ಆಂಗ್ಲ ಕವಿ Robert Browning ಳ ಪತ್ನಿ ಏಲಿಜಬೆಥ್ ಬ್ರೌನಿಂಗ್ ಳ ಕವಿತೆ ಯ ಭಾವಾನುವಾದ
ಹೇಗೆ ಪ್ರೀತಿಸಲಿ?
ಹೇಗೆ ಪ್ರೀತಿಸಲಿ ನಿನ್ನನು?
ತಾಳು ಮಾರ್ಗಗಳ ಶೋಧಿಸುವೆ
ಪ್ರೀತಿಸುವೆ ನಾ ನಿನ್ನನು ನಿನ್ನಾಳ, ಅಗಲ, ಎತ್ತರಕ್ಕೆ
ಪ್ರೀತಿಸುವ ಧ್ಯೇಯಗಳು ವರದಾನವಾಗುವುದೇ ಆಗ
ನನ್ನಾತ್ಮ ನಿನ್ನ ಸ್ಪರ್ಶಿಸಿ ಭಾವನೆಗಳು ವಿಸರ್ಜನೆಯಾದಾಗ
ಪ್ರೀತಿಸುವೆ ನಾ ನಿನ್ನನು ಪ್ರತಿದಿನದ ಬೇಕುಗಳ ಮಟ್ಟಕ್ಕೆ
ಮುಂಜಾನೆ ಸೂರ್ಯೋದಯದಿಂದ ರಾತ್ರಿ ಹಣತೆ ಹಚ್ಚುವವರೆಗೆ
ಪ್ರೀತಿಸುವೆ ನಾ ನಿನ್ನನು ಹಕ್ಕುಗಳಿಗೆ ಹೋರಾಡುವವನಂತೆ ಸ್ವತಂತ್ರವಾಗಿ
ಪ್ರೀತಿಸುವೆ ನಾ ನಿನ್ನನು ನಿರ್ಮಲವಾಗಿ
ಬಳಕೆಯಲ್ಲಿರುವ ಅದೇ ಹಳೆ ಶೈಲಿಯಲ್ಲಿ.
ಹೊಗಳಿಕೆಗೆ ತಿರುಗದಿರಲಿ ಗೆಳೆಯ
ಹಳೆಯ ನೋವುಗಳು ಜೊತೆಗೆ ಬಾಲ್ಯದ ನಂಬುಗೆಗಳು
ಪ್ರೀತಿಸುವೆ ನಾ ನಿನ್ನನು ಕಳೆದುಹೋಗುತ್ತಿದ್ದ ಅದೇ ಪ್ರೀತಿಯೊಂದಿಗೆ
ಪ್ರೀತಿಸುವೆ ನಾ ನಿನ್ನನು ನನ್ನ ಜೀವನದ
ನೋವು, ನಲಿವು, ಏದುಸಿರುಗಳೊಂದಿಗೆ ಮತ್ತೆ
ಆ ದೇವನೊಲಿದರೆ ಪ್ರೀತಿಸಬಹುದು
ನಾ ನಿನ್ನನು ಇನ್ನೂ ಚೆನ್ನಾಗಿ
ನಾನು ಗೋರಿಯಾದಾಗ.
(ಇದು ಎಲಿಜಬೆಥ್ ಬ್ರೌನಿಂಗ್ ಬರೆದ 'Songs from the Portuguese' ಸಂಕಲನದಿಂದ ಆಯ್ದ ಕವಿತೆಯ ಭಾವಾನುವಾದ )
ಮೂಲ:
How do I love thee? Let me count the ways
I love thee to the depth, and breadth, and height,
My soul can reach, when feelings out of sight
For the ends of Being and ideal grace.
I love thee to the level of ever day’s
Most quiet need, by sun and candle light,
I love thee freely as a man strives for right;
I love thee purely, as they turn from praise
I love thee with the passion put to use.
In many old griefs, and with my childhood’s faith
I love thee with a love seemed to lose
With my lost saints. I love thee with breath
Smiles, tears, of all my life- and if God choose,
I shall but love thee better after death.
Rating
Comments
ಉ: ಆಂಗ್ಲ ಕವಿ Robert Browning ಳ ಪತ್ನಿ ಏಲಿಜಬೆಥ್ ಬ್ರೌನಿಂಗ್ ಳ ...
ಉ: ಆಂಗ್ಲ ಕವಿ Robert Browning ಳ ಪತ್ನಿ ಏಲಿಜಬೆಥ್ ಬ್ರೌನಿಂಗ್ ಳ ...
In reply to ಉ: ಆಂಗ್ಲ ಕವಿ Robert Browning ಳ ಪತ್ನಿ ಏಲಿಜಬೆಥ್ ಬ್ರೌನಿಂಗ್ ಳ ... by ksraghavendranavada
ಉ: ಆಂಗ್ಲ ಕವಿ Robert Browning ಳ ಪತ್ನಿ ಏಲಿಜಬೆಥ್ ಬ್ರೌನಿಂಗ್ ಳ ...