ಕೋಮಲಣ್ಣ.... ಗೌಡಪ್ಪ...ಇಸ್ಮಾಯಿಲ್‌ ಎಲ್ಲರಿಗೂ.... ನನ್ನ ತಲೆಗವಸು ತೆಗೆದು ಅಡ್ಡಬಿದ್ದೆ

ಕೋಮಲಣ್ಣ.... ಗೌಡಪ್ಪ...ಇಸ್ಮಾಯಿಲ್‌ ಎಲ್ಲರಿಗೂ.... ನನ್ನ ತಲೆಗವಸು ತೆಗೆದು ಅಡ್ಡಬಿದ್ದೆ

ಬರಹ

ಅಲ್ಲಾ ಸ್ವಾಮಿ... ಪ್ರಪಂಚದಲ್ಲಿ ಎಲ್ಲಾದ್ರು ಈ ಪರಿ ಇಚಿತ್ರ ನೋಡಿದೀರಾ? ವಲ್ಡ್ ನಾಗಿರೋ ಏಳು ಕೋಟಿ ಕನ್ನಡ್ತಾಯಿ ಮಕ್ಕಳ ಬಾಯಾಗೆ ಇದೇ ಕೊಮಲ್ಲು, ಗೌಡಪ್ಪನ್ನ ವಾಸ್ನೆ, ಶಾನಕ್ಕನವರ ಬಳಗದಿಂದ ನಡೆದ ಗೌಡಪ್ಪನ ಮಹಾಮಸ್ತಕಾಭಿಷೇಕ, ಇಸ್ಮಾಯಿಲ್ ಬಸ್ಸಲಿ ಎಲ್ಲರ್ ಟೂರು ಈ ಮಾತ್ಗಳೇ ಓಡಾಡ್ತ ಇವೆ. ಯಡ್ಯೂರಪ್ಪ, ಕಟ್ಟಾ ನಾಯ್ಡು, ಕುಮಾರಣ್ಣ, ದೇಸಪಾಂಡೆ, ಕಾಮನ್ವೆಲ್ತು... ಎಲ್ಲ ಜನಾ ಮರ್ತೆ ಬಿಟ್ಟವ್ರೆ. ಏನೋ ರಾಮ್ ಕೃಷ್ಣ ಅಂಥಾ... ಬೇರೇವ್ರು ಬರ್ದಿದ್ದುನ್ನ ಓದ್ಕೊಂಡು.. ನನ್ಪಾಡಿಗೆ ನನ್ಮೀಸೇ ಅಡಿಲಿ ನಾನು ನಕ್ಕೊಂಡು ಕುಂತಿದ್ದ ನನ್ನಂಧ ಐನಾತಿ ಕೂಡ ಬರ್ಯೋ ಹಂಗೇ ಮಾಡ್ಬುಟ್ರಲ್ಲ ಆ ಕೋಮಲ್ಲು... ಅದೂ.. ಗೌಡಪ್ಪ ಸಂಪದದಲ್ಲಿ ಉಟ್ಟಿ ಇನ್ನು ನೆಟ್ಟಗೆ ಒಂದು ವರ್ಸ ಕೂಡ ಆಗಿಲ್ಲ..... ಒಂದು ವರ್ಸದೊಳಗೆ ಈಸ್ಟೊಂದು ಜನಕ್ಕೆ ಈ ಪರಿ ಬೀಸಣಿಗೆಗಳು ಉಟ್ಟ್ಕೊಳ್ಳೋದು ಅಂದ್ರೆ...


ಅದ್ಕೆ ಕೊಮ್ಲಣ್ಣಂಗೂನೂವೆ... ಗೌಡಪ್ಪಂಗುನೂವೆ.. ತಂತಿ ಪಕ್ದುಗುನೂವೇ... ಇಸ್ಮಾಯಿಲ್ಗೂ ಅವಂದು ನಾಕು ಬೀಬಿರ್ಗೂನೂವೆ...ಸುಬ್ಬಂಗುನೂವೇ... ಎಲ್ಲರ್ಗುನೂವೆ ನಾನು ನನ್ನ ತಲೆಗವಸು ತೆಗೆದು ಅಡ್ಡಬಿದ್ದೆ.