ಬಿನ್ನಾಣಗಿತ್ತಿ ಹಾಗು ಮತ್ತಿತರ ಪರಸ೦ಗಗಳು

ಬಿನ್ನಾಣಗಿತ್ತಿ ಹಾಗು ಮತ್ತಿತರ ಪರಸ೦ಗಗಳು

ಬರಹ

ಒಬ್ಬ ಹುಡುಗಿ ಒಂದ್ ಸಲ ಅವಳ ಹಳ್ಳಿಗೆ ಹೋದ್ಲು.. ಆಗ ತಾನೆ ಪಿ ಯು ಸಿ ಮುಗಿದಿತ್ತು.. ಚಂದುಳ್ಳಿ ಚೆಲುವೆ ಬೇರೆ.. ಸಿಕ್ಕಪಟ್ಟೆ ಬಿನ್ನಾಣಗಿತ್ತಿ ಅಂದ್ಕೊಳ್ಳಿ.. ಹಳ್ಳೀಲಿ ಇವಳನ್ನ ನೋಡಿದ ಪಡ್ಡೆ ಹೈಕ್ಳೆಲ್ಲ ಎರಡು ನಿಮಿಷ ಕಣ್ಣು ಬಡೀಲಿಲ್ಲ..ಇವಳ್ಗೋ ಖುಶೀನೋ ಖುಶಿ.. ಅಂಗಡಿಗೆ ಹೋದ್ಲು ತರಕಾರಿ ತರೋಕಂತ.

ಅಂಗಡಿಯ ಹೆಂಗಸಿಗೆ ಒಂದು ಸಾಮಾನು ಹೇಳೋದು ಸೆಲ್ಲ್ ನಲ್ಲಿ ಟೊಯ್ ಟೊಯ್ ಅಂತ ಎಸ್ ಎಮ್ ಎಸ್ ಮಾಡೋದು ಮತ್ತೆ ಅಂಗಡಿಯಾಕೆ ಕೇಳಿದಾಗ ತಲೆ ಎತ್ತಿ ಇನ್ನೊನ್ದ್ ಸಾಮಾನ್ ಹೆಸರು ಹೇಳೋದು.. ಹೀಗೆ ಐದು ನಿಮಿಷ ನಡೀತು..

ಕೊನೆಗೆ ಈ ಹುಡುಗಿ ಪ್ಲಾಸ್ಟಿಕ್ ಬ್ಯಾಗ್ನಲ್ಲಿದ್ದ ಸಾಮಾನೆಲ್ಲವನ್ನ ತಾನು ತಂದಿದ್ದ ಬ್ಯಾಗಿಗೆ ಹಾಕ್ಕೊಂಡು "ದುಡ್ಡು ಎಷ್ಟಾಯ್ತು" ಅಂತ ಕೇಳಿದ್ಲು..
ಅಂಗಡಿಯವ್ಳು: "ಎಪ್ಪತ್ತು ರೂಪಾಯಿ". ಹುಡುಗಿ ನೂರು ರೂಪಾಯಿ ಕೊಟ್ಳು..

ಅಂಗಡಿಯವ್ಳು: ಏನವ್ವ ನೀವು ದೊಡ್ಡ ಪಟ್ಟಣದವ್ರು ಅನ್ಸತ್ತೆ.. ತುಂಬಾ ಓದಿದೀರ ಅನ್ಸತ್ತೆ!

ಹುಡುಗಿಗೆ ಖುಶಿ. ನನ್ ಬಟ್ಟೆ, ಸೆಲ್, ಆಧುನಿಕತೆ ನೋಡಿ ಈ ಹೆಂಗಸು ಹೀಗೆ ಹೇಳ್ತಾ ಇದಾಳೆ ಅನ್ಕೊಡ್ಳು.
ಸರಿ ಹುಡುಗಿ ಕೇಳಿದ್ಲು "ಹೌದು ನಿನಗೆ ಹೇಗೆ ಗೊತ್ತಾಯ್ತು?"
ಅಂಗಡಿಯವ್ಳು: "ಅಲ್ಲ ಈರುಳ್ಳಿ, ಆಲುಗೆಡ್ಡೆ, ಬೇಳೆ , ಸಕ್ಕರೆ ಎಲ್ಲ ಸಾಮನು ತಗೊಂಡು.. ಟೊಮಾಟೊನ ಮೊದಲು ಬ್ಯಾಗ್ ಒಳಗಡೆ ಹಾಕ್ಕಂಡ್ರಿ ನೋಡಿ ಆಗಲೆ ಗೊತ್ತಾಯ್ತು..ಕಾಮನ್ ಸೆನ್ಸ್ ಇಲ್ಲ ಅಂತ..ಅದಕ್ಕೆ ಪಟ್ಟಣದವರಾ ಅಂತ ಕೇಳ್ದೆ. ಬೇಜಾರ್ ಮಾಡ್ಕಬೇಡಿ."

ಹುಡುಗಿ ಗಪ್ ಚುಪ್

=========================================================================================================
ಹೆಂಡತಿ : ರೀ..... ಅಂಗಡಿಗೆ ಹೋಗಿ ಒಂದು ಕೆ.ಜಿ. ಸಕ್ಕರೆ ತನ್ನಿ....
ಗಂಡ : ನಿನ್ನ ತುಟಿಯಲ್ಲಿ ಅಷ್ಟು ಸಕ್ಕರೆ ಇರೋವಾಗ ಬೇರೆ ಸಕ್ಕರೆ ಬೇಕೇನೆ ?
ಹೆಂಡತಿ : ನಿಮ್ಗೆ ಓಕೆ, ಆದ್ರೆ ನಿಮ್ಮ ಫ್ರೆಂಡ್ಸ್ ಬಂದ್ರೆ ???

**************************************************************************
ಗಂಡ : ಪಕ್ಕದ ಮನೆಯವರು ಅವರ ಗಂಡನ ತಿಥಿಗೆ ಕರೆದಿದ್ದಾರೆ, ನೀನು ಹೋಗಿ ಬಾ.
ಹೆಂಡತಿ : ನಾನು ಹೋಗಲ್ಲ. ನಾನು ಒಮ್ಮೆಯಾದರೂ ನನ್ನ ಗಂಡನ ತಿಥಿಗೆ ಅವರನ್ನುಕರೆಯಲಿಲ್ಲ. ನಾನು ಹ್ಯಾಗೆ ಹೋಗುವುದು?

**************************************************************************
ಹೆಂಡತಿ: ರೀ.... ಒಂದು ವಿಷಯ ಹೇಳ್ತೀನಿ, ಹೊಡೆಯೋದಿಲ್ಲ ಅಂತ ಮಾತು ಕೊಡಿ?
ಗಂಡ: ಎನೇ ಹೀಗೆ ಹೇಳ್ತೀಯಾ, ನಾನು ನಿಂಗೆ ಯಾವಾತ್ತಾದ್ರೂ ಹೊಡ್ದಿದ್ದೀನಾ, ಹೇಳು ಏನು ವಿಷಯ?
ಹೆಂಡತಿ: ನಂಗೀಗ ಮೂರು ತಿಂಗ್ಳು !
ಗಂಡ: ಇದು ಖುಷಿಯ ವಿಷಯ ಕಣೇ, ಇದಕ್ಕೆಲ್ಲ ಯಾವ ಗಂಡ ಹೆಂಡತಿಗೆ ಹೊಡೀತಾನೆ?
ಹೆಂಡತಿ: ಕಾಲೇಜ್‍ನಲ್ಲಿದ್ದಾಗ ಅಪ್ಪಂಗೆ ಹೀಗೆ ವಿಷಯ ಹೇಳಿದ್ದೆ, ಆವಾಗ ಅಪ್ಪ ತುಂಬಾ ಹೊಡ್ದಿದ್ರು !!!

**************************************************************************
ರಾಮ : ಲೋ ಶಾಮ ನೆನ್ನೆ ನನ್ನ ಹೆಂಡತಿಯ ಕಣ್ಣಿಗೆ ಕಸ ಬಿದ್ಧು ೫೦೦ ರೂ ಕರ್ಚಾಯಿತು ಕಣೋ ???
ಶಾಮ : ಅಯ್ಯೌ ಅಷ್ಟೇನ ನೆನ್ನೆ ನನ್ನ ಹೆಂಡತಿಯ ಕಣ್ಣಿಗೆ ಸೀರೆ ಬಿದ್ಧು ೫೦೦೦ ಖರ್ಚಾಯಿತು. !!!

**************************************************************************
ರಾತ್ರಿ ಕರೆಂಟು ಹೋಗಿತ್ತು !
ಆಗ ಮಂಕ ಹೆಂಡತಿಗೆ ಹೇಳಿದ : ಲೇ ಫ್ಯಾನ್ ಆದ್ರೂ ಹಾಕೆ.......... !!!
ಮಂಕಿ : ಆಡಿದ್ರಲ್ಲ ಮಂಕುತನದ ಮಾತು ! ಫ್ಯಾನ್ ಹಾಕಿದ್ರೆ ಕ್ಯಾಂಡಲ್ ಆರಿಹೋಗಲ್ವ ? ? ?

**************************************************************************