ಇಟ್ಟ ಹೆಜ್ಜೆ

ಇಟ್ಟ ಹೆಜ್ಜೆ

ಬರಹ

ಎಲ್ಲರಿಗೂ ಮಕರ ಸಂಕ್ರಾಂತಿಯ ಹಾರ್ದಿಯ ಶುಭಾಶಯಗಳು

ಒಮ್ಮೆ ಇಟ್ಟ ಹೆಜ್ಜೆ
ಮತ್ತಲ್ಲೇ ಮತ್ತೆ ಇಡಲಾದೀತೇ?
ಅದೇ ಹೆಜ್ಜೆ ಮತ್ತಲ್ಲೇ ಇಡಲಾದೀತೇ?
ಮನ ಹೇಳಿದ್ದು - ಇಡಬಾರದ ಹೆಜ್ಜೆ
ಪಾದ ಮನದ ಮಾತು ಕೇಳೀತೇ?
ಹೆಜ್ಜೆ ಇಡಲು ಶಕ್ತಿ ಕೊಟ್ಟವರಾರು?
ಮನಕೆ ಬುದ್ಧಿಯ ಕೊಟ್ಟವರಾರು?

ಸುಕ್ಕುತ್ತಿರುವ ಮುಖ ಚರ್ಮಗಳು
ಸೊಕ್ಕುತ್ತಿರುವ ಮನದ ಮದಗಳು
ಕ್ರೀಮು-ಪಾಮುಗಳು ಹಿಂದೆ ತಳ್ಳಲಾದೀತೇ?
ಕ್ರೀಮುಗಳು ಮುಚ್ಚಲಾದೀತೇ?
ಮತ್ತೆ ತೋರಲಾರದಂತೆ ಮುಚ್ಚಲಾದೀತೇ?
ಪಾಮುಗಳು ಮುಖ ಮರ್ದಿಸಿ
ಉಬ್ಬಿದ ಮದವ ಒಳತಳ್ಳಿದರೂ
ಮತ್ತೆ ಸುಕ್ಕಲಾರದಂತೆ
ಉಬ್ಬಲಾರದಂತೆ
ಸೊಕ್ಕಲಾರದಂತೆ
ಮಾಡಲಾದೀತೇ?

ದೇಹ ಶರೀರವಾಗುವುದ ತಡೆಯಲಾದೀತೇ?
ಸವಕಳಿಯಾಗದಂತೆ ಮಾಡಲಾದೀತೇ?
ಕಿಲುಬದಂತೆ, ದುರ್ವಾಸನೆ
ಬೀರಲಾರದಂತೆ ಮಾಡಲಾದೀತೇ?

ದುರ್ಮನಸು
ದುರ್ವ್ಯಸನ
ಗಳ ಸರಿಪಡಿಸಲಾದೀತೇ?
ಮತ್ತೆ ವಾಲದಂತೆ
ನೇರ ನಿಲ್ಲಿಸಲಾದೀತೇ?
ಮರವ ಬಗ್ಗಿಸಲಾದೀತೇ?

ಆತನ ಕರುಣೆಯಿರಲು ಎಲ್ಲವೂ ಆದೀತು
ಇದೊಂದು ಪವಾಡವೇ?
ದೈವ ಸಾಕ್ಷಾತ್ಕಾರವೇ?
ತಾನರಿತುದುದನ್ನು
ಅಂತೆಯೇ ಇತರರಿಗೆ ಅರುಹಲಾದೀತೇ?
ಇತರರ ಮನದೊಳಗೆ ಇಳಿಸಲಾದೀತೇ?