ದೇಶ ಒಂದಾಗುವ ಸಮಯಕ್ಕೆ ಬೇಕೇ ಈ ಚರ್ಚೆ ??

ದೇಶ ಒಂದಾಗುವ ಸಮಯಕ್ಕೆ ಬೇಕೇ ಈ ಚರ್ಚೆ ??

ಗೆಳೆಯರೇ ,
ನಿನ್ನೆ ಬಂದ ತೀರ್ಪಿನಿಂದ ಎಲ್ಲರಿಗೆ ಚರ್ಚೆಗೆ ಒಂದು ವಿಚಾರ ಸಿಕ್ಕಿದೆ , ಎಲ್ಲರೂ ಚರ್ಚೆಯಲ್ಲಿ ತೊಡಗಿದ್ದಾರೆ, ವಿಪರ್ಯಾಸ ನೋಡಿ ಇಲ್ಲಿ ಈಗ ಆಸ್ತಿಕ, ನಾಸ್ತಿಕ, ಹಿಂದೂ, ಇಸ್ಲಾಂ, ಹೀಗೆ ಹಲವು ಮಾತುಗಳು ಬರುತ್ತಿದೆ, ದೇಶ ಒಂದಾಗಿರ ಬೇಕಾದ ಹೊತ್ತಲ್ಲಿ ನಮ್ಮ ನಮ್ಮ ಮದ್ಯೆ ಈ ಮತೀಯ ಅಂತರ ಮಾಡಿಕೊಳ್ಳುವುದು ಸರಿಯೇ?

ನಮ್ಮಲ್ಲಿ ಭಾರತೀಯ ಎಂಬ ವಾದವಿರಲಿ, ಅದು ಬಿಟ್ಟು ಕೆಲವು ತುಚ್ಚರು ಮಾಡಿರುವ ಕೆಲಸಕ್ಕೆ ಹಿಡಿ ಹಿಂದೂ ಧರ್ಮವನ್ನು ಇಲ್ಲ ಇಸ್ಲಾಂ ಧರ್ಮವನ್ನು ಧೂಶಿಸುವುದು ಸರಿ ಅಲ್ಲ, ಮತ ಯಾವುದೇ ಇರಲಿ, ಅವನು ಮಾನವಿಯತೆಯಲ್ಲಿ ಬದುಕುತ್ತಿದ್ದರೆ ಅವನಿಗೆ ಗೌರವಿಸಿ, ಅದುಬಿಟ್ಟು ಅವನೊಬ್ಬ ಮುಸಲ್ಮಾನ್ ಎಂದು ಅವನಲ್ಲಿ ದ್ವೇಷ ಸಾಧಿಸಬೇಡಿ, ಇದು ಎಲ್ಲರಿಗೂ ಅನ್ವಯಿಸುತ್ತದೆ, ಒಬ್ಬ ಮುಸಲ್ಮಾನನು ಕೆಲವು ಹಿಂದೂಗಳು ೧೯೯೨ ಮಾಡಿದ ತಪ್ಪಿಗೆ ಹಿಡಿ ಜನಾಂಗವನ್ನೇ ಶತ್ರುವಂತೆ ಕಾಣುವುದು ಬಿಟ್ಟು ಬಿಡಿ.      

ಸಂಪದದಲ್ಲಿ ಅಂತ ಚರ್ಚೆ ಮಾಡುವುದು ಸರಿಯಲ್ಲ ತೋರುತ್ತಿದೆ ಚರ್ಚೆಗೆ ಬೇರೆ ವಿಷಯ ಗಳಿವೆ ಚಿಂತಿಸಿ, ಆಗಿರುವ ತಪ್ಪು ಇನ್ನೊಮ್ಮೆ ಸಂಭವಿಸುವುದು ಬೇಡ, ಬಂದಿರುವ ತೀರ್ಪು ಗೌರವಿಸುವ.

ನಿಮ್ಮ
ಕಾಮತ್ ಕುಂಬ್ಳೆ

Rating
No votes yet

Comments