ಮನುಷ್ಯ ದೇವರ ಒಂದು ಅಪೂರ್ಣ ಕೃತಿ ....

ಮನುಷ್ಯ ದೇವರ ಒಂದು ಅಪೂರ್ಣ ಕೃತಿ ....

ಎರಿಕ್ ಹಾಫರ್ ನ ಮಾತಿನಲ್ಲಿ - ಮನುಷ್ಯ ದೇವರ ಒಂದು ಅಪೂರ್ಣ ಕೃತಿ . ಹಾಗೂ ಆತನ ಪ್ರತಿಯೊಂದು ಹೋರಾಟ ದೇವರು ಅರ್ಧಕ್ಕೇ ಬಿಟ್ಟ ಕೆಲಸವನ್ನು ಪೂರ್ತಿಗೊಳಿಸುವ ಪ್ರಯತ್ನವಾಗಿದೆ

ಖಲೀಲ್ ಗಿಬ್ರಾನ್ ಹೇಳಿದ್ದು : ಬದುಕಿನ ಉದ್ದೇಶ ಬದುಕಿನ ರಹಸ್ಯವನ್ನು ಭೇದಿಸುವದಾಗಿದೆ. ಭಾವೋನ್ಮಾದ ಏಕಮಾತ್ರ ದಾರಿ.

ಈ ಹೇಳಿಕೆಗಳು ಅಮೃತಾ ಪ್ರೀತಮ್ ರ 'ರಸೀದಿ ತಿಕೀಟು' ಎಂಬ ಆತ್ಮಕಥನವನ್ನು ಓದುವಾಗ ಸಿಕ್ಕವು.

ಭಾವನಾತ್ಮಕವಾಗಿ ಕಾವ್ಯಮಯ ಶೈಲಿಯಲ್ಲಿ ಹೃದಯ ತಟ್ಟುವಂತೆ ಬರೆಯುವ ಅವರ ಇನ್ನೆರಡು ಕೃತಿಗಳನ್ನೂ ಓದಿದ್ದೇನೆ. 'ಜೇಬುಗಳ್ಳರು' ಶ್ರೇಷ್ಠವಾಗಿದ್ದು ನಾನು ಮತ್ತೆ ಮತ್ತೆ ಓದಬಯಸುವ ಪುಸ್ತಕಗಳಲ್ಲಿ ಒಂದು. ಸುನೇರಿ ಎಂಬ ಕಾವ್ಯ ಸಂಕಲನವೂ ಚೆನ್ನಾಗಿದೆ.

ಜೇಬುಗಳ್ಳರು ನಿಜಕ್ಕೂ ಸುಖ ಕೊಡುವ ಬರವಣಿಗೆ.

Rating
No votes yet