ವಿಚಾರ-ವಿ(ಮಾ)ನಿಮಯ
ಭಾಗ ೩
"ಪೇಪರ್ ಓದಿದ್ದು ಸಾಕು. ಸ್ನಾನ ಮಾಡಿ, ಅದೇನೋ ಘನ ಕಾರ್ಯಕ್ಕೆ ಹೋಗಬೇಕು ಅಂತಿದ್ದರಲ್ಲ. ಏಳಿ" ಪದ್ದಮ್ಮನವರು ಯಜಮಾನರಿಗೆ ಕಾಫಿ ಕೊಡುತ್ತ ಗದರಿದರು.
ಯಜಮಾನರು ವಾಕಿಂಗ್ ಮುಗಿಸಿ, ಹಾಲು ತಂದ ಮೇಲೆ ಜೊತೆಯಲ್ಲಿ ಪದ್ದಮ್ಮನವರು ಕಾಫಿ ಕುಡಿಯುತ್ತಿದ್ದರು. ಯಾವುದೇ ಕಾರಣಕ್ಕೊ ಈ ಪರಿ
ಪ್ರೀತಿ, ಪ್ರೇಮ, ಪ್ರಣಯ ಅಂದ್ರೆ ಇದೇ ಅನ್ನಿಸುತ್ತೆ. ವಯಸ್ಸಾದರೊ, ಎಷ್ಟು ಖಾಳಜಿ. ಆ ಬ್ಯೆಗುಳದಲ್ಲೂ ಹಿತ. ಈ ವ್ರದ್ದ ದಂಪತಿಗಳದ್ದು ಆನ್ಯೋನ್ಯ ದಾಂಪತ್ಯ.
ಶ್ಯಾಮರಾಯರದು ಆಗ ಒಟ್ಟು ಕುಟುಂಬ. ಈ ಮನೆಗೆ ೧೩ನೇ ವಯಸ್ಸಿಗೆ ಮದುವೆಯಾಗಿ ಬಂದಿದ್ದರು ಪದ್ದಮ್ಮ.
೩ ಜನ ಮ್ಯದುನರು ಅವರ ಸಂಸಾರ, ಮಕ್ಕಳು, ಅತ್ತೆ, ಮಾವ ಹೀಗೆ, ಪದ್ದಮ್ಮನವರದು ಈ ಸಂಸಾರಕ್ಕೆ ಅವಿರತ ಶ್ರಮ. ನಿಸ್ವಾರ್ಥ ಸೇವೆ.
ಯಜಮಾನರ ಮೇಲೆ ಬಹಳ ಪ್ರೀತಿ, ಗೌರವ. ಶ್ಯಾಮರಾಯರದು ಬಹಳ ಮ್ರುದು ಸ್ವಭಾವ. ಒಳ್ಳಯ ಮನುಷ್ಯ. ಯಾರಲ್ಲೂ ತಪ್ಪು ಕಾಣುತ್ತಿರಲಿಲ್ಲ.
ದಿನವೂ ಅಫೇಸಿಗೆ ನಡೆದು ಕೊಂದು ಹೋಗಿ ಬರುವಾಗ ಉಳಿಸಿದ್ದ ಬಸ್ ಛಾರ್ಜಿನಲ್ಲಿ ತರಕಾರಿಯೋ ಅಥವಾ ಹಣ್ಣೋ ತರುತ್ತಿದ್ದರು. ಬಹಳ ಶ್ರಮವಹಿಸಿ ಮಕ್ಕಳನ್ನು
ಬೆಳಿಸಿ, ಉನ್ನತ ವಿದ್ಯಾಭ್ಯಾಸವನ್ನು ಕೊಡಿಸಿದ್ದರು.
ಪದ್ದಮ್ಮನವರದು ಸಾಂಪ್ರಾದಾಯಿಕ ಆಚಾರ ವಿಚಾರ. ಯಾವುದೇ ಹಬ್ಬ ಹುಣ್ಣಿಮೆಯಾದರು ಅದಕ್ಕೆ ತಕ್ಕಂತೆ ಆಚರಣೆ. ಯಾವುದಕ್ಕೊ ಲೋಪ ಬರದಂತೆ ಹೆಚ್ಚಿನ ಖರ್ಚಿಲ್ಲದಂತೆ ಆಚರಣೆ. ಸಂಸಾರಕ್ಕೆ ಯಾವುದೇ ತೊಂದರೆಯಾಗದಂತೆ ನಡೆಸಿಕೊಂಡು ಹೋಗುತ್ತಿದ್ದರು.
ಯವುದೇ ರೀತಿಯ ಪರಮರ್ಶೆಮಾಡುವ ಬುದ್ದಿವಂತಿಕೆಯಾಗಲೀ ಕುಹಕವಾಗಲಿ ಇಲ್ಲದ ನಿರ್ಮಲ ಮನಸ್ಸಿನ ಹೆಂಗಸು ಪದ್ದಮ್ಮ.
ಮಕ್ಕಳಿಗೆ ಏನೂ ತೂಂದರೆಯಾಗದೆ , ಅವರ ವಿಧ್ಯಾಭ್ಯಾಸಕ್ಕೆ ಎಲ್ಲಾ ರೀತಿಯಲಲ್ಲೂ ಸಹಕರಿಸಿ ಎಲ್ಲರೂ ಉನ್ನತ ಹುದ್ದೆಗೆ ಬರುವಲ್ಲಿ ಪದ್ದಮನವರ ಶ್ರಮ ಹಾಗೂ ಉದ್ದೇಶ ಬಹಳ ಮುಖ್ಯವಾದ್ದದ್ದು.
" ಏನ್ ಪದ್ದಮ್ಮ ಒಂದು ವಾರದಿಂದ ಕಾಣಿಸಲೇ ಇಲ್ಲಾ ನೀವು ದೇವಸ್ಥಾನದಲ್ಲಿ" ಅಂತ ಅರಚುತ್ತಾ ಬಂದರು ಜಯಮ್ಮ.
"ಬನ್ನಿ ಜಯಮ್ಮ, ಯಾಕೋ ಕಾಲು ನೋವು ಜಾಸ್ತಿಯಾಯ್ತು. ಒಂದು ಹತ್ತು ದಿನ ಆಯ್ತು, ಹೋಗ್ತಾನೆ ಇಲ್ಲಾ ಹಾಳಾದ್ದು. ಮನೆ ಪೂರ್ತಿ ಓಡ್ದಾಡ್ತೀನಿ ಅಷ್ಟೆ"
"ಯಾಕೆ, ನಿಮ್ಮ ಮಗ ಸೊಸೆ ಇಲ್ವಾ? ಡಾಕ್ಟರ್ ಹತ್ತಿರ ತೋರಿಸಿಕೂಂಡು ಬನ್ನಿ" ಎಂದು ಓರೆ ನೋಟ ಬೀರಿದರು ಸೊಸೆ ಸುಮತಿಯ ಕಡೆ.
ಅಲ್ಲೇ ಸಂಧ್ಯಾವಂದನೆಗೆ ಕೂತ್ತಿದ್ದ ಸತೀಶ ಜಯಮ್ಮ ನವರನ್ನು ದುರುಗುಟ್ಟಿ ನೋಡಿದ.
ಇಲ್ಲದ ತಕರಾರು ತಂದಿಟ್ಟರು ಜಯಮ್ಮ ಎಂದು ಮನದಲ್ಲೇ ಅರಿತ ಪದ್ದಮ್ಮ
"ನಿಮ್ಮ ಯಜಮಾನರು ಹುಷಾರಾಗಿದ್ದಾರೇನ್ರಿ" ಎಂದು ಮಾತು ಬದಲಿಸಿದರು.
"ಅಯ್ಯೋ ಅವರು ಯಾವತ್ತು ಹುಷಾರಾಗಿದ್ರು ಸದ್ಯ. ಏನೇ ಔಷಧಿ ಕೊಡಿಸಿದರೂ ಏನು ಪ್ರಯೋಜನ ಇಲ್ಲಾ. ಗುರುಲು ನಿಲ್ಲಲ್ಲಾ. ಮಗ ಬ್ಯೆಯ್ಯೋದು ಬಿಡಲ್ಲ." ಎಂದು ಏನೋ ನೆನಪು ಮಾಡಿಕೊಂಡವರಂತೆ ಹೊರಟರು. ಸಧ್ಯ ಹೊರಟರಲ್ಲಾ ಎಂದು ನಿಟ್ಟುಸಿರುಬಿಟ್ಟರು ಪದ್ದಮ್ಮ.
"how many times I have told, don't allow that lady inside" ಶುರು ಹಚ್ಚಿದ ಸತೀಶ.
"ಅಲ್ಲಾ ಅತ್ತೆ ಕಾಲು ನೋವು ಅಂತ ಪಕ್ಕದ ಮನೆಯಿಂದ ತಿಳ್ಕೋಬೇಕ ನಾವು" ಎಂದಳು ಸುಮತಿ.
ಮನೆಯಲ್ಲಿ ಓಡಾಡಲು ಆಗದೇ ಶ್ರಮ ಪಟ್ಟು ನಡೆಯುತ್ತಿದ್ದರೂ ತಿಳಿಯಲಿಲ್ಲ ನಿಮಗೆ ಎಂದು ಮನಸ್ಸಿನಲ್ಲೇ ನೂಂದುಕೊಂಡರು ಪದ್ದಮ್ಮ.
ಪದ್ದಮ್ಮನವರಿಗೆ ಹಳಬರ್ ಸ್ನೇಹ ಹೆಚ್ಚು. ಅಗ್ಗಾಗ್ಗೆ ಅಕ್ಕ ಪಕ್ಕದ ಮನೆಯವರು ಬಂದು ಮಾತಾಡಿಸಿಕೂಂದು ಹೋಗುತ್ತಿದ್ದರು. ಅದಕ್ಕೆಲ್ಲಾ ಸತೀಶನ ಆಕ್ಷೇಪಣೆ ಇತ್ತು.
ಶ್ಯಾಮರಾಯರು ಸ್ನಾನ ಮುಗಿಸಿ ಬಂದರು.
"ಅತ್ತೆನಾ ಡಾಕ್ಟರ್ ಹತ್ತಿರ ಕರಕೊಂಡು ಹೋಗಿ ಇವತ್ತು. ಕಾಲು ನೋವಂತೆ. ಹಾಗೆ ಬಿ ಪಿ , ಶುಗರ್ ಚೆಕ್ ಮಾಡಿಸಿ" ಎಂದು ಆಜ್ಞಾಪಿಸಿದಳು ಸುಮತಿ
"ಒಂದು ತಿಂಗಳಾಯಿತು. ಕಾಲು ನೋವು ಬಂದು. ಹಾಗೇ ಅನುಭವಿಸುತ್ತಿದ್ದಾಳೆ. ಪಾದ ಎರಡೊ ನೋವು ಬಂದು ಒದ್ದಾಡ್ತಿರುತ್ತಾಳೆ. ಆ ನೋವಿಗೆ ಸೂಂಟದವರೆಗೂ
ಚೆಳಕು ಹೂಡಿಯುತ್ತೆ ಅಂತ ಅಂತಿದ್ದಳು" ಎಂದು ಮಗನ ಪ್ರತಿಕ್ರಿಯೆಗೆ ಎದುರುನೋಡಿದರು ಶ್ಯಾಮರಾಯರು.
"These people never understands. I have lot of pressure at office. They should take care of themselves. How much I can do?" ಹೆಂಡತಿಯೊಂದಿಗೆ ಗೊಣಗಿದ ಸತೀಶ.
"ನೀವು ಸುಮ್ನಿರಿ, ನಾನು ಹೇಳ್ತೀನಿ. ಅವರ ಅವರ ಕೆಲಸ ಅವರೇ ಮಾಡಿಕೊಳ್ಳಬೇಕು, ಎಲ್ಲಾದಕ್ಕೊ ಡಿಪೆಂಡ್ ಆದ್ರೆ ಆಗಲ್ಲ" ಎಂದ ಸುಮತಿ ಮಾತುಗಳು ಪದ್ದಮ್ಮನವರ ಕಿವಿಗೆ ಬಿತ್ತು.
ಅವರ ಕಣ್ಣಾಲಿಗಲು ತುಂಬಿದವು. ಹಳೆಯ ನೆನಪುಗಳು ಮನದಲ್ಲಿ ಸುಳಿದಾಡಿದವು.
ಇದೇ ಸತೀಶನಲ್ಲವೆ ಮಲೇರಿಯಾ ಬಂದಾಗ ನಾನು ದಿನವೊ ನಿದ್ದೆ ಕೆಟ್ಟು ನೋಡಿಕೊಂಡಿದ್ದು. ಅವನ ಪರೀಕ್ಷಾ ಸಮಯದಲ್ಲಿ ಉರಿಬಿಸಿಲಲ್ಲಿ ಕಾಲೇಜಿನ ಗೇಟಿನಲ್ಲಿ ನಾ ಕಾದು ಕುಳಿತಿದ್ದು. ಅವನ ಎಲ್ಲಾ ರೀತಿಯ ಅತಿರೀಖವನ್ನೊ ಸಹಿಸಿಕೂಂಡಿದ್ದು.
ಇದೇ ಸತೀಶನಲ್ಲವೆ, ನಾನು ಹಠ ಮಾಡಿ, ಮನೆಯವರೆಲ್ಲರ ವಿರೋದದ ಮಧ್ಯೆ ಕಾಲೇಜಿಗೆ ಸೇರಿಸಿದ್ದು.
ಆಂದಿನಿಂದ ಇಂದಿನವರೆಗೂ ಯಜಮಾನರಿಗೆ ಮಾತು ಕೊಟ್ಟಂತೆ ನನ್ನ ಯಾವ ಇಚ್ಛೆಯಾನ್ನೂ ಒತ್ತಾಯಿಸದೆ ಮಕ್ಕಳ ಏಳಿಗೆಗಾಗಿ ಶ್ರಮಪಟ್ಟೆನಲ್ಲ.
ನಾವು ಮಕ್ಕಳನ್ನು ಅವಲಂಬಿಸಬಾರದು. ಇದೆಲ್ಲಾ ಸಹಜ . ಯಾಕೆ? ನಾನು ತಾಯಿ. ಕರುಣಾಮಯಿ? ಕ್ಷಮಯಾ ಧರಿತ್ರಿ? ತುಂಬಾ ಮನಸ್ಸಿಗೆ ನೋವಾಯಿತು.
ಶ್ಯಾಮರಯರು ಪದ್ದಮ್ಮನವರನ್ನು ಗಮನಿಸಿ, ಹನ್ನೊಂದು ಘಂಟೆಗೆ ಹೋಗೋಣ ಡಾಕ್ಟರ ಬಳಿ ಎಂದರು.
"ಇಂತಹವರು ಒಳ್ಳೆಯವರು, ಇಂತಹವರು ಕೆಟ್ಟವರು ಆಂತ ಅನ್ನಬೇಡ. ದೇವರು ಎಲ್ಲರಿಗೂ ಕಾಲನುಸಾರ ಬುದ್ದಿ ಕೊಡ್ತಾನೆ" ಅಂತ ಅವರ ಅಜ್ಜಿ ಹೇಳುತ್ತಿದ್ದ ಕಿವಿ ಮಾತನ್ನೇ ರೊಢಿಸಿಕೂಂಡಿದ್ದರು ಶ್ಯಾಮರಾಯರು.
http://sampada.net/article/28301