ಸಂಪದಕ್ಕೊಂದು ಗೀತೆ ಬರೆದರೆ ಹೇಗೆ?

ಸಂಪದಕ್ಕೊಂದು ಗೀತೆ ಬರೆದರೆ ಹೇಗೆ?

ರಾಷ್ಟ್ರಗೀತೆ, ನಾಡಗೀತೆಯ ರೀತಿ ಸಂಪದಕ್ಕೊಂದು ಗೀತೆ (ಸಂಪದಗೀತೆ) ಬರೆದರೆ ಹೇಗಿರುತ್ತೆ? ಗೀತೆ ಬರೆದರೆ ಸಂಪದ ಸಮ್ಮಿಲನ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಾಗ ಪ್ರಾರಂಭದಲ್ಲಿ ಪ್ರಾರ್ಥನೆಯ ರೀತಿ ಹಾಡಬಹುದು. ಸಂಪದದ ವೃತ್ತಿಪರ ಮತ್ತು ಹವ್ಯಾಸಿ ಕವಿಗಳು ಇದರ ಬಗ್ಗೆ ಗಮನ ಹರಿಸಬೇಕಾಗಿ ವಿನಂತಿ.

ಇನ್ನೊಂದು ವಿಷಯ, ತುಂಬಾ ಜನ ಕವಿತೆ ಬರೆದು ಒಬ್ಬರ ಗೀತೆ ಮಾತ್ರಾ ಆಯ್ಕೆಯಾದಾಗ ಉಳಿದವರಿಗೆ ಬೇಸರವಾಗುವುದು ಸಹಜ. ಆದರೆ ಅದೇ ವಿಷಯವನ್ನು ಇಟ್ಟುಕೊಂಡು ನನ್ನ ಕವಿತೆಯೇ ಚೆನ್ನಾಗಿದೆ ಎಂದು ವಾದಿಸುವುದು ಅಥವಾ ವೈಯಕ್ತಿಕ ದ್ವೇಷ ಸಾಧಿಸುವುದು ಮಾಡುವುದಾದರೆ ಈ ವಿಷಯದಲ್ಲಿ ಮುಂದುವರೆಯುವುದೇ ಬೇಡವೇನೋ. ಇದರ ಬಗ್ಗೆ ನಿಮ್ಮೆಲ್ಲರ ಅನಿಸಿಕೆ ಏನು?

(ನವೆಂಬರ್‌ನಲ್ಲಿ ಆಯೋಜಿಸಲು ನಿರ್ಧರಿಸಿರುವ ಸಂಪದ ಸಮ್ಮಿಲನದಲ್ಲಿ ಹೊಸದೇನಿರಬಹುದು ಎಂಬ ಬಗ್ಗೆ ಯೋಚಿಸಿದಾಗ ಹೊಳೆದ ಐಡಿಯಾ ಇದು. ನಿಮಗಾರಿಗೂ ಇದು ಇಷ್ಟವಾಗದಿದ್ದರೆ ಸಂಪದಗೀತೆ ಬರೆಯುವುದು ಬೇಡ)

Rating
No votes yet

Comments