ತಿರುಕನ ನುಡಿಗಳು

ತಿರುಕನ ನುಡಿಗಳು

ನಾಳೆ ಸುಖವೋ ದುಖಃವೋ ಬಲ್ಲವರ್ಯಾರು ? ಇರುವ ನಾಲ್ಕು ದಿನ ಸಮಾಜಕ್ಕೆ ಉಪಕಾರಿಗಳಾಗಿ ಬಾಳುವುದನ್ನು ಕಲಿಯಿರಯ್ಯಾ. ಜಾತಿ ಜಾತಿ ಹೆಸರಿನಲ್ಲಿ ಬಡಿದಾಡಬೇಡಿರಯ್ಯಾ. ಆ ಜಾತಿ ಈ ಜಾತಿ ಎಂಬುವುಗಳೆಲ್ಲಾ ರಾಷ್ಟ್ರಮಹಾಪುರುಷನ ಅಂಗಾಂಗಗಳು ಕಾಣಿರಯ್ಯಾ ಎಂತೆಂಬೆನಾ ಪರಮೇಶದಾಸ. ಶವಾಸನವೆಂದರೆ ಕೈಕಾಲು ಚಾಚಿ ಮಲಗುವುದಲ್ಲ, ಜೊತೆಯಲ್ಲಿ ಮನಸ್ಸು ಶವವಾಗಬೇಕು. ಬೆಣ್ಣೆಯನ್ನು ಒಲೆಯ ಮೇಲಿಟ್ಟು ಕಾಸುವಾಗ ಅದು ಚುರ್ ಚುರ್ ಎಂದು ಧ್ವನಿಗೈಯುತ್ತದೆ, ಆದರೆ ಅದೇ ಬೆಣ್ಣೆ ತುಪ್ಪವಾದಾಗ ಅಲ್ಲಿ ನಿಶ್ಯಬ್ದ, ಅದೇ ರೀತಿ ಸಾಧಕನು ಸಿಧ್ಧನಾದಾಗ ಅಲ್ಲಿ ಮೌನ.