ಗೌಡಪ್ಪನ ಗೂಟದ ಕಾರುಬಾರು
ಗೌಡಪ್ಪ ಬೆಳಗ್ಗೆನೇ ನಮ್ಮನೆಗೆ ಬಂದ. ನೋಡಲಾ ಬೈಕ್ನಾಗೆ ತ್ರಿಬ್ಸ್ ಹೊಡೆದು ಹೊಡೆದ ಸಾಕಾಗೈತೆ. ಇನ್ ಮ್ಯಾಕೆ ಸ್ಟಾಂಡರ್ಡಾಗಿ ಕಾರಲ್ಲಿ ಓಡಾಡುವಾ ಅಂತಾ ಇದೀನಿ. ನಾಳೆನೇ ಬೆಂಗಳೂರಿಗೆ ಹೋಗಿ ಹೊಸಾ ಕಾರು ತೆಗೆದುಕೊಂಡು ಬತ್ತೀನಿ ಅಂದ.
ಸಂಜೆ ತಾವ ಗೌಡಪ್ಪನ ಮನೆ ಮುಂದೆ ಹೊಸಾ ಕಾರು ನಿಂತಿತ್ತು. ಮಾರ್ವಾಡಿ ಮದುವೇಲಿ ಹಾರ ಹಾಕಿದಂಗೆ ಹಾಕಿದ್ದ. ಮುಂದೊಂದು ಥೇರಿನ ಹಗ್ಗ ಕಟ್ಟಿದ್ದ, ಎಳೆಯಕ್ಕೆ ಅಂತಾ, ಬಾಡಿ ಫಿಯಟ್, ಬ್ಯಾನೆಟ್ ಅಂಬಾಸಿಡರ್ ಅಂಗೇ ಟಾಪ್ ಮಾರುತಿ 800 ಇತ್ತು. ಒಂದು ತರಾ ಮಿಕ್ಸರ್ ಬಿರಿಯಾನಿ ಆಗಿತ್ತು. ಟಿಂಕರಿಂಗ್ ಮಾಡ್ಸಿದ್ದ. ಹೆಂಗ್ರಲಾ ಅಂದಾ ಗೌಡಪ್ಪ. ಅಯ್ಯೋ ನಿಮ್ಮ ಮುಖಕ್ಕೆ ಚಾ ಚಲ್ಟ ಹುಯ್ಯಾ, ಹೊಸಾ ಕಾರು ತರೋದು ಅಲ್ವಾ ಅಂದ ಸುಬ್ಬ, ಅವನ ಹೆಂಡರು ಬಸಮ್ಮ ಊದಬತ್ತಿ ಅಂಗೇ ಕರ್ಪೂರ ಹಚ್ಚಿ ಪೂಜೆ ಮಾಡ್ತಾ ಇದ್ಲು. ಆರತಿ ಎತ್ತಿರೇ ಡಬ್ಬ ಕಾರಿಗೇ, ಎಲ್ಲೆಂದ್ರಲ್ಲಿ ಸವಂಡ್, ಎಲ್ಲೆಂದ್ರಲ್ಲಿ ಹೊಗೆ ಅಂತಾ ಹಾಡು. ಸುಮ್ಕೆ ಪೂಜೆ ಮಾಡಮ್ಮಿ. ಅದೂ ದೂರದಿಂದ ಮಾಡಮ್ಮಿ ಅಂದಾ. ಯಾಕೆ ಅಂದ್ರೆ ಆಗಲೇ ಬಾನೆಟ್ ನಿಂದ ಆಯಿಲ್ ಲೀಕ್ ಆಗ್ತಾ ಇತ್ತು. ಎಲ್ಲಿ ಬೆಂಕಿ ಹತ್ತಿ ಸುಟ್ಟು ಹೋಯ್ತದೋ ಅಂತಾ.
ಅದ್ರ ಮ್ಯಾಕೆ ಒಂದು 100ಕ್ಯಾಂಡಲ್ ಕೆಂಪು ದೀಪ, ಅಂಗೇ ಮುಂದೊಂದು ದೊಡ್ಡ ಬಾವುಟ. ಆಂಬುಲೆನ್ಸ್ ಸವಂಡ್ ಎಲ್ಲಾ ಹಾಕಿಸಿದ್ದ. ಟೇಪ್ ರೆಕಾರ್ಡರ್ ಹಾಕ್ಸಿರಲಿಲ್ಲ. ಯಾಕೇ ಅಂದ್ರೆ ಸವಂಡ್ ಕೇಳ್ತಾನೇ ಇರ್ಲಿಲ್ಲ. ಬಾಡಿ ಸವಂಡೇ ಒಂದು ತರಾ ಆಫ್ರಿಕನ್ ಮ್ಯೂಸಿಕ್ ಬೋನಿಯಮ್ ತರಾ ಇತ್ತು. ಆಂಬಲೆನ್ಸ್ ಸವಂಡ್ ನೋಡಿ ಆಸ್ಪತ್ರೆಯೋರಿಗೆ ಇದು ಯಾವುದು ನಮ್ಮ ಹಳ್ಳಿಗೆ ಆರೋಗ್ಯ ಸಚಿವ ಶ್ರೀರಾಮುಲು ಶವ ಹಾಕ್ಕಂಡ್ ಬರಕ್ಕೆ ಹೊಸ ಗಾಡಿ ಬಿಟ್ಯಾರಲ್ಲಾ ಅಂತಾ ಗೌಡಪ್ಪನ ಮನೆತಾವ ಹೋಗಿದ್ರಂತೆ. ಆಗಲೇ ಪೇಂಟರ್ ಶವದ ವಾಹನ ಬರೆಯಕ್ಕೆ ಹೊಂಟಿದ್ದ. ಏ ಥೂ ಹೋಗಲಾ.
ಗೌಡಪ್ಪ ಹೊಂಟರೆ ಪೊಲೀಸರು ಯಾರದೋ ಮಿನಿಸ್ಟರ್ ಕಾರ್ ಅಂತಾ ಸೈಡ್ ಬಿಡ್ಸೋರು. ಗೌಡಪ್ಪ ಫೆ,ಫೆ ಫೆ ಅಂತಾ ನಗೋನು. ಜೋರಾಗಿ ಗಾಳಿ ಬಂದರೆ ಮರತಾವ ನಿಲ್ಲಿಸೋನು, ಬಾವುಟ ಜೋರಾಗಿ ಹಾರಿದ್ರೆ ಮಿರರ್ ಗೆ ಅಡ್ಡ ಆಗ್ತಿತ್ತಂತೆ. ಸರಿ ಊರ್ನಾಗೆ ಸವಂಡ್ ಹಾಕ್ಕಂಡ್ ಹೊಂಟ್ರೆ ಜನ ಎಲ್ಲಾ ಸೇರವು. ಆಂಬುಲೆನ್ಸ್ ಬಂತ್ರಲಾ ಯಾರೋ ಹೊಗೆ ಹಾಕಸ್ಕಂಡವ್ರೆ ಅಂತಾ. ಕಾರಿಂದ ಗೌಡಪ್ಪ ಇಳಿತಿದ್ದಾಗೆನೇ ಗೌಡಪ್ಪ ಅಂತ ಗೊತ್ತಾಗಿ ಏ ಥೂ ಅನ್ನೋವು. ಒಂದು ಸಾರಿ ಕಾರಿಗೆ ಉಲ್ಟಾ ಬಾವುಟ ಕಟ್ಟಿ ದಂಡ ಕಟ್ಟಿದ್ದ. ಸರಿ ಸಿದ್ದೇಸನ ಗುಡೀಲಿ ಪೂಜೆ ಮಾಡಿಸಿದ್ವಿ. ನಡೆಯಲಾ ಊರ್ನಾಗೆ ಒಂದು ರವಂಡ್ ಹಾಕುವಾ ಅಂದ. ಸ್ಟಾರ್ಟ್ ಆಗಲೇ ಇಲ್ಲ. ಮುಂದುಗಡೆ ಕಿಸ್ನ ಹಗ್ಗ ಇಟ್ಕಂಡು ಎಳೆಯೋನು. ಹಿಂದಿಂದ ನಾವೆಲ್ಲಾ ತಳ್ಳು ತಳ್ಳು ಐಸ್ಸಾ, ಜೋರಾಗಿ ತಳ್ಳು ಐಸ್ಸಾ ಅಂತಿದ್ವಿ. ಚಾ ಕುಡಿತಾ ಕುಂತ ಕೆಇಬಿಯೋರು ಕಂಬ ನೆಡ್ತಾವ್ರೆ ಅಂತಾ ಓಡಿ ಬಂದಿದ್ರು. ಮಗಾ ಇಲ್ಲಿ ಬ್ರೇಕ್ ಹಾಕಿದ್ರೆ ಮೈ ಮ್ಯಾಕೆ ಹತ್ತಿದ ಮ್ಯಾಕೆನೇ ನಿಲ್ಲೋದು.
ಗೌಡಪ್ಪನ ಕಾರು ಮುಂದೆ ಹೋಯ್ತಾ ಇದ್ರೆ. ಹಿಂದಗಡೆಯೋರು ಯಾರು ಕಾಣ್ತಾನೇ ಇರ್ತಿರ್ಲಿಲ್ಲ. ಆಟೊಂದು ಹೊಗೆ. ಮಗಂದು ಸೀಮೆ ಎಣ್ಣೆ ಹೊಗೆ. ಎರಡೆರೆಡು ಕಿ.ಮೀಗೂ ಗಾಡಿ ನಿಲ್ಲಿಸಿ ಬಾನೆಟ್ ಎತ್ತಿ ಎರಡು ಕೊಡ ನೀರು ಹುಯ್ಯೋನು. ರೇಡಿಯೇಟರ್ ಹಂಗಿತ್ತು. ಸಾನೇ ಹೊಗೆ, ಎಮಿಸನ್ ಟೆಸ್ಟ್ ಮಾಡಿಸಿದ್ರೆ ಅದರ ಮಿಸಿನ್ನೇ ಹಾಳಾಗಿತ್ತು ಅಂತಾ ಗೌಡ 2ಸಾವಿರ ಕೊಟ್ಟಿದ್ದ.
ಹಾರ್ನ್ ಬೇಡ ಅಂಗೆ ಸವಂಡ್, ಭಾಡಿ ಎಲ್ಲಾ ಗಡಾ ಗಡಾ ಅನ್ನೋದು. ಕಾರಿಂದ ಇಳಿದೋರು ಒಂದೆರೆಡು ನಿಮಸ ಅಂಗೇ ಅಳಗಾಡೋರು. ಇದೇನ್ಲಾ ಫುಡ್ ಮಿಕ್ಸಿಂಗಾ ಅಂದ್ರೆ ಅಲ್ಲಾ ಕಲಾ ಫಿಟ್ಸ್ ಅನ್ನೋವು. ಗೌಡಪ್ಪನ ಕಾರ್ ಎಫೆಕ್ಟ್ ಹೆಂಗಿತ್ತು ಅಂದ್ರೆ ಗುಟ್ಟು ಅನ್ನೋದು ಇಲ್ವೇ ಇಲ್ಲ. ಆಟೊಂದು ಜೋರಾಗಿ ಮಾತಾಡ್ತಾ ಇದ್ವಿ. ಇಳಿದ್ ಮ್ಯಾಕೆ ವಾಯ್ಸೇ ಇರ್ತಾ ಇರಲಿಲ್ಲ ಮಗಾ ಕಣ್ಣು ಕಾಣಕ್ಕಿಲ್ಲ ಅಂತಾ ಸೇವಿಂಗೆ ಕನ್ನಡಿ ಮಡಗಿದ್ದ. ಸಣ್ಣ ಸೈಕಲ್ ಬಂದ್ರು ದೊಡ್ಡ ಬೈಕ್ ಬಂದಂಗೆ ಕಾಣೋದು. ಏಕ್ ಧಮ್ ಚೆರಂಡಿ ಪಕ್ಕಕ್ಕೆ ಹೋಗೋನು.
ಮಗಾ ಊರ್ನಾಗೆ ಹೊಂಟ್ರೆ, ಒಂದು 108 ಬಂತು ಅಂತಾ ಇಲ್ಲಾ ಗೌಡಪ್ಪ ಬಂದ ಅಂತಾ ಅರ್ಥ. ಮಗಾ ಗ್ಯಾರೇಜ್ ನೋನು ಗೌಡಪ್ಪ ಕಮ್ಮಿ ಕಾಸು ಕೊಟ್ಯಾನೆ ಅಂತಾ ಹಳೇ ಟೈರು ಅಂಗೇ ಹಳೇ ಇಂಜಿನ್ ಮಡಗಿದ್ದ. ಗೌಡಪ್ಪ ಮನೆ ಮುಂದೆ ಸ್ಟಾರ್ಟ್ ಮಾಡಿದ ಅಂದ್ರೆ ಅವನ ಹೆಂಡರು ಬೆಳ್ಳಗಿದ್ದೋಳು ಏಕ್ ಧಮ್ ಕಪ್ಪು ಆಗೋಳು. ಕಾರಿಗೊಂದಿಷ್ಟು ಬೆಂಕಿಹಾಕ. ಹೊಗೆಗೆ ಮನ್ಯಾಗೆ ತಿಗಣೆ ಆಗಿತ್ತಂತೆ. ಬೆಳಗ್ಗೆನೇ ನಮಗೆ ಗೌಡಪ್ಪನಿಂದ ಮಿಸ್ ಕಾಲ್ ಕೊಟ್ಟ ಅಂದ್ರೆ. ಎಲ್ಲಾರೂ ಬಂದು ಕಾರು ತಳ್ಳಿರಿ ಅಂತಾ ಅರ್ಥ. ಜಾಗಿಂಗ್ ಮಾಡೋರು, ರಂಗೋಲಿ ಹಾಕೋರು, ಕೆರೆತಾವ ಹೋಗೋರು. ಒಳ್ಳೆ ಗಾಳಿ ಕುಡಿಯುವಾ ಅಂತಾ ಬಂದ್ರೆ ಸೀಮೆ ಎಣ್ಣೆ ಹೊಗೆ ಕುಡಿಬೇಕಲ್ಲಾ ಅಂತಾ ಗೌಡಪ್ಪಂಗೆ ಸಾಪ ಹಾಕೋರು. ಏ ಥೂ, ಗೌಡಪ್ಪನ ಕಾರಿಗೊಂದಿಷ್ಟು ಬೆಂಕಿ ಹಾಕ ಅನ್ನೋರು.
ಗೌಡಪ್ಪನ ಕಾರ್ ಬಂದ್ರೆ. ಎಲ್ಲಾವೂ ಬಾಗಿಲು ಹಾಕೋವು. ಗೌಡಪ್ಪ ನೋಡಲಾ ನಮ್ಮ ಕಂಡ್ರೆ ಎಷ್ಟು ಭಯ ಮಡಗವ್ರೆ ಅನ್ನೋನು. ನೋಡಿದ್ರೆ ಹೊಗೇಗೆ ಎಲ್ಲಿ ಮನೆಗೆ ತಿಗಣೆ ಬತ್ತದೋ ಅಂತಾ.
ಒಂದು ಸಾರಿ ಸುಬ್ಬನ ಅವ್ವಂಗೆ ಸಾನೇ ಹೊಟ್ಟೆನೋವು ಅಂತಾ ಗೌಡಪ್ಪನ ಕಾರ್ ತಗೊಂಡು ಹೋಗಿದ್ದ. ಮಗಾ ಗೌಡಪ್ಪ ಬ್ರೇಕ್ ಹಿಡಿಲಿಲ್ಲಾ ಅಂತಾ ಮರಕ್ಕೆ ಗುದ್ದಿ ಸುಬ್ಬನ ಅವ್ವನ ಎರಡು ಕಾಲು ಸ್ಕ್ರಾಪ್ ಮಾಡಿದ್ದ. ಈಗ ಸುಬ್ಬಂದೆ ಎಡಗೈ ಬಲಗೈ ವ್ಯವಹಾರ ಆಗೈತೆ. ಮಗಾ ಆಸ್ಪತ್ರಾಗೆ ಕಾರ್ ಸ್ಟಾರ್ಟ್ ಮಾಡಕ್ಕೆ ಡಾಕಟರುನ್ನು ತಳ್ಳಕ್ಕೆ ಹಚ್ಚಿದ್ದ. ಮಿನಿಸ್ಟರ್ ಕಾರು ಅಂತಾ ಗ್ರಾಮ ಪಂಚಾಯ್ತಿಯಿಂದ ಕಾರಿನ ಡೀಸೆಲ್ ಗೆ ಅಂತಾ 2ಸಾವಿರ ರೂಪಾಯಿ ಕೊಡೋರು. ಮಗಾ ನ್ಯಾಯಬೆಲೆ ಅಂಗಡೀಲಿ ಸೀಮೇ ಎಣ್ಣೆ ಹಾಕುಸ್ತಿದ್ದ. ಅಲ್ಲೂ ಜಗಳ.
ನೋಡ್ರಲಾ ಇವತ್ತು ಬಚ್ಚೇಗೌಡರು ಬತ್ತಾರ್ವೆ ಅವರನ್ನ ಬರ ಮಾಡಿಕೊಳ್ಳೋದಿಕ್ಕೆ ನಾವೆಲ್ಲಾ ಕಾರಲ್ಲೇ ಹೋಗುವಾ ಅಂದ. ಸರಿ ಅಂದು ಹೊಂಟ್ವಿ. ನಮ್ಮ ಕಾರ್ ಸವಂಡ್ ನೋಡಿ ಪೊಲೀಸ್ ರೆಲ್ಲಾ ಓಡಿ ಬಂದ್ರು. ಬಚ್ಚೇಗೌಡರು ಹಿಂಗೆ ಆಗ್ ಬಿಟ್ಟಿದಾರಲ್ಲಾ ಅಂದು ಕಾರ್ಯಕರ್ತರು ಹಾರ ಹಾಕಿದ್ರು. ಆಮ್ಯಾಕೆ ಗೌಡಪ್ಪ ಅಂತಾ ಗೊತ್ತಾದ್ ಮ್ಯಾಕೆ ಹಾರ ವಾಪಸ್ಸು ತಗೊಂಡ್ರು. ಹಂಗೇ ಸೈಡಿಗೆ ಬಾರಲೇ ಅಂದ್ರು. ಸರಿ ಬಚ್ಚೇಗೌಡರು ಬಂದ್ರು. ಎಲ್ಲಾ ಕಾರು ಹಳ್ಳಿ ಕಡೆ ಹೊಂಟ್ತು. ನಮ್ದು ಸಾನೇ ಸವಂಡ್ ಇದ್ದಿದ್ದಕ್ಕೆ ಪೊಲೀಸ್ನೋರು ನಮ್ಮ ಕಾರಿಗೆ ಸೆಕ್ಯೂರಿಟಿ ಕೊಟ್ಟಿದ್ರು. ನಾವು ಬಂದು ಹತ್ತು ನಿಮಿಟ್ ಆದ್ ಮ್ಯಾಕೆ ಬಚ್ಚೇಗೌಡರುದ್ದು ಒಂದೇ ಕಾರು ಬಂತು. ಪೊಲೀಸ್ನೋರು ಸೈಡಿಗೆ ಹಾಕಪ್ಪ ಅಂದ್ರಂತೆ. ಅದ್ರಾಗೆ ಇಬ್ಬರು ಇನ್ಸ್ ಪೆಕ್ಟರ್ ಗೆ ಸಸ್ಪೆಂಡ್ ಮಾಡಿದ್ರು. ಯಾಕ್ ಸಾ. ಲೇ ನನಗೆ ಸೆಕ್ಯೂರಿಟಿ ಕೊಡ್ರಲಾ ಅಂದ್ರೆ ಆ ಗೌಡಪ್ಪಂಗೆ ಸೆಕ್ಯೂರಿಟಿ ಕೊಟ್ಟಿದ್ದೀರಾ ಅಂದ್ರು.
ಸರಿ ಕಾರು ಸೈಡಿಗೆ ಹಾಕಕ್ಕೆ ಅಂತಾ ಗೌಡಪ್ಪ ಕಾರು ಸುರು ಮಾಡ್ದ. ಕಪ್ಪು ಹೊಗೇಲಿ. ಬಚ್ಚೇಗೌಡನ ಬದಲು ಅವನ ಪಿ.ಎಗೆ ಜನ ಹಾರ ಹಾಕಿದ್ವು. ಏ ಥೂ. ಬಚ್ಚೇಗೌಡರು ಸಾನೇ ಕೋಪ ಆಗಿದ್ರು. ಭಾಸಣ ಮುಗಿತ್ತಿದ್ದಾಗೆನೇ ನಿಂಗನ ಚಾ ಕುಡಿದು ಹೊಂಟೇ ಹೋದ್ರು. ಮಗನೇ ಬೆಂಗಳೂರಿಗೆ ಟ್ರಾನ್ಸ್ ಫರ್ ಅಂತಾ ಬಾ ಐತೆ ಅಂದ್ರು. ಸರಿ ಬೆಳಗ್ಗೆ ಗೌಡಪ್ಪನ ಮನೆತಾವ ಹೋದ್ರೆ ಕಾರು ಇರ್ಲಿಲ್ಲ. ಯಾಕ್ರೀ ಗೌಡ್ರೆ. ನೋಡಲಾ ಕೆಂಪು ದೀಪ ಹಾಕಿದ್ದಕ್ಕೆ ಪೊಲೀಸ್ನೋರು ಕಾರು ಸೀಜ್ ಮಾಡವ್ರೆ ಅಂಗೇ ನನ್ ಮ್ಯಾಕೆ ಒಂದು ಹತ್ತು ಕೇಸು ಹಾಕವ್ರೆ ಅಂದ. ಯಾಕ್ರೀ ಹಸಿರೇ ಉಸಿರು ಜಾಗೃತಿ ವೇದಿಕೆಯೋರು ವಾತಾವರಣ ಮಲೀನ ಮಾಡ್ತಾ ಇದಾನೆ ಅಂತಾ ಕೇಸು ಹಾಕವ್ರೆ ಅಂದ. ಮತ್ತೆ, ಕಾರು ಕಾರು ಬೇಡ ಕಾರುಬಾರು ಬೇಡ್ರಲಾ ಅಂದು ಬೀಡಿ ಹಚ್ಕಂಡ.ಮಗಂದು ಕಾರಿಗೆ ಬೆಸೀಟ್ ಹೊದ್ಸಿದ್ದ. ಕಲರ್ ಡಿಮ್ ಆಯ್ತದೆ ಅಂತಾ. ಈಗ ರಾತ್ರಿ ಹೊತ್ತು ಕಾರ್ನಾಗೆ ಭಿಕ್ಸುಕರು ಮಲಗ್ತಾರಂತೆ.
Comments
ಉ: ಗೌಡಪ್ಪನ ಗೂಟದ ಕಾರುಬಾರು
In reply to ಉ: ಗೌಡಪ್ಪನ ಗೂಟದ ಕಾರುಬಾರು by manju787
ಉ: ಗೌಡಪ್ಪನ ಗೂಟದ ಕಾರುಬಾರು
ಉ: ಗೌಡಪ್ಪನ ಗೂಟದ ಕಾರುಬಾರು
In reply to ಉ: ಗೌಡಪ್ಪನ ಗೂಟದ ಕಾರುಬಾರು by ಗಣೇಶ
ಉ: ಗೌಡಪ್ಪನ ಗೂಟದ ಕಾರುಬಾರು
ಉ: ಗೌಡಪ್ಪನ ಗೂಟದ ಕಾರುಬಾರು
ಉ: ಗೌಡಪ್ಪನ ಗೂಟದ ಕಾರುಬಾರು
In reply to ಉ: ಗೌಡಪ್ಪನ ಗೂಟದ ಕಾರುಬಾರು by raghusp
ಉ: ಗೌಡಪ್ಪನ ಗೂಟದ ಕಾರುಬಾರು
ಉ: ಗೌಡಪ್ಪನ ಗೂಟದ ಕಾರುಬಾರು
In reply to ಉ: ಗೌಡಪ್ಪನ ಗೂಟದ ಕಾರುಬಾರು by bhalle
ಉ: ಗೌಡಪ್ಪನ ಗೂಟದ ಕಾರುಬಾರು