ರಾಷ್ಟ್ರೀಯ ಸ್ವಯಂ ಸೇವಕ ಸಂಘ-೭
ಆತ್ಮೀಯ ಸಂಪದಿಗರೆ,
ಗೆಳೆಯ ವಿನಾಯಕ ಮುತಾಲಿಕ ದೇಸಾಯಿ ಅವರು ಆರ್ ಎಸ್ ಎಸ್ ಬಗ್ಗೆ ಬರೆಯುತ್ತಿದ್ದ ಲೇಖನಗಳ ಸರಣಿಯನ್ನು ಅವರು ರಜೆಯ ಮೇಲಿರುವ ಎರಡುವಾರಗಳ ಕಾಲ ಮುಂದುವರಿಸುವ ಕೆಲಸವನ್ನ ನನಗೆ ಒಪ್ಪಿಸಿದ್ದರು. ಕಳೆದ ೮-೧೦ ದಿನಗಳಿಂದ ಅದನ್ನು ಮಾಡಲು ಆಗಿರಲಿಲ್ಲ. ಇವತ್ತಿನಿಂದ ಶುರು ಮಾಡ್ತಾ ಇದ್ದೀನಿ. ವಿನಾಯಕ ಅವರ ಸಂಪರ್ಕದಿಂದ ಹೋದ ತಿಂಗಳಿನ್ನೂ ಆರ್ ಎಸ್ ಎಸ್ ಸೇರಿದ ನನಗೆ ಆ ಸಂಸ್ಥೆಯ ಬಗ್ಗೆ ತಿಳಿದುಕೊಳ್ಳಲು ಅವರು ಕೊಟ್ಟಿರುವ ಪುಸ್ತಕ ಉಪಯುಕ್ತವಾಗಿದೆ.
ದಂಗೆಯ ನಂತರ ನಾಗಪುರದಲ್ಲಿ ಧನ್ತೋಲಿ ಭಾಗದಲ್ಲಿ ಎರಡನೇ ಶಾಖೆ ಆರಂಭವಾಯಿತು.ಅದೇ ಸಮಯದಲ್ಲಿ ಆಜನ್ಮ ಸೇವಾವ್ರತ - ವೀರವ್ರತಗಳ ದೀಕ್ಷೆ ನೀಡುವ ಪ್ರಜ್ಞಾ ಸ್ವೀಕಾರದ ಕೆಲಸವೂ ಆರಂಭವಾಯಿತು. ಸಂಘದಲ್ಲಿ ಪರಿಜ್ಞಾ ವಿಶಿಯ ಮೊಟ್ಟಮೊದಲನೆಯ ಕಾರ್ಯಕ್ರಮ ೧೯೨೮ ಮಾರ್ಚ್ ನಲ್ಲಿ ನಡೆಯಿತು. ನಾಗಪುರ- ಅಮರಾವತಿ ರಸ್ತೆಯ ಪಕ್ಕದಲಿ ನಾಗಪುರದಿಂದ ೩-೪ ಕಿಮಿ ದೂರದಲ್ಲಿ ದಟ್ಟವಾದ ಗಿಡಮರಗಳಿಂದ ಕೂಡಿರುವ ಬೆಟ್ಟವೊಂದಿದೆ. ಅಲ್ಲಿಗೆ 99 ಜನ ಸ್ವಯಂಸೇವಕರನ್ನು ಡಾಕ್ಟೋರ್ಜಿ ಕರೆದು ತಂದಿದ್ದರು. ಬೆಟ್ಟದ ಮೇಲೆ ಪೂರ್ವ ದಿಕ್ಕಿಗೆ ಇದ್ದ ಒಂದು ಬಾವಿಯ ಹತ್ತಿರ ಸಮೀಪ ಪವಿತ್ರ ಭಾಗವ ಧ್ವಜವನ್ನ ಏರಿಸಿ ಪ್ರತಿಜ್ಞ ವಿಧಿಯ ಗಂಭೀರ ಕಾರ್ಯಕ್ರಮ ನಡೆಯಿತು. ಡಾಕ್ಟರ್ಜಿ ಅವರು ನಡೆಸುತ್ತಿದ್ದ ಕ್ರಾಂತಿಕಾರಿ ಜೀವನದಂತೆ ಇದೂ ಕೂಡ ತುಂಬಾ ಪ್ರಭಾವಿ ಆಗಿತ್ತು. ಅಂದು ಎಲ್ಲ ಸ್ವಯಂ ಸೇವಕರು ದಿನವಿಡೀ ಪ್ರಕೃತಿಯ ಮಡಿಲಲ್ಲೇ ಕಳೆದು ಸಂಜೆ ನಾಗಪುರಕ್ಕೆ ಮರಳಿದರು. ಸಂಘ ಕಾರ್ಯದ ವಿಸ್ತಾರಕ್ಕಾಗಿ ಡಾಕ್ಟರ್ಜಿಅವರು ಪ್ರವಾಸ ಮಾಡುತ್ತಿದ್ದರು. ತಾವು ಹೋದ ಊರುಗಳಲ್ಲಿನ ಪ್ರತಿಷ್ಟಿತರನ್ನು ಒಟ್ಟುಗೂಡಿಸಿ ಸಂಘದ ವಿಚಾರಗಳನ್ನು ವಿವರಿಸುತ್ತಿದ್ದರು. ದೇಶದ ಪರಿಸ್ಥಿತಿಯ ವಿಶ್ಲೇಷಣೆ, ಹಿಂದೂಗಳ ಸಂಘಟನೆಯ ಅವಶ್ಯಕತೆ ಇತ್ಯಾದಿಗಳನ್ನು ಮನಮುಟ್ಟಿಸುತ್ತಿದ್ದರು. ನಾಗಪುರದ ದಂಗೆಯನ್ನು ಸ್ವಯಂಸೇವಕರು ಎದುರಿಸಿದ್ದು ಆಗಲೇ ಎಲ್ಲೆಡೆಯೂ ಜನಜನಿತವಾಗಿತ್ತು. ಪ್ಸರ್ಶ್ನೋತ್ತರಗಳ ಕೊನೆಯಲ್ಲಿ ಸಂಘದ ಪ್ರತಿಜ್ಞೆ ಸ್ವೀಕರಿಸಲು ಅವರು ನೆರೆದಿದ್ದವರನ್ನು ಕೇಳಿಕೊಳ್ಳುತ್ತಿದ್ದರು. ಪ್ರವಾಸದಲ್ಲಿ ಅವರಬಳಿ ಯಾವಾಗಲೂ ಭಗವಾ ದ್ವಜ, ಮಾರುತಿಯ ಪಟ ಹಾಗೂ ಸಂಘ ಪ್ರತಿಜ್ಞೆಯ ಪುಸ್ತಕಗಳು ಇರುತ್ತಿದ್ದವು. ಅವುಗಳನ್ನು ಹಂಚಿದ ಬಳಿಕ ಶಾಖೆ ಆರಂಭವಿಗುವುದನ್ನು ಘೋಷಿಸಿ ನಿತ್ಯ ಶಾಖೆಯ ರೂಪ ಕೊಡಲಾಗುತ್ತಿತ್ತು.
ಸಂಘಕಾರ್ಯವು ತನ್ನ ಖರ್ಚು ವೆಚ್ಚಗಳಿಗೆ ಸದಾ ಸ್ವಾವಲಮ್ಬಿಯಾಗಿರಬೇಕೆಮ್ಬುದು ಡಾಕ್ಟರ್ಜಿ ಅವರ ಆಗ್ರಹ ವಾಗಿದ್ದಿತ್ತು. ಸಂಘಟನೆಯು ಯಾರ ಹಂಗಿನಲ್ಲೂ ಇರಬಾರದು, ಸ್ವಯಂಸೇವಕರು ತಮ್ಮ ಶ್ರದ್ಧೆ ಮತ್ತು ಕಾರ್ಯನಿಷ್ಟೆಯ ಪ್ರತೀಕವಾಗಿ ಅಂತಃಕರಣದಿಂದ ಸಂಘಕ್ಕೆ ಧನಸಹಾಯ ಮಾಡಬೇಕು. ಅದೇ ಸಂಘದ ನಿಜವಾದ ಶಕ್ತಿ. ಇಂತಹ ಕಲ್ಪನೆಯಿಂದ ಗುರುದಕ್ಷಿಣೆಯ ಪದ್ದತಿ ವಿಕಾಸವಾಯಿತು.
೧೯೨೮ರ ವ್ಯಾಸಪೂರ್ನಿಮೆಯ ಮುನ್ನಾದಿನ ಡಾಕ್ಟರ್ಜಿ ಎಲ್ಲ ಸ್ವಯಂಸೇವಕರಿಗೆ ನಾಳೆ ಗುರುಪೂರ್ನಿಮೆಯ ಅಂಗವಾಗಿ ತಮ್ಮ ಶಕ್ತ್ಯಾನುಸಾರ ದಖ್ಸಿನೆಯನ್ನು ಸಮರ್ಪಿಸಬೇಕೆಂದು ಸೂಚನೆ ಕೊಟ್ಟರು. ಅನೇಕ ಊಹಾಪೋಹಗಳ ನಡುವೆ ಸೇವಕರು ಸಿದ್ಧರಾಗಿ ಬಂದರು. ಅಂದು ಧ್ವಜಾರೋಹಣದ ನಂತರ ಮಾತನಾಡಿದ ಅವರು "ಸಂಘವು ಯಾವುದೇ ವ್ಯಕ್ತಿಯನ್ನು ಗುರುವಾಗಿ ಸ್ವೀಕರಿಸದೆ,ರಾಷ್ಟ್ರದ ಇತಿಹಾಸ, ಸಂಸ್ಕೃತಿಗಳ ಪ್ರತೀಕ ವಾದ ಭಾಗವಾಧ್ವಜವನ್ನೇ ಗುರುವಾಗಿ ಸಂಘವು ತಿಳಿಯುತ್ತದೆ" ಎಂದು ವಿವರಿಸಿದರು.
ಅಂದು ನಡೆದ ಸಂಘದ ಮೊದಲ ಗುರುದಕ್ಷಿಣ ಉತ್ಸವದಲ್ಲಿ ಒಟ್ಟು ೧೮ ರೂಪಾಯಿಗಳಷ್ಟು ಹಣ ಒಟ್ಟುಗೂದಿತ್ತು. ವಿಶೇಷವೆಂದರೆ ಅಂದು ಒಬ್ಬ ಸ್ವಯಂಸೇವಕ ತನ್ನಲ್ಲಿದ್ದ ಅರ್ಧ ಕಾಸನ್ನು ಮಾತ್ರ ಅರ್ಪಣೆ ಮಾಡಿದ್ದ. ಗಂಗೋತ್ರಿಯಲ್ಲಿ ಹನಿಯಾಗಿ ಹರಿವ ಗಂಗೆಯಂತೆ ಗುರುದಕ್ಷಿಣೆಯ ಸ್ವರೂಪ ಸಹ ಕ್ರಮೇಣವಾಗಿ ವಿಶಾಲವಾಗುತ್ತಾ ಸಂಘದ ಆರ್ಥಿಕ ವ್ಯವಸ್ಥೆಯನ್ನು ಪೂರೈಸುವುದರೊಂದಿಗೆ ಅದರ ತಾತ್ವಿಕ ಬುನಾದಿಯನ್ನು ಸುಧ್ರುಡ ಗೊಳಿಸುವ ಸಮರ್ಥ ಸಾಧನೆಯ ರೂಪವನ್ನು ಪಡೆಯಿತು.