ವೈದೀಕ ... ಭಾಗ ೩

ವೈದೀಕ ... ಭಾಗ ೩

ಬರಹ


 



                                                                                                               ಮುಂದುವರೆದಿದೆ



ಪುರೋಹಿತರು ಇವರಿಬ್ಬರನ್ನೆ ನೋಡುತ್ತ ಮಂತ್ರ ಹೇಳುತ್ತ ಯಾಕೋ ಇವರಿಬ್ಬರು ಈ ದಿನ ಸರಿಯಿಲ್ಲ ಏನಾದರು ಇಬ್ಬರ ಮಧ್ಯೆ ಗಲಾಟೆ ಆಗಿರಬಹುದ ಅಂದುಕೊಂಡರು. ಸಾಮಾನ್ಯವಾಗಿ ಪಟ ಪಟ ಮಾತನಾಡುತ್ತ ಇರುವ ವಿನಾಯಕರ ಇಂದಿನ ಮೌನ ಆಶ್ಚರ್ಯವೆನಿಸಿತು. ಹೋಮದ ನಂತರ ಬ್ರಾಃಮಣರ ಬಳಿ ಕುಳಿತ ವೆಂಕಟೇಶಯ್ಯನವರು ಅವಾಹನೆ ಪ್ರಾರಂಬಿಸಿದರು. ಕಾರ್ಯ ಮಾಡುತ್ತಿದ್ದ ಶಶಿದರನು ವಿನಾಯಕರನ್ನು ನೋದುತ್ತ ಗಲಿಬಿಲಿಗೊಂಡ. ವಿನಾಯಕರ ಕಣ್ಣು ಕೆಂಪು ತಿರುಗುತ್ತಲ್ಲಿತ್ತು. ಉಸಿರಾಟದ ವೇಗ ಹೆಚ್ಚಾಯಿತು. ಬ್ರಾಃಮಣರ ಕಾಲುತೊಳೆದು ಅವರಿಗೆ ಊಟಕ್ಕೆ ಎಲೆ ಹಾಕಿ, ಎಲ್ಲವನ್ನು ಬಡಿಸಿ, ನಂತರ ನಿದಾನವಾಗಿ ಊಟ ಮಾದುವಂತೆ ಇಬ್ಬರಲ್ಲು ಪ್ರಾರ್ತನೆ ಮಾಡಿದ ಶಶಿಧರ. ನಾರಾಯಣರು ಎಲೆಗೆ ಕೈಹಚ್ಚಬೇಕು ಅನ್ನುವದರಲ್ಲಿ , ವಿನಾಯಕರು ಇವರತ್ತ ತಿರುಗಿ " ನಿಲ್ಲೊ,.. ಎಲೆಗೆ ಕೈಯಿಡಬೇಡಾ..." ಎಂದು ಗಟ್ಟಿಯಾಗಿ ಅರಚಿದರು. ಪುರೋಹಿತರು, ಶಶಿಧರ ಗಾಬರಿಗೊಂಡರು. ಮನೆಯಲ್ಲಿದ್ದ ಎಲ್ಲರು ಬಾಗಿಲಿನಲ್ಲಿ ಕಿಟಕಿಗಳಲ್ಲಿ ನಿಂತು ಒಳಗೆ ನೋಡತೊಡಗಿದರು. ನಾರಾಯಣರ ಕೈಕಾಲುಗಳಲ್ಲಿ ನಡುಕ. ಪುರೋಹಿತರ ಕಡೆ ತಿರುಗಿದ ವಿನಾಯಕರು " ಎನೋ ವೆಂಕಿ , ನನ್ನ ಶ್ರಾದ್ದನ ಹೀಗೇನಾ ಮಾಡೋದು ?" ಎಂದು ರೇಗಿದರು. ಪುರೋಹಿತ ವೆಂಕಟೇಶಯ್ಯನವರು ಆಶ್ಚರ್ಯಚಕಿತರಾದರು, ಎನಿದು? ವಿನಾಯಕರು ಎಂದು ನನ್ನನ್ನು ಹೆಸರು ಹಿದಿದು ಸಹ ಕರೆದವರಲ್ಲ, ವಿನಯದಿಂದ ನನ್ನ ಜೊತೆ ಮಾತನಾಡುವವರು. ಅಲ್ಲದೆ ನನ್ನನ್ನು ವೆಂಕಿ ಎಂದು ಕರೆಯುತ್ತಿದ್ದವನು ಮರಣಹೊಂದಿರುವ ಕೃಷ್ಣಸ್ವಾಮಿ ಮಾತ್ರ. ಅಂದರೆ ಎನಾಗಿದೆ ತಾನು ಮಂತ್ರಪೂರ್ವಕವಾಗಿ ಕರೆದಾಗ ಕೃಷ್ಣಸ್ವಾಮಿಯ ಪ್ರೇತ ನಿಜವಾಗಿಯು ವಿನಾಯಕರ ಮೇಲೆ ಅವಾಹನೆಯಾಗಿದೆಯ??. ತನ್ನ ವೃತ್ತಿ ಜೀವನದಲ್ಲಿ ಎಂದು ಎದುರಿಸದ ಈ ಸಂದರ್ಪದಿಂದ ಅವರು ಏನು ಮಾದಬೇಕೆಂದು ತಿಳಿಯದೆ ಗಲಿಬಿಲಿಗೊಂಡರು. ಇತ್ತ ಹೆದರಿದ ಶಶಿಯತ್ತ ತಿರುಗಿದ ವಿನಾಯಕರು " ಎನೋ ಗುರು , ನನ್ನನ್ನು ಕೊಂದವನನ್ನೆ ನನ್ನ ಶ್ರಾಧ್ಧಕ್ಕೆ ಕೂಡಿಸಿ ನನಗೆ ಪಿಂಡ ಇಡುತ್ತಿಯಾ? ನನಗೆ ಬೇಡವೋ " ಎಂದರು. ಶಶಿಧರ ಚಕಿತನಾದ , ತನ್ನನ್ನ ಗುರು ಎನ್ನುತ್ತಿದ್ದವರು ತಂದೆಯೊಬ್ಬರೆ, ಆದರೆ ಏನು ಹೇಳುತ್ತಿದ್ದರೆ ? ವಿನಾಯಕರ ಜೊತೆ ಬಂದಿರುವ ಈ ಬ್ರಾಃಮಣರು ಹೇಗೆ ತನ್ನ ತಂದೆಯನ್ನು ಕೊಲ್ಲಲ್ಲು ಸಾಧ್ಯ. ಇವರನ್ನು ಕೊಂದವ ತುಮಕೂರಿನಲ್ಲಿ ನಮ್ಮ ಪಕ್ಕದ ಮನೆಯಲ್ಲಿಧ್ಧ ಕೆಂಪುತಿಮ್ಮಯ್ಯ ಎಂಬುವನಲ್ಲವೆ ಎಂದು ಯೋಚಿಸುತ್ತ ಕುಳಿತ.


ಮೊದಲಿಗೆ ಧೈರ್ಯತಂಡುಕೊಂಡವರು ವೆಂಕಟೇಶಯ್ಯನವರೆ 


 

ವಿನಾಯಕರತ್ತ ತಿರುಗಿ "ಅಂದರೆ ನೀನು ಕಿಟ್ಟಿಯ ಆತ್ಮವ , ನಿನಗೆ ಏಕೆ ಇಂತ ಪರಿಸ್ಥಿಥಿ ಬಂತು? , ಇವರು ನಾರಾಯಣ ಭಟ್ಟರು , ಇವರು ಏಕೆ ನಿನ್ನ ಕೊಲೆ ಮಾಡುತ್ತಾರೆ ? ನಿನ್ನನ್ನು ಕೊಂದವ ತಮಕೂರಿನಲ್ಲಿ ನಿಮ್ಮ ಪಕ್ಕದ ಮನೆಯವ ಅಲ್ಲವ ?" ಎಂದು ಕೇಳಿದರು. ಕಣ್ಣು ಕೆಂಪು ಮಾಡಿಕೊಂಡ ವಿನಾಯಕರು "ನಾರಾಯಣನು ಅಲ್ಲ ಭಟ್ಟನು ಅಲ್ಲ, ಅವನು ಕೆಂಪಯ್ಯ ಬೇಕಾದರೆ ಅವನನ್ನೆ ಕೇಳು , ಮೊಧಲು ಈ ಶ್ರಾಧ್ಧ ನಿಲ್ಲಿಸು ಇವನನ್ನು ಎಬ್ಬಿಸು" ಎಂದು ಕೂಗಿದರು. ವೆಂಕಟೇಶಯ್ಯನವರು ನಾರಾಯಣರನ್ನು ಕೇಳುವ ಅಗತ್ಯವೇ ಬರಲಿಲ್ಲ. ನಾರಾಯಣರ ಬೆದರಿದ ಮುಖ, ನಡುಗುತ್ತಿದ್ದ ಕೈಕಾಲುಗಳು ಎಲ್ಲವನ್ನು ಹೇಳುತ್ತಿದ್ದವು. ವೆಂಕಟೇಶಯ್ಯನವರಿಗೆ ಕೈಮುಗಿದ ನಾರಾಯಣರು " ದಯಮಾಡಿ ಕ್ಷಮಿಸಿಬಿಡಿ, ನನ್ನಿಂದ ತಪ್ಪಗಿದೆ , ಅವರು ಹೇಳುತ್ತಿರುವುದು ಸತ್ಯ ನಾನು ಹೊರಡುತ್ತೇನೆ " ಎಂದರು. ಕ್ಷಣಕಾಲ ಚಿಂತಿಸಿದ ವೆಂಕಟೇಶಯ್ಯನವರು ರೂಮಿನಲ್ಲಿ ಯಾರಿದ್ದಿರಿ ಹೊರಗೆ ಬನ್ನಿ ಎಂದು ಕರೆದು, " ನೀವೀಗ ಯಾವುದೆ ತೊಂದರೆಕೊಡದೆ ಹೋಗಿ ಆ ರೂಮಿನಲ್ಲಿರಿ" ಎಂದರು. ಬೆಳಗಿನಿಂದ ಇದ್ದ ಉಪಾವಾಸ , ಈ ಕ್ಷಣದ ಗಾಬರಿ ಎಲ್ಲವು ಸೇರಿ ಯಾವುಧೆ ಪ್ರತಿರೋದವಿಲ್ಲದೆ ನಾರಾಯಣರು ರೂಮಿನ ಒಳಗೆ ಹೋದರು. ಹಿಂದೆಯೆ ಶಶಿಯು ಬಾಗಿಲುಹಾಕಿ ಹೊರಗಿನಿಂದ ಭದ್ರಪಡಿಸಿದನು. ನಂತರ ಅಡುಗೆಗೆ ಬಂದಿದ್ದ ಶಾಮಣ್ಣನವರನ್ನೆ ನಾರಾಯಣರ ಜಾಗದಲ್ಲಿ ಕೂಡಿಸಿ ಕೆಲಸ ಮುಂದುವರೆಸಿದರು. ಅಲ್ಲಿಯವರೆಗು ಬೆಂಕಿಯಂತಿದ್ದ ವಿನಾಯಕರು ಈಗ ಮಾತನಾಡದೆ ಊಟ ಮಾಡುತ್ತಿದ್ದರು.ರೂಮಿನಲ್ಲಿ ತಲೆಯ ಮೇಲೆ ಕೈಹೊತ್ತ ನಾರಾಯಣರು ಜೀವನದಲ್ಲಿ ಬರುತ್ತಿರುವ ಅನಿರೀಕ್ಷಿತಗಳಿಂದ ಮಂಕಾಗಿದರುಎಷ್ಟು ಸಮಯ ಕಳೆಯಿತೊ ತಿಳಿಯಲಿಲ್ಲ. ಹೊರಗಿನಿಂದ ಯಾವ ಶಬ್ಧವು ಕೇಳುತ್ತಿಲ್ಲ, ಮುಂದೆ ತನ್ನ ದಾರಿ ಯಾವುದು, ಈಗ ಇವರು ತನ್ನನ್ನು ಏನು ಮಾಡಬಹುದು ಎಂದು ಚಿಂತಿಸುತಿದ್ದರು. ಸಂಜೆಯಾಗುತಿದೆ ಎನ್ನಿಸಿತು, ಬಾಗಿಲ ಬಳಿ ಶಬ್ಧವಾಯಿತು, ಯಾರೊ ಬಾಗಿಲು ತೆಗೆಯುತ್ತಿದ್ದಾರೆ. ರೂಮಿನ ಒಳಗೆ ಯಾರೋ ಬರುತ್ತಿದ್ದರೆ, ಸುಸ್ತಾಗಿದ್ದ ಅವರು ನೆಲದಮೇಲೆ ಕುಳಿತೆ ತಲೆಯೆತ್ತಿ ನೋಡಿದರು.ಸಮವಸ್ತ್ರದಲ್ಲಿದ್ದ ತುಮಕೂರಿನ ಪೋಲಿಸ್ ಅಧಿಕಾರಿ ಇಬ್ಬರು ಪೇಧೆಗಳ ಜೊತೆ ನಿಂತಿದ್ದರು.



                                                                                             ಮುಗಿಯಿತು