ಗಣೇಶ ವಿಸರ್ಜನ ಸಂಪ್ರದಾಯ

ಗಣೇಶ ವಿಸರ್ಜನ ಸಂಪ್ರದಾಯ

ಈಚೆಗಷ್ಟೆ ಈ ಸಾರಿಯ ಗಣಪತಿ ಹಬ್ಬ ಮುಗಿಯಿತು, ನಮ್ಮ ಮನೆಯಲ್ಲಿ ಇಟ್ಟ ಗಣಪತಿ ಗೌರಿಯನ್ನು ಎಲ್ಲರು ತುಂಬಾ ಚೆನ್ನಾಗಿದೆ ಅಂತ ಹೊಗಳುವವರೆ , ಹಿಂದೆಯೆ ಅವರ ಪ್ರಶ್ನೆ " ಏಕೆ ನೀವು ಈ ಸಾರಿ ಮಣ್ಣಿನ ಗಣಪ ತಂದಿಲ್ಲ ಅಂತ" ನಿಜ ನಾವು ಕಳೆದ ವರ್ಷದಿಂದ ಮಣ್ಣಿನ ಗಣಪ ಗೌರಿಯನ್ನು ತಂದು ಪೂಜೆ ಮಾಡುತ್ತಿಲ್ಲ. ಅದರ ಬದಲು ದೇವರ ಮುಂದಿನ ಚಿಕ್ಕ ಬೆಳ್ಳಿಗಣಪನನ್ನೆ ಇಟ್ಟು ಪೂಜಿಸುತ್ತೇವೆ, ಅದು ಹೂವಿನಲ್ಲೆ ಮುಚ್ಚಿ ಹೋದರೆ ಕಾಣಿಸುವದಿಲ್ಲ ಅದಕ್ಕೆ ಅಲಂಕಾರಕ್ಕೆ ಅಂತ ವೈಟ್ ಮೆಟಲೆ ನ ದೊಡ್ಡ ಗಣಪತಿ ಇಡುತ್ತಿದ್ದೇವೆ. ಹಾಗಾಗಿ ನೋಡಲು ಸುಂದರವಾಗಿಯೆ ಕಾಣುತ್ತದೆ. ರಾತ್ರಿ ಗಣಪನನ್ನು ನೀರಿನಲ್ಲಿ ಬಿಡುವಂತಿಲ್ಲ . ವಿಸರ್ಜನೆ ನಂತರ ಗಣಪ ತನ್ನ ಮೊದಲಿನ ದೇವರ ಮನೆ ಸೇರುತ್ತಾನೆ



 

ನಾಲಕ್ಕು ವರ್ಷಗಳ ಹಿಂದಿನ ಮಾತು , ಮಣ್ಣಿನ ಗಣಪತಿ ಇಡುತ್ತಿದ್ದೆವು ಆ ವರ್ಷ ಗಣಪತಿ ಬಿಡುವುದೆ ಒಂದು ಸಮಸ್ಯೆ , ಬೆಂಗಳೂರಿನಲ್ಲಿ ಕೆರೆ ಕುಂಟೆ ಗಳನ್ನು ಹುಡುಕುತ್ತ ಹೋಗುವ ಹಾಗಿಲ್ಲ ಅಲ್ಲಿ ಇಲ್ಲಿ ಕೊಳವೆ ಭಾವಿ ಇದ್ದೀತು ಅದರಲ್ಲಿ ಅವನನ್ನು ತೂರಿಸುವಂತಿಲ್ಲ. ಮತ್ತೀನೇನು ಎಲ್ಲ ಮನೆಗಳಂತೆಯೆ ನಾನು ಗಣಪನನ್ನು ಬಕೆಟ್ ನೀರಿನಲ್ಲಿ ಬಿಡಲು ನಿರ್ದರಿಸಿ ಮನೆಯ ಹಿಂಬಾಗದಲ್ಲಿ ನೀರು ಇಟ್ಟು ಗಣಪನನ್ನು ಮುಳುಗಿಸಲು ಪ್ರಯತ್ನಿಸಿದೆ ಆದರೆ ಆ ಗಣೇಶ ಏಕೋ ಏನು ಮಾಡಿದರು ಮುಳುಗುತ್ತಿಲ್ಲ, ಮೇಲೆ ಮೇಲೆ ಬರುತ್ತಿದ್ದಾನೆ , ನೀರಿನಲ್ಲಿ ಅದುಮಿ , ಮೇಲೆ ಒಂದು ಹಲಗೆ ಇಟ್ಟು ಅದರ ಮೇಲೆ ಕಲ್ಲಿನ ಬಾರ ಹಾಕಿ ಬಿಟ್ಟೆ. -೪ ದಿನದಲ್ಲಿ ಗಣಪ ನೀರಿನಲ್ಲಿ ಕರಗುತ್ತಿರುವಂತೆಯೆ ಒಂದು ವಿದವಾದ ಕೆಟ್ಟ ವಾಸನೆ ಮನೆಯಲ್ಲೆಲ್ಲ ತುಂಬಿ ಕೊಂಡಿತು. ನಂತರ ತೆಗೆದು ನೋಡಿದೆ ಕೆಸರಿನಂತಹ ಯಾವುದೋ ಬಣ್ಣದ ದ್ರವ , ಹತ್ತಿರ ನಿಲ್ಲಲು ಆಗುತ್ತಿಲ್ಲ. ಮುಂದಿನ ಸಮಸ್ಯೆ ಅದನ್ನು ಏನು ಮಾಡುವುದು ಗಿಡಗಳಿಗೆ ಖಂಡೀತ ಹಾಕುವಂತಿಲ್ಲ , ರಸ್ತೆಗೆ ಸುರಿಯುವಂತಿಲ್ಲ, ಚರಂಡಿಗೆ ?? ಛೇ..ಛೇ.. ಪೂಜಿಸಿದ ಗಣಪನ ಅವಸ್ಥೆ ಇದೆ?? ನಾವು ಭಕ್ತಿಯಿಂದ , ಸ್ನಾನ ಮಾಡಿ , ಶುಭ್ರವಾಗಿ ಸಿದ್ದವಾಗಿ ಪೂಜಿಸುವ ಗಣಪತಿ ಇಷ್ಟು ಕೊಳಕೆ?? ಅದಕ್ಕೆ ಆ ಕ್ಷಣಕ್ಕೆ ನಿರ್ದರಿಸಿದೆ ಇನ್ನೆಂದು ಮಣ್ಣಿನ ಗಣಪತಿ ತರುವದಿಲ್ಲ ಅಂತ.


ಸಂಪ್ರದಾಯ ಪದ್ದತಿಗಳು ನಿಂತ ನೀರಾಗಬಾರದಲ್ಲವೆ? ಹರಿವ ನೀರಾಗಬೇಕು ಸಂಪದ ಗೆಳಯರೆಲ್ಲ ಎನನ್ನುವರೋ? ನೋಡಬೇಕು

Rating
No votes yet

Comments