ಸಾಹಿತ್ಯ ಕೂಟ: ಚಿಂತಾಮಣಿ: ೨೮೦೦ ನೆಯ ಶನಿವಾರದ ಕಾರ್ಯಕ್ರಮ!
ಇದೊಂದು ದಾಖಲೆ!
ಸುಮಾರು ೫೫ ವರಗಳಿಂದ, ಪ್ರತಿಶನಿವಾರವು ತಪ್ಪದೇ ಒಂದು ಸಾಹಿತ್ಯ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿರುವ ಅಪರೂಪದ ಸಂಸ್ಥೆಯು ಚಿಂತಾಮಣಿಯಲ್ಲಿದೆ. ಅದುವೇ ಸಾಹಿತ್ಯ ಕೂಟ. ಇದನ್ನು ವೈ.ಎಸ್.ಗುಂಡಪ್ಪ ಎಂಬ ಮಹಾನುಾವರು ಸ್ಥಾಪಿಸಿದರು. ಈಗ ಅವರಿಲ್ಲ. ಆದರೆ, ಅವರ ಮಕ್ಕಳು ತಮ್ಮ ತಂದೆಯವರು ಆರಂಭಿಸಿದ ಈ ಸಾಹಿತ್ಯ ದಾಸೋಹವನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ.
ಇಂದು ೨೮೦೦ ನೆಯ ಕಾರ್ಯಕ್ರಮ.
ನಾನು ’ಪ್ರಶ್ನ ಚಿಂತಾಮಣಿ’ ಎಂಬ ಸರಳ ಕ್ವಿಜ್ ಕಾರ್ಯಕ್ರಮವನ್ನು ನಡೆಸುತ್ತಿದ್ದೇನೆ. ಕ್ವಿಜ್ ವಿಷಯ, ಸೂರ್ಯನನ್ನೂ ಒಳಗೊಂಡಂತೆ ಸೂರ್ಯನ ವ್ಯಾಪ್ತಿಯಲ್ಲಿ ಬರುವ ಎಲ್ಲ ವಿ್ಯಗಳು. ಎಂದಿನಂತೆ ಪ್ರತಿ ಸರಿ ಉತ್ತರಕ್ಕೂ ಒಂದು ಪುಸ್ತಕ ಬಹುಮಾನ.
ಚಿಂತಾಮಣಿಯ ಶಾಸಕರಾದ ಡಾ|ಎಂ.ಸಿ.ಸುದಾಕರ್ ಅವರು ಮುಖ್ಯ ಅತಿಿಗಳಾಗಿ ಆಗಮಿಸಲಿದ್ದಾರೆ.ಸಾಹಿತ್ಯ ಕೂಟದ ಅಧ್ಯಕ್ರಾದ ರಾಮಮೂರ್ತಿಯವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ಸ್ಳಳ: ಬ್ರಹ್ಮ ಚೈತನ್ಯ ರಾಮಮಂದಿರ ಮಂದಿರ
ಬಿಡುವಿದ್ದಲ್ಲಿ ದಯವಿಟ್ಟು ಬನ್ನಿ (ಕಾಗುಣಿತ ದೋಗಳಿವೆ. ಬರಹ ಐ.ಎಂ.ಇ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಕಾರಣ ಗೊತ್ತಿಲ್ಲ)