ನಮ್ಮಿಬ್ಬರಿಗೆ

ನಮ್ಮಿಬ್ಬರಿಗೆ

 

ನನ್ನ ನಿನ್ನಂಥವರು ಸಿಗಬಹುದು 

ನಮ್ಮಿಬ್ಬರಿಗೂ ಸಾವಿರದ ಲೆಕ್ಕದಲ್ಲಿ 

ಆದರೆ... ನಾನು - ನೀನು ನಮ್ಮಿಬ್ಬರಿಗೂ ಸಿಗಲಾರೆವು!

ಚಲಾವಣೆ ಆಗದ ನಾಣ್ಯ ಸಂಗ್ರಹಯೋಗ್ಯ

ಟಂಕಿಸಿದ ಶಾಲೆಗೀಗ ಬಾಲಗೃಹ ಪೀಡೆ

ನಿರ್ಮಲವಾಗಿ ಹರಿದಿದ್ದ ಪ್ರೀತಿ ಝರಿಯಲ್ಲಿ

ಈಗ ನಮ್ಮದೇ ಕೋಪದ ಕೊಳೆ.

 

ನಮ್ಮ ನಮ್ಮ ಬಾಳ ಯಾತ್ರೆಯಲಿ ಬಹಳ

ದೂರ ಸಾಗಿದ್ದೇವೆ ನಾವಿಬ್ಬರೂ

ನೀನು ನೊಗ ಹೊರುತ್ತಿದ್ದರೆ ನಾನು

ಸಾಧಿಸಲು ಜೀವ ತೇಯುತ್ತಿದ್ದೇನೆ.

 

ಬದುಕಿನ ನಾಟಕ ರಂಗದಲ್ಲಿ ಮತ್ತೊಮ್ಮೆ

ಅದೇ ಪಾತ್ರವನಾಡಲು ಅವಕಾಶವಿಲ್ಲ

ಎದುರಾಗಾದಾಗಲೊಮ್ಮೆ ಕನಿಷ್ಠ ನಗುವಿಗೂ 

ನಮ್ಮಿಬ್ಬರ ಮನಸು ಸಹಕರಿಸುವುದಿಲ್ಲ .

 

ಗಾಣದೆತ್ತಿಗೆ ಸುತ್ತಣ ಪರಿಧಿಯೇ ಬದುಕು 

ಸಾಧಕನಿಗೆ ಸಾಧನೆಯೇ ಹೊಸ ಬೆಳಕು 

ಯಾಕಾದರೂ ಮನಗಳ ನಡುವೆ ಮೂಡುತ್ತಾವೋ ಬಿರುಕು?

ಬಿರುಕುಗಳು ಮೂಡುವುದೇ ಸತ್ಯವಾದಲ್ಲಿ

ಸಂಬಂಧಗಳೇಕೆ ಬೇಕು?

 
Rating
No votes yet

Comments