ಅಂತ್ಯಾಕ್ಷರಿ

ಅಂತ್ಯಾಕ್ಷರಿ

ಬರಹ

ಗೌಡಪ್ಪನ ಮನೇಲಿ ಊಟಕ್ಕೆ ಅಂತಾ ಕರೆದಿದ್ದ. ಎಲ್ಲಾರೂ ಊಟಕ್ಕೆ ಅಂತಾ ಕೂತ್ವಿ. ಗೌಡಪ್ಪನ ಹೆಂಡರು ಬಡಿಸ್ತಿದ್ದಾಗೆನೇ ದೊನ್ನೆ ಸೀನ. ಅಂಗೇ ಖಾಲಿ ಮಾಡೋನು. ಗೌಡಪ್ಪನ ಹೆಂಡರು ನಿಮ್ಮದು "ಎಂಕಟ ರಮಣ ಗೋವಿಂದಾ " ವಂಶನಾ ಅಂತಾ ಸೀನಂಗೆ ಕೇಳಿದ್ಲು. ಹೇಯ್ ನಿಮಗೆ ಹೆಂಗೆ ಗೊತ್ತಾತು. ನೀನು ಪೋಣಿಸ್ತಾ ಇರೋದು ನೋಡಿದ್ರೆ ಗೊತ್ತಾಯ್ತದೆ ಅಂದ್ಲು. ಕಿಸ್ನ ನೋಡಕ್ಕೆ ಸಣ್ಣಗೆ ಇದ್ರು ಸಾನೇ ಸೆಳಿತಾ ಇದ್ದ. ಬೆಳಗ್ಗೆ ಏನಲಾ ನಿನ್ ಕತೆ ಅಂತಿದ್ದ ಸುಬ್ಬ. ಇನ್ ಪುಟ್ = ಔಟ್ ಪುಟ್ ಅಂದ ಕಿಸ್ನ. ನೋಡ್ರಲಾ ಏನೇನೋ ಮಾತಾಡ್ ಬೇಡ್ರಿ ಅಂತ್ಯಾಕ್ಷರಿ ಆಡುವಾ ಅಂದ ಗೌಡಪ್ಪ. ನೋಡ್ರಲಾ ಪಿಚ್ಚರ್ ಹಾಡು ಹೇಳಲೇ ಬೇಕು ಅಂತಾ ಇಲ್ಲ. ರಾಗವಾಗಿ ಮಾತು ಹೇಳಿದ್ರೆ ಸಾಕು ಅಂದ.

 

ಸರಿ ಸುಬ್ಬ ಸುರು ಮಾಡ್ದ. ಮೊದಲು ಅಣ್ಣೋರು ಹಾಡು ಅಂದು

ಹೃದಯ ಸಮುದ್ರ ಕಲಕಿ

ಹೊತ್ತಿದೆ ದ್ವೇಸದ ಬೆಂಕಿ

ಉರಿಯುತ್ತಿದೆ ಮೈಎಲ್ಲಾ ಉರಿಯುತ್ತದೆ ಅಂದ. ಲೇ ಇದು ಕುಮಾರ್ ಬಂಗಾರಪ್ಪನ ಪಿಚ್ಚರ್ ಅಲ್ವೇನಲಾ. ಆದ್ರೆ ಅಣ್ಣೋರು ಕುದುರೆ ಮ್ಯಾಕೆ ಮೊದಲು ಬಾರಿ ಹೇಳವ್ರೆ ಅಂದ ಸುಬ್ಬ.

 

ಗೌಡ್ರೆ "ದ" ಇಂದ ಸುರು ಹಚ್ಕಳ್ಳಿ

ದಮ್ಮೀ ದಮ್ಮೀ ದಮ್ಮಿ

ಮುದ್ದು ಮಾಡು ದಮ್ಮಿ

ಔತಣ ಕೊಡಲೇ ನಾನು

ಲೇ ಏನಲಾ ಇದು ಮಮ್ಮಿನಾ ದಮ್ಮಿ ಅಂತಾವ್ನೆ ಅಂದ ತಂತಿ ಪಕಡು ಸೀತು. ಈಗ ನೋಡು ನಾನು ಹೇಳ್ಯೀನಿ ಅಂದ.

 

ನಮೋ ಭೂತನಾಥ

ಏನಿದು ಗಬ್ಬುನಾಥ

ಊಟಕ್ಕೆ ಕರೆದು

ಏನಿದು ನಿನ್ನ ಆಟ

ಏನಲಾ ಸತ್ಯ ಹರೀಶ್ಚಂದ್ರ ಪಿಚ್ಚರ್ ಹಾಡು ಹಿಂಗೈತಾ ಅಂದಾ ಗೌಡಪ್ಪ. ಹೊಸದಾಗಿ ಈಸ್ಟ್ ಮನ್ ಕಲರ್ ಮಾಡಿದ್ ಮ್ಯಾಕೆ ಗುರುಕಿರಣ್ ಹಿಂಗೆಯಾ ರೀಮಿಕ್ಸ್ ಮಾಡಿರೋದು. ಏನೋಪ್ಪಾ. ನಾನು ಹಳೇ ಪಿಚ್ಚರ್ ಮಾತ್ರ ನೋಡಿರೋದು ಅಂದಾ ಗೌಡಪ್ಪ.

 

"ಟ" ಹೇಳಲಾ ಅಂದ ನಿಂಗಂಗೆ

ಚಲ್ಟಾ ಚಲ್ಟಾ ಚಲ್ಟಾ

ನೀನು ಇಲ್ಲದೆ ಬದುಕಿಲ್ಲಾ ಚಲ್ಟಾ

ಚಾ ಪುಡಿ ಚಲ್ಟಾ, ಕಾಫಿ ಪುಡಿ ಚಲ್ಟಾ

ಚಲ್ಟಾ ಚಲ್ಟಾ ಚಲ್ಟಾ. ಇದಕ್ಕೆ ಕಟ್ಟಿಗೆ ಕಿಸ್ನ ಮ್ಯೂಸಿಕ್. ಢುಂ ಟಪ್ ಟಪ್. ಢುಂ ಟಪ್ ಟಪ್ ಅಂತಾ ತಟ್ಟೆ ಬಡೆದ. ಮಗಂದು ತಟ್ಟೇಲಿ ಇದ್ದಿದ್ದು ಮುದ್ದೆ ಗೌಡಪ್ಪನ ತಟ್ಟೇಲಿ ಇತ್ತಿ. ಇದೇನಮ್ಮಿ ನಾನು ಮೂರು ಮುದ್ದೆ ಕೇಳಿದ್ರೆ ನಾಕು ಬಡಿಸಿದಿಯಾ ಅಂತಿದ್ದ. ಹೆಂಗೈತೆ ಹೊಸಾ ಚಲ್ಟಾ ಹಾಡು ಅಂದಾ ನಿಂಗ.

 

ನೋಡ್ರಲಾ "ಲ" ಹೇಳ್ರಿ

ಲೀಲಾ ನೀನು ನನ್ನ ಲವ್ವರ್ರಾ

ಇಲ್ಲಾಂದ್ರೆ ನಾನೇ ನಿನ್ನ ಲವ್ವರ್

ಕೆರೆತಾವ ಭೇಟಿ, ಮನೇಲಿ ಬೈಟೂ ಕಾಫಿ

 ಅಂದಾ ಸುಬ್ಬ. ಇದೇನಲಾ ಹಾಡು. ಏ ನಾನೇ ಬರೆದಿದ್ದು ಅಂದ. ಏ ಥೂ. ಎಲ್ಲಿ ಹೋದ್ರೂ ಕೆರೆತಾವನೇ ಬತ್ತೀರಲಾ ಏ ಥೂ.

" ಪ " ಕನ್ರಲಾ

ಪಿ ಪೀ ಪೀ

ಪಿ ಪಿ ಪೊಂವ್ ಪೊಂವ್

ಪಿಪಿಪ್ಪಿ ಪೀ ಪೀ ಅಂದಾ ಕಿಸ್ನ.

ಇದೇನಲಾ ಲೇ ಮದುವೆ ಮನೇಲಿ ಹಿಂಗೇ ಅಲ್ಲೇನಲಾ ಹಾಡೋದು. ಬರೇ ಮ್ಯೂಸಿಕ್ ಆಟೆಯಾ ಅಂದ.

 

ಮತ್ತೆ " ಪ" ಬಂತಲಾ

ಪಾರು ಪಾರು ನೀ ಯಾರು

ಎಲ್ಲಿಂದ ಬಂದೆ ಯಾವ ಊರು

ನಿನ್ನ ಬಿಟ್ಟು ಬದುಕಲಾರೆ

ಎಂದೆಂದು ನೀನೆ ಪಾರು ಲೇ ಇದನ್ನ ಪುನೀತ್ ರಾಜ್ ಕುಮಾರ್ ಕೇಳಿದ್ರ ಟಾಕೀಸ್ನಾಗೆ ನೇಣು ಹಾಕಂತಾರೆ ಕಲಾ. ಅವರಲ್ಲ ಡೇರೆಕ್ಟರ್ ಪ್ರೇಮ್ ಕಲಾ.

 

" ರ " ಕನ್ಲಾ

ರಣರಂಗ ಜಗವೇ ಒಂದು ರಣರಂಗ

ರಂಗರಣ ವಾಯ್ತು. ರಂಗರಣ ರಣ ಆಯ್ತು

ಅಚ್ರಲಾ ಅರಿಸಿನ ಅಂದಾ ಸುಬ್ಬ. ಯಾಕಲಾ ಮಗಾ ಹಾಡು ಅಂತಾ ಪದ ಹಾಡ್ತಾವ್ನೆ ಅಂದ

 

ನೋಡಲಾ "ತ" ಬಂದೈತೆ

ಗೌಡನ ಹೆಂಡರು ಅಡುಗೆ ಮನೇಯಿಂದ ಬಂದೋಳೆ

ತಯ್ಯಾ ಥಕ್ಕ ತಯ್ಯಾ ಥಕ್ಕ

ಹಾಕು ಒಂದು ಹೆಜ್ಜೆಯಾ ತಯ್ಯಾ ಥಕ್ಕ

ಮಗಂದು ತಟ್ಟೆ ಮ್ಯಾಕೆ ಎಲ್ಲಾ ಕಾಲು ಇಟ್ಟಿದ್ಲು. ಡ್ಯಾನ್ಸ್ ಮಾಡೋ ಫೋರ್ಸಿಗೆ ಮುದ್ದೆ ಎಲ್ಲಾ ಗೋಡೆಗೆ ಅಂಟ್ಕಂಡ್ ಇದ್ವು. ತೆಗೆದ್ರೆ ಸುಣ್ಣ ಅಂಟ್ಕಂಡಿತ್ತು. ಅದನ್ನೇ ಕೊಡಿವಿ ಕಿಸ್ನಾ ಕ್ಯಾಡ್ ಬರೀಸ್ ಚಾಕಲೇಟ್ ತಿಂದಂಗೆ ತಿನ್ನೋನು. ಗೌಡಪ್ಪ ಏ ಥೂ ಹೋಗು ಅತ್ಲಾಗೆ ಅಂದ.

 

ನೋಡ್ರಲಾ "ಕ" ಬಂದೈತೆ. ಗೌಡ್ರೆ ಎಕ್ಸ್್ಟ್ರಾ ಪ್ಲೇಯರ್ ನಡೀತದಾ. ಮಗೆನೆ ಅವಳು ಅಡುಗೆ ಮಾಡ್ಲಿಲ್ಲಾ ಅಂದ್ರೆ. ಅಂತ್ಯಾಕ್ಸರಿನೇ ಇರ್ತಿಲ್ಲಿಲ್ಲಾ ಕನ್ಲರಲಾ.

 ಕಕಕಕಕಕಕಕಕ

ಕರಿ ಕಾಗೆ ಕರಿ ಇದ್ದಿಲಿ

ಕರಿ ರಸ್ತೆ ಕರಿ ಚೊಂಬು

ಕೆರೆತಾವ

ಏ ಥೂ ಮತ್ತೆ ಕೆರೆತಾವ ಅಂತಿದ್ದಾಗೆನೆ. ಎಲ್ಲಾ ಓಡಕ್ಕೆ ಸುರು ಮಾಡಿದ್ರು. ನೋಡಿದ್ರೆ ಮುದ್ದೆ ಬೆಂದೇ ಇರ್ಲಿಲ್ಲ. ತಂತಿಪಕಡು ಸೀತು ಮಾತ್ರ ಆರಾಮಾಗೆ ಇದ್ದ. ಯಾಕೇಂದ್ರೆ ಬರೀ ಮಜ್ಜಿಗೆ ಅನ್ನ ತಿಂದಿದ್ದ.

 

ನೋಡಲಾ " ವ" ಬಂದೈತೆ ಅಂದಾ ಗೌಡಪ್ಪ

ವಾರೆ ನೋಟದಾಗೆ

ನಿನ್ನ ಹೆಂಡರು ಗೌಡಪ್ಪ

ಸಂದಾಕಿ ಕಾಣ್ತಾವ್ಳೆ

ಆದ್ರೆ ನೀನು ಮಾತ್ರವಕ್ರ ಅಂದಾ ತಂತಿ ಸೀತು.

 

ಗೌಡಪ್ಪಂಗೆ ಉರಿದು ಹೋತು

ಮಜ್ಜಿಗೆ ಅನ್ನ ತಿಂದೇ ನಿನಗೆ ಇಷ್ಟು ಸಕ್ತಿ

ಇನ್ನು ಮುದ್ದೆ ತಿಂದ ನಮಗೆ ಎಸ್ಟು ಸಕ್ತಿ ಅಂದಾ ಗೌಡಪ್ಪ

 

ಸೀತು ಬಬ್ರುವಾಹನ ತರಾ ಆಗೋ ಹೋಗಿದ್ದ

ಎಲವೋ ಜಾರಿಣಿಯ ಮಗನೆ, ನಿನ್ನ ವಾಸನೆಗೆ ನಿನ್ನ ಹೆಂಡರು ಇಷ್ಟು ದಿನಾ ಬದುಕಿರೋದೆ ಹೆಚ್ಚು ಅಂತಹುದರಲ್ಲಿ ಆಹ್,. ಏ ಥೂ

ಎಲವೋ ತಂತಿ ಪಕಡು ಸೀತು. ನಾನು ಜಾರಿಣಿಯ ಮಗನಾದರೆ ನೀನು ವಾರಿಣಿಯ ಮಗನೆ, ತಿಂದದ್ದು ನಮ್ಮ ಮನೇಲಿ. ಮಾತನಾಡುತ್ತಿರುವುದು ನಮ್ಮ ಮನೇಲಿ ಅಂದೋನೆ ಹೊಡೆಯೋಕ್ಕೆ ಸುರುಹಚ್ಕಂಡ. ಮನೆ ಅನ್ನೋದು ಛತ್ರದ ಹಿಂದಗಡೆ ತಿಪ್ಪೆ ಆದಂಗೆ ಆಗಿತ್ತು. ಮಗಂದು ಇಬ್ಬರೂ ಪಕ್ಕ ಬಂದು ಕೂತರೆ ಹಳಸಿದ ವಾಸನೆ ಬರೋದು. ಈಗ ಗೌಡಪ್ಪನ ಮನೆ ಊಟ ಅಂದ್ರೆ ಅಂತ್ಯಾಕ್ಸರಿ ಮಾತ್ರ ಬೇಡ ಅಂತಾನೆ ಸೀತು.