗೌಡಪ್ಪ.
ಮಗನೇ ಹೆಂಗೈತಲೇ ಮೈಗೆ. ಅಂದ ಸ್ವಾಮೀಜಿ ಟ್ರಾಕ್ಟರ್್ನಿಂದ ನೈಟಿ ಎತ್ಕಂಡು ಜಂಪ್ ಮಾಡಿ ಓಡಿದ್ದೇ ಓಡಿದ್ದು. ನಿಂತಕಳ್ರಿ ಅಂತಾ ಗೌಡಪ್ಪ ಅವರ ಹಿಂದೆ. ನೋಡಿದ್ರೆ ಸ್ವಾಮೀಜಿ ಮೊದಲು ಪೊದೆಯೊಳಗೆ ಹೋಗಿ ಆಮ್ಯಾಕೆ ಕಾರ್ ಹತ್ಕಂಡು ಹೊಂಟೋದ್ರು. ಬಿಡಲಾ ಸ್ವಾಮೀಜಿ ಆಸೀರ್ವಾದ ಸಿಕ್ತು ಅಂದ ಗೌಡಪ್ಪ. ನಿನ್ನ ಆಸೀರ್ವಾದಕ್ಕೆ ಬೆಂಕಿ ಹಾಕ. ಸ್ವಾಮೀಜಿ ಪಿಚ್ಚರ್ ಬಿಟ್ಟೈತೆ ಅಂದಾ ಸುಬ್ಬ. ಸರೀ ನಡೀರಲಾ ಎಳ್ಳೀರು ತರವಾ ಅಂತಾ ಹೋದ್ರೆ ನಿಂಗಾ ಒಬ್ಬನೇ ಕೂತಿದ್ದ. ಮಗಾ ಹೈವೇನಾಗೆ ಎಳ್ಳೀರೆಲ್ಲಾ ಮಾರಿದ್ದ. ಯಾರ ಕೈಲಿ ಕೆತ್ತಿಸಿದೆಯೆಲಾ ಅಂದ ಸುಬ್ಬ. ಸ್ವಾಮೀಜಿ ಕಾರ್ ಡ್ರೇವರ್್ಗೆ ಎರಡು ಎಳ್ಳೀರು ಕೊಟ್ಟೆ ಅವನೇ ಎಲ್ಲಾರಿಗೂ ಕೆತ್ತು ಕೊಟ್ಟ ಅಂದಾ. ಮೂರು ಸಾವಿರ ವ್ಯಾಪಾರ ಮಾಡಿದ್ದ ಗೌಡಪ್ಪಂಗೆ ಸಾವಿರ ರೂಪಾಯಿ ಕೊಟ್ಟು ಮಿಕ್ಕಿದ್ದ ಎರಡು ಸಾವಿರ ರೂಪಾಯಿನಾಗೆ ನಮಗೆಲ್ಲಾ ಕೊಟ್ಟ. ಹೆಂಗೆ ಗೌಡಪ್ಪನ ಮಂಗನ್ನ ಮಾಡಿದ್ದು ಅಂತಾನೆ ನಿಂಗ. ಈಗ ಸ್ವಾಮೀಜಿ ಏನಾದ್ರೂ ಮೈಸೂರಿಗೆ ಹೋಗಭೇಕು ಅಂದ್ರೆ ಬೈಪಾಸ್್ಲ್ಲಿ ಹೋಗ್ತಾರೆ. ಯಾಕೆ ಬೇಕು ಗೌಡಪ್ಪನ ಸಹವಾಸ ಅಂತಾ.
Comments
ಉ: ಚಂಗೂಲಿ ಸ್ವಾಮಿ ರೋಡ್ ಷೋ - ಗೌಡಪ್ಪನ ಸತ್ಕಾರ
ಉ: ಚಂಗೂಲಿ ಸ್ವಾಮಿ ರೋಡ್ ಷೋ - ಗೌಡಪ್ಪನ ಸತ್ಕಾರ
ಉ: ಚಂಗೂಲಿ ಸ್ವಾಮಿ ರೋಡ್ ಷೋ - ಗೌಡಪ್ಪನ ಸತ್ಕಾರ
ಉ: ಚಂಗೂಲಿ ಸ್ವಾಮಿ ರೋಡ್ ಷೋ - ಗೌಡಪ್ಪನ ಸತ್ಕಾರ
ಉ: ಚಂಗೂಲಿ ಸ್ವಾಮಿ ರೋಡ್ ಷೋ - ಗೌಡಪ್ಪನ ಸತ್ಕಾರ
ಉ: ಚಂಗೂಲಿ ಸ್ವಾಮಿ ರೋಡ್ ಷೋ - ಗೌಡಪ್ಪನ ಸತ್ಕಾರ
ಉ: ಚಂಗೂಲಿ ಸ್ವಾಮಿ ರೋಡ್ ಷೋ - ಗೌಡಪ್ಪನ ಸತ್ಕಾರ
In reply to ಉ: ಚಂಗೂಲಿ ಸ್ವಾಮಿ ರೋಡ್ ಷೋ - ಗೌಡಪ್ಪನ ಸತ್ಕಾರ by ramesh_K
ಉ: ಚಂಗೂಲಿ ಸ್ವಾಮಿ ರೋಡ್ ಷೋ - ಗೌಡಪ್ಪನ ಸತ್ಕಾರ