ವೈದೀಕ ...
ವೈದೀಕ ನಡುಮದ್ಯಾನದ ಸಮಯ ಇಬ್ಬರೆ ನಡೆದು ಹೊರಟಿಧ್ಧರು , ರಾಜಾಜೀನಗರದ ಒಂದನೆ ಬ್ಲಾಕಿನ ಏಳನೆ ಕ್ರಾಸಿನ ಮನೆಯಲ್ಲಿ ಈದಿನ ವೈಧೀಕ, ಅಧಕ್ಕೆ ಕರೆಯಲ್ಪಟ್ಟ ಬ್ರಾಹ್ಮಣರು ಇವರಿಬ್ಬರು. ಬೆಂಗಳೂರಿನ ಮಲ್ಲೇಶ್ವರಧ ವೈಧೀಕ ಧರ್ಮ ಶಾಲೆಯಲ್ಲಿ ಇವರ ವಾಸ . ಸಾಮಾನ್ಯವಾಗಿ ಹೊರಗೆ ಹೋಗುವದಿಲ್ಲ ಧರ್ಮ ಶಾಲೆಯಲ್ಲಿಯೆ ಸಾಕಷ್ಟು ಕಾರ್ಯಕ್ರಮಗಳು ಇರುತ್ತವೆ , ಪುರೋಹಿತ ವೆಂಕಟೇಶಯ್ಯನವರು ಯಾವುದೆ ಶ್ರಾಧ್ಧ ಒಪ್ಪಿಕೊಂಡರು ಇವರಿಬ್ಬರು ಪರಿಚಿತರು ಎಂಬಕಾರಣಕ್ಕೆಬ್ರಾಹ್ಮಣಾರ್ಥಕ್ಕೆ ಇವರನ್ನೆ ಕರೆಯುತ್ತಿಧ್ಧರು . ಇಬ್ಬರಲ್ಲಿ ಒಬ್ಬರಿಗೆ ಹೇಳಿಧರು ಸಾಕಿತ್ತು ಇಬ್ಬರು ಜೊತೆಯಾಗಿಯೆ ಹೋಗುತ್ತಿದ್ದರು .ಇಬ್ಬರಿಗು ಸಮ್ಸಾರವಿರಲಿಲ್ಲ , ಇಬ್ಬರೆ ಜೊತೆಯಾಗಿ ವೈಧೀಕ ಧರ್ಮ ಶಾಲೆಯ ಹತ್ತಿರವೆ ಮನೆ ಮಾದಿಕೊಂಡು ವಾಸವಾಗಿಧ್ಧರು.ಒಬ್ಬರ ಹೆಸರು ವಿನಾಯಕ ಜೋಯಿಸ ಇವರು ಸಾಮಾನ್ಯವಾಗಿ ಈ ವಲಯದಲ್ಲಿ ಎಲ್ಲರಿಗು ಪರಿಚಿತರು , ಪತ್ನಿಯ ಮರಣದ ನಂತರ ಒಬ್ಬಳೆ ಮಗಳಿಗೆ ಹೊರೆಯಾಗಲು ಇಷ್ಟಪಡದೆ ಇಲ್ಲಿ ಬಂದು ನೆಲೆಯೂರಿದ್ದರು , ಅಗಾಗ್ಯೆ ತಮ್ಮ ಮಗಳನ್ನು ನೋಡಿಬರಲು ಉದುಪಿಗೆ ಹೋಗಿ ಬರುತ್ತಿಧ್ಧರು, ಅದರೆ ಅದು ತುಂಬ ಅಪರೂಪ. ಇವರ ಜೊತೆಯಿರುವ ನಾರಾಯಣ ಭಟ್ಟರು ತುಂಬ ಹಳೆಯ ಪರಿಚಯವೆನಲ್ಲ, ಕೇವಲ ಎರಡುವರ್ಷಗಳಿಂದೀಚೆಗೆ ಬಂದು ಸೇರಿದವರು. ಇವರ ಹಿನ್ನಲೆ ಯಾರಿಗು ಸರಿಯಾಗಿ ತಿಳಿಯದು , ಅದರೆ ತಿಂಳಿಗೊಂದು ಸಾರಿ ಇವರು ಗುಪ್ತವಾಗಿ ಎಲ್ಲಿಗೋ ಹೋಗಿ ಬರುತ್ತಿದ್ದರು , ಕೇಳಿದಾಗ ಹೊರನಾಡು, ಶೃಂಗೇರಿ ಎಂದು ಹಾರಿಕೆಯ ಉತ್ತರ ಕೊದುತ್ತಿಧ್ಧರು . ನಾರಾಯಣ ಭಟ್ಟರ ಸಂಪಾಧನೆಯ ಉಳಿತಾಯ ಎಲ್ಲಿಗೆ ಹೋಗುತ್ತಿದೆ ಎಂದು ಏನು ಮಾದಿದರು ವಿನಾಯಕರಿಗೆ ತಿಳಿಯಾಲಾಗಿರಲ್ಲಿಲ್ಲ. ಅಲ್ಲಧೆ ನಾರಾಯಣರಿಗೆ ಸಾಧಾರಣ ಮಂತ್ರಗಳು ತಿಳಿಧಿರಲಿಲ್ಲ , ಹೇಗೊ ತಿಥಿ ಬ್ರಾಹ್ಮಣಾರ್ಥಧಲ್ಲಿ ಹೆಚ್ಚು ಬಾಯಿ ಬಿಡುವಹಾಗಿರಲಿಲ್ಲ , ಹಾಗಾಗಿ ಅದನ್ನು ನಿಭಾಯಿಸುತ್ತಿದ್ದರು. ಈ ವಿಷಯವು ವಿನಾಯಕರಿಗೆ ಚೆನ್ನಾಗಿಯೆ ತಿಳಿದಿತ್ತು , ಆದರು ಬ್ರಾಹ್ಮಣನ ಹೊತ್ತೆಪಾಡು ಎಂದು ಸುಮ್ಮನಾಗಿದ್ದರು. ಇಬ್ಬರು ಮಾತನಾಡುತ್ತ ಮನೆಯ ಹತ್ತಿರ ಬಂದರು , ವಿನಾಯಕರಿಗೆ ಮನೆ ಚೆನ್ನಗಿಯೇ ತಿಳಿದಿತ್ತು ಹಾಗಾಗಿ ಮನೆ ಹುದುಕುವ ಶ್ರಮವಿರಲಿಲ್ಲ. ನಾರಾಯಣ ಭಟ್ಟಾರಿಗೆ ಏಕೋ ಬೆಳಗಿನಿಂದಲೆ ಇಂದು ಮನಸ್ಸು ಸರಿಯಿರಲಿಲ್ಲ, ಅದಕ್ಕೆ ಯಾವುದೆ ಹೊರಗಿನ ಕಾರಣವಿರಲಿಲ್ಲ, ಅವರೊಳಗಿನ ತುಮಲ ಅವರನ್ನು ಕಾಡಿಸುತಿತ್ತು. ಯೋಚಿಸುತ್ತಿದ್ದರು ಎಷ್ಟು ದಿನ ಅಂತ ಈ ನರಕ ಅನುಭವಿಸುವುದು , ಮೊದಲೆಲ್ಲ ತುಂಬ ಸುಲುಭವಾಗಿಯೆ ಕಾಣಿಸುತ್ತಿತ್ತು. ಯಾವುಧೆ ಧೈಹಿಕ ಶ್ರಮವಿರಲಿಲ್ಲ , ಕರೆದಲ್ಲಿಗೆ ಬರುವುಧು , ಪುರೋಹಿತರು ಹೇಳಿಧಂತೆಮಾಡುವುಧು. ಕೊನೆಯಲ್ಲಿ ಒಂದು ಊಟ , ನಂತರ ದಕ್ಷಿಣೆ , ಕಷ್ಟವೇನಿಲ್ಲ ಸುಲುಭವಾಗಿಯೆ ಅಬ್ಯಾಸವಾಯಿತು ಈ ಜೀವನ. ಆದರೆ ತನ್ನ ಪರಿಸ್ಠಿಥಿ ಎಂತಹುದು? ಹೆಂಡತಿ ಮಕ್ಕಳಿಧ್ಧರು ಅವರ ಜೊತೆಯಲ್ಲಿ ಇರುವ ಹಾಗಿಲ್ಲ , ಅಲ್ಲಿ ಹೋದರು ಯಾರಿಗು ಕಾಣದಂತೆ ರಾತ್ರಿಯಲ್ಲಿ ಹೋಗಬೇಕು , ಮನೆಯಲ್ಲಿದ್ದರು ಸುತ್ತಮುತ್ತ ಯಾರಿಗು ಅನುಮಾನ ಬರದಂತೆ ಇರಬೇಕು , ಬೆಳಕು ಮೂಡುವ ಮುನ್ನ ಯಾರು ಏಳುವುದಕ್ಕೆ ಮೊದಲು ಹೊರಟು ಇಲ್ಲಿಗೆ ಬಂದು ಸೇರಿಬಿಡಬೇಕು , ಇಲ್ಲಿ ತನ್ನ ನಿಜವಾಧ ಹೆಸರು ಸಹ ಯಾರಿಗು ತಿಳಿಸುವಂತಿಲ್ಲ . ಈರೀತಿಯ ಸುಳ್ಳು ಹೆಸರು, ಸುಳ್ಳು ರೂಪಧಲ್ಲಿಯ ಜೀವನ ಇನ್ನು ಎಷ್ಟು ದಿನವೋ , ವರ್ಷವೋ ತನಗೂ ತಿಳಿಯದು. ತನಗೆ ಆತ್ಮೀಯರು ಎಂದರೆ ಸಧ್ಯಕ್ಕೆ ಈ ವಿನಾಯಕರೊಬ್ಬರೆ , ಅವರಲ್ಲಿ ತನ್ನ ಪರಿಸ್ಠಿಥಿ ಹೇಳಿಕೊಳ್ಳಲ ಅನ್ನಿಸುತ್ತೆ , ಆದರೆತಾನು ಇರುವ ಪರಿಸ್ಠಿಥಿ ಸಧ್ಯಕ್ಕೆ ಯಾರನ್ನು ನಂಬುವ ಹಾಗಿಲ್ಲ. ನಾರಾಯಣರು ನಿಟ್ಟುಸಿರು ಬಿಡುತ್ತ ವಿನಾಯಕರೊಡನೆ ಮನೆ ಪ್ರವೇಶಿಸಿದರು ಸಾಧರಣ ಎಲ್ಲ ತಿಥಿ ಮನೆಗಳಲ್ಲಿ ಕಾಣುವ ವಾತವರಣವೆ ಇಲ್ಲಿಯು ಇದ್ದು ಮನೆ ಪ್ರವೇಶಿಸುವಾಗಲೆ ನಾರಾಯಣ ಭಟ್ಟರು ಗಮನಿಸಿಧರು ಹೊರಗಡೆ ತಂತಿಯ ಮೇಲೆ ಮಡಿಯಲ್ಲಿ ಬಿಳಿಪಂಚೆಗಳನ್ನು ಒಣಗಲು ಹಾಕಿಧ್ಧರು. ಹೊರಗಡೆ ಗೋಡೆಯ ಪಕ್ಕ ಪ್ಲಾಸ್ತಿಕ್ ಚೀಲಧಲ್ಲಿ ಹಸುವಿನ ಸಗಣಿ ತಂದು ಇಟ್ಟಿದ್ದರು. ಒಳಗೆ ಪ್ರವೇಶಿಸುವಾಗಲೆ " ಓ.. ಬನ್ನಿ,ಬನ್ನಿ " ಎನ್ನುತ್ತ ವೆಂಕಟೇಶಯ್ಯನವರು ಸ್ವಾಗತಿಸಿದರು . ಅಗಲೆ ಪುರೋಹಿತರು ಬಂದಾಗಿದೆ ಎಂದುಕೊಳ್ಳುತ್ತ , ಅಲ್ಲೆ ಇಧ್ಧ ಸ್ತೀಲ್ ಕುರ್ಚಿಗಳ ಮೇಲೆ ಕುಳಿತರು. ವಿನಾಯಕರು ಸೀದಾ ಹೋಗಿ ವೆಂಕಟೇಶಯ್ಯನವರ ಪಕ್ಕ ಕುಳಿತು, ಅವರು ಸಿಧ್ಧಪಡಿಸುತ್ತಿದ್ದ ದರ್ಬೆಯ ಪವಿತ್ರಗಳನ್ನು ಹಿತ್ತಳೆಯ ತಟ್ಟೆಯಲ್ಲಿ ಜೊಡಿಸಿಧರು. ಒಳಗಿನಿಂದ ಯುವತಿಯೊಬ್ಬಳು ಎರದು ಲೋಟಧಲ್ಲಿ ಕಾಫಿ ತಂದು ಇಬ್ಬರಿಗು ಕೊಟ್ಟಳು . ಕಾಫಿ ಕುಡಿಯುತ್ತ ಒಳಗಿನ ಬೆಳಕಿಗೆ ಕಣ್ಣು ಹೊಂದಿಸಿಕೊಳ್ಳುತ್ತ ಸುತ್ತಲು ಕಣ್ಣಾಡಿಸಿಧರು. ಟೀವಿ ಮುಂತಾದ ವಸ್ತುಗಳನ್ನೆಲ್ಲ ರೂಮಿಗೆ ಸಾಗಿಸಿ , ಮಧ್ಯಧ ಹಜಾರಧಲ್ಲಿ ಸ್ಠಳ ಮಾಡಿಧ್ಧರು. ಗೋಡೆಯ ಪಕ್ಕ ನಾಲ್ಕು ಮಣೆಗಳಿಧ್ಧವು ,ಮಣೆಯ ಪಕ್ಕ ಬಾಳೆ ಎಲೆ ಇತ್ತಿಧ್ಧರು, ಮೂಲೆಯಲ್ಲಿ ನೆಲ ಹಾಳಾಗದಂತೆ ಮರಳು ಹಾಕಿ ಅಧರ ಮೇಲೆ ಇಟ್ಟಿದ್ದ ಹೋಮದಕುಂಡವನ್ನು , ಪಕ್ಕದಲ್ಲಿ ಕಟ್ಟಿಗೆಯ ಸಣ್ಣ,ಸಣ್ಣ ಕಡ್ಡಿಗಳನ್ನು ಗಮನಿಸಿ , ಯಜುರ್ವೇಧಿಗಳು ಅಂದುಕೊಂಡರು. ಒಳಗಿನಿಂದ ಕರ್ಮವನ್ನು ನೆರವೇರಿಸಬೇಕಾದ ವ್ಯಕ್ತಿ ಸ್ನಾನ ಮುಗಿಸಿ ಕಚ್ಚೆ ಧರಿಸಿ ಸಿಧ್ಧನಾಗಿ ಬಂದ ಒಳಗೆ ಕುಳಿತ ಇವರೆಲ್ಲರತ್ತ ಒಮ್ಮೆ ಧೃಷ್ಟಿ ಬೀರಿಧ, ವೆಂಕಟೇಶಯ್ಯನವರು ಅವನನ್ನು ನೋಡಿ , " ಸ್ನಾನ ಮುಗಿಸಿಧೆಯ ಶಶಿ, ನೀನು ಸ್ವಲ್ಪ ಗಾಯತ್ರಿ ಮಾಡಿ ಸಿಧ್ಧನಾಗು , ಅಷ್ಟರಲ್ಲಿ ಇವರಿಬ್ಬರು ಸ್ನಾನ ಮುಗಿಸುತ್ತಾರೆ " ಎಂದ ಅವರು , ಮತ್ತೆ ಜೋರಾದ ಧ್ವನಿಯಲ್ಲಿ , " ಶಾಮಣ್ಣನವರೆ ನೀವು ರೆಡೀನಾ? " ಎನ್ನುತ್ತ ಅಡಿಗೆಯವರನ್ನು ಕೇಳಿದರು. ಅಡಿಗೆಯವ ಸ್ವಲ್ಪ ತಲೆ ಹೊರಗೆ ಹಾಕಿ " ನಾವು ರೆಡಿ ಶಾಸ್ಥ್ರಿಯವರೆ , ನೀವು ಪ್ರಾರಂಬ ಮಾದಿಕೊಳ್ಳಿ, ಈಗ ಎಣ್ಣೆ ಒಲೆಯ ಮೇಲಿಟ್ಟೆ" ಅಂದರು . ವೆಂಕಟೇಶಯ್ಯನವರು ನಾರಯಣರತ್ತ ತಿರುಗಿ "ಭಟ್ಟರೆ , ನೀವು ಏಳಿ , ಒಂದು ಸ್ನಾನ ಮುಗಿಸಿಬಿಡಿ, ನಂತರ ವಿನಾಯಕರು ಹೋಗಲಿ ಎಂದರು. ಸರಿ ಎನ್ನುತ್ತ ನಾರಾಯಣರು ಎದ್ದು , ನಿಧಾನವಾಗಿ ತಮ್ಮ ಅಂಗಿಯನ್ನು ಕಳಚಿ, ತಾವು ಹಿದಿದು ತಂದಿದ್ದ ಬಟ್ಟೆಯ ಚೀಲಧಲ್ಲಿಟ್ಟು, ತುಂಡು ಪಂಚೆಯಲ್ಲಿ ತೆಳುವಾದ ಬಟ್ಟೆಯನ್ನು ಕೈಯಲ್ಲಿ ಹಿಡಿದು ಸ್ನಾನದ ಮನೆಯತ್ತ ಹೊರಟರು. ಸ್ನಾನಧಮನೆಯನ್ನು ಅರಸುತ್ತ ಹಿಂದೆ ಬಂದ ನಾರಾಯಣರಿಗೆ ಒಗೆಯುವ ಕಲ್ಲಿನ ಹತ್ತಿರ ಚಿಕ್ಕ ಹುಡುಗನೊಬ್ಬ ತೆಂಗಿನ ಮೊಟ್ಟೆಕಾಯಿ ಸುಲಿಯಲು ಪ್ರಯಾಸ ಪಡುತ್ತಿರುವುದು ಕಾಣಿಸಿತು , " ಏನು ಮಾದುತ್ತಿರುವೆ ಮಗು " ಎಂದು ಪ್ರಶ್ನಿಸಿದರು , ಅವನು ಕಾಯಿ ತೋರಿಸಿದ. "ಕಾಯಿ ಸುಲಿಯುವುಧು ನಾನು ನಿನಗೆ ತೋರಿಸುತ್ತೀನಿ ಕೊಡು " ಎಂದು ಕಾಯನ್ನು, ಮಚ್ಚನ್ನು ಪಡೆದು ಎರಡೆ ಹೊಡೆತದಲ್ಲಿ ಕಾಯನ್ನು ಸುಲಿದು ಅವನಿಗೆ ಕೊಟ್ಟರು. ಅವನು ಇವರ ಕೌಶಲ್ಯಕ್ಕೆ ಬೆರಗಾಗಿ ಇವರತ್ತಲೆ ನೋಡುತ್ತಿದ್ದ , ಇವರು ಹೆಮ್ಮೆಯಿಂದ ಕೈಯನ್ನು ನೋದಿಕೊಂಡರು , ತಮ್ಮ ಕೈಯಲ್ಲಿಧ್ಧ ಮಚ್ಚು ನೋದುತ್ತಲೆ ವಿಧ್ಯುತ್ ತಗಲಿದವರಂತೆ ಹೆದರಿ ಮಚ್ಚನ್ನು ಅಲ್ಲಿಯೆ ನೆಲದ ಮೇಲೆ ಹಾಕಿದರು. ನಂತರ ಯಾರಾದರು ತಮ್ಮನ್ನು ಗಮನಿಸಿದರ ಅಂತ ಸುತ್ತಲು ನೋಡಿದರು . ಇವರಿಗೆ ಸ್ನಾನದಮನೆ ತೋರಿಸಲು ಬಂದ ವಿನಾಯಕರು ಇವರತ್ತಲೆ ನೋಡುತ್ತ ನಿಂತಿರುವುಧು ಕಾಣಿಸಿತು, ಅಲ್ಲದೆ ರೂಮಿನ ಒಳಗಿನಿಂದ ತಮ್ಮನ್ನು ಯಾರೋ ಗಮನಿಸುತ್ತಿದ್ದಾರೆ ಅನ್ನಿಸಿತು. ಗಾಬರಿ ಬಿಧ್ಧವರಂತೆ ನಾರಾಯಣರು , ನಾನು ಸ್ನಾನ ಮುಗಿಸುತ್ತೇನೆ ಎಂದು ತೊದಲುತ್ತ, ಸ್ನಾನದ ಮನೆಗೆ ಹೋಗಿ ಒಳಗಿನಿಂದ ಬಾಗಿಲು ಹಾಕಿಕೊಂಡರು. ಮುಂದುವರೆಯುತ್ತದೆ>>