ಕಟ್ಟಾ ನಾಯ್ಡು ಹೇಳಿಕೆ ಅಕ್ಷರಶಃ ಸತ್ಯ
ಬರಹ
’ಇದು ನನ್ನ ಏಳಿಗೆ ಸಹಿಸದವರು ನಡೆಸಿದ ಸಂಚು. ವಿರೋಧಿಗಳ ಷಡ್ಯಂತ್ರ ಇದು’, ಎಂದಿದ್ದಾರೆ ಕಟ್ಟಾ ಸುಬ್ರಹ್ಮಣ್ಯ ನಾಯ್ಡುಗಾರು. ಅವರು ಅಕ್ಷರಶಃ ನಿಜವನ್ನೇ ನುಡಿದಿದ್ದಾರೆ.
ಏಳಿಗೆ ಎಂದರೆ ಏನು?
ಅಪಾರ ಸಂಪತ್ತನ್ನು ಗಳಿಸುವುದು ಏಳಿಗೆ.
ಇದನ್ನು ವಿರೋಧಿಗಳು ಏಕೆ ಸಹಿಸುತ್ತಿಲ್ಲ?
ವಾಮಮಾರ್ಗದಿಂದ ಹೊಂದಿದ ಏಳಿಗೆ ಇದಾಗಿರುವುದರಿಂದ ಸಹಿಸುತ್ತಿಲ್ಲ.
ಸಂಚು ನಡೆಸಿದ್ದೇಕೆ?
ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತದ ಬಲೆಗೆ ಬೀಳಿಸಬೇಕಲ್ಲಾ, ಅದಕ್ಕೆ.
ವಿರೋಧಿಗಳ ಷಡ್ಯಂತ್ರ?
ಹೌದು. ರಾಜಕಾರಣದಲ್ಲಿ ಎಲ್ಲ ವಿರೋಧಿಗಳೂ ಷಡ್ಯಂತ್ರನಿಪುಣರೇ. ಬೇಕಾದರೆ ಯಡಿಯೂರಪ್ಪನವರನ್ನು ಕೇಳಿ.