ಇಸ್ಮಾಯಿಲ್ ಬಸ್ನಾಗೆ.... ನಾನ್ ಸ್ಟಾಪ್ ಶ್ರವಣ ಬೆಳಗೊಳ
ಗೌಡಪ್ಪ ಅಂಡ್ ಕಂಪನೀ ಶ್ರವಣ ಬೆಳಗೊಳಕ್ಕೆ ಹೊರಟರು. ಗೌಡಪ್ಪ ಮಾತ್ರ ಮಂಜಣ್ಣನ ಪಕ್ಕ ಕುಳಿತುಕೊಂಡಿದ್ದ. ಮಂಜಣ್ಣ ಮಾಡಿದ ಹಾಗೆ ಮಾಡುವ. ಮಂಜಣ್ಣ ಬಿಸ್ಲೆರಿ ನೀರು ಕುಡಿದರೆ ಅದನ್ನೇ ಕುಡಿಯುವ. ಮಂಜಣ್ಣ ಬ್ಲ್ಯಾಕ್ ಲೇಬಲ್ ಕುಡಿದರೆ ಅದನ್ನೇ ಸ್ವಲ್ಪ ಕುಡಿಯುವ. ಮತ್ತೆ ಎಲ್ಲೇ ನೀರು ಕಂಡರು ಗಾಡಿ ನಿಲ್ಲಿಸಿ, ಸ್ನಾನ ಮಾಡಿ ಬಂದು ಮಂಜಣ್ಣನ ಬಾಗ್ ನಲ್ಲಿ ಇರುವ ದುಬೈ ಸೆಂಟ್ ಹಚ್ಚಿ ಕೊಳ್ಳುತ್ತಿದ್ದ. ಇದರ ವಾಸನೆ ಇಂದ ನಮ್ಮ ಇಸ್ಮಾಯಿಲ್ ಭಯ್ಯಾಗೆ ತಲೆ ನೋವು ಬಂದಿತ್ತು ಅಂದರೆ ನೀವೇ ಯೋಚನೆ ಮಾಡಿ. ನಮ್ಮ ಮಂಜಣ್ಣ, ಲೇsss ಗೌಡ ನನ್ನ ಎರಡು ವರ್ಷದ ಸೆಂಟ್ ಬಾಟಲ್ ಖಾಲಿ ಮಾಡಿಯಲ್ಲಲ್ಲೇ ಎಂದು ಕಿರುಚುತ್ತಿದ್ದರು. ನಮ್ಮ ಮಂಜಣ್ಣ ಹಾಡು ಹಾಡಿದರೆ, ನಮ್ಮ ನಾವುಡ್ರು ,ಗಣೇಶಣ್ಣ ಬೋನೇಟ್ ಮೇಲೆ ಕೂತು ತಾಳ ಹಾಕವ್ರು. ಮತ್ತೆ ನಮ್ಮ ಗೌಡಪ್ಪ ಡ್ಯಾನ್ಸ್ ಮಾಡುತ್ತಿದ್ದ. ನಮ್ಮ ಇಸ್ಮೇಲ್ ಭಯ್ಯಾ ಗಾಡಿ ಓಡಿಸುವುದ ಬಿಟ್ಟು, ಹಿಂದೆ ಹಿಂದೆ ನೋಡುತ್ತಿದ್ದ. ಲೇ ಇಸ್ಮಾಯಿಲ್ ನನ್ನ ಮದುವೆ ಆಗಿಲ್ಲಾ, ಎಲ್ಲರಿಗೂ ಹೊಗೆ ಹಾಕಿಸಿ ಬಿಟ್ಟಿಯಾ? ಕಲಾ ಅನ್ನುತ್ತಿದ ಕೋಮಲ್. ಹೆಗಡೆ ಅವರು ಮತ್ತು ಗೋಪಿನಾಥ ಸರ್ ಶಾನೆ ನಿದ್ದೆಯಲ್ಲಿ ಇದ್ದರು. ಗೌಡಪ್ಪ, ಐದು ನಿಮಷಕ್ಕೆ ಒಮ್ಮೆ, ಲೇ, ನಿಂಗ ಚಹಾ ಮಾಡಲಾ ಎಂದು ಆರ್ಡರ್ ಮಾಡುವ, ಸಾಹೇಬ್ರಗೆ ಶಾನೆ ಗಂಟಲು ಒಣಗೈತೆ ಹಾಡಿ ಎಂದು. ಲೇ, ನಿಂಗ ಬಿಸ್ಲೆರಿ ಹಾಕಿ ಚಹಾ ಮಾಡು ಎಂದು ಮಂಜಣ್ಣ ಎಂದರು. ನೀವು ಸುಮ್ಕೀರಿ ಮಂಜಣ್ಣ, ಬೇಡ ಕಲಾ, ತಣ್ಣೀರು ಹಾಕಿ ಮಾಡು. ಮೊದಲೇ ಚಹಾ ಬಿಸಿ, ಅದಕ್ಕೆ ಬಿಸಿ ನೀರು ಹಾಕಿ ಮಾಡಿದರೆ ತುಂಬಾ ಕಷ್ಟ ಕಲಾ ಎಂದ ಗೌಡಪ್ಪ.ಎಲ್ಲರಿಗೂ ಬಿಸ್ಲೆರಿಯಲ್ಲಿ ಮಾಡಿದ ಷೂಗರ್ ಲೆಸ್ ಚಲ್ಟದ ಚಹಾ....ಪಾಪ ನಿದ್ದೆಯಲ್ಲಿ ಇದ್ದ ಹೆಗಡೆ ಸರ್ ಮತ್ತು ಗೋಪಿನಾಥ ಸರ್ ನ ಎಬ್ಬಿಸಿ, ಚಹಾ ಕೊಡುತ್ತಿದ್ದ ಗೌಡ. ಬೇಡ ಎಂದರೆ ನೀವು ನಮ್ಮ ಅತಿಥಿ ಅನ್ನೌನು.
ನಾನ್ ಸ್ಟಾಪ್ ಅಂತ ಹೇಳಿದ ಗೌಡಪ್ಪ ತಾನೇ ಪ್ರತಿ ಹತ್ತು - ಇಪ್ಪತ್ತು ನಿಮಿಷಕ್ಕೆ ಗಾಡಿ ನಿಲ್ಲಿಸುತ್ತಿದ್ದ. ಮೊದಲೇ ಷೂಗರ್ ಅಲ್ವಾ ಅದಕ್ಕೆ. ಮತ್ತೆ ನೀರು ಕಂಡರೇ ಚಿಕ್ಕ ಮಕ್ಕಳ ತರಹ ಆಡೌನು. ಅರ್ಧ ಘಂಟೆ ಬಸ್ ಹಾಲ್ಟ್. ಮರು ದಿನ ಮಟ - ಮಟ ಮಧ್ಯಾಹ್ನ ಶ್ರವಣ ಬೆಳಗೊಳ ತಲುಪಿತ್ತು. ಪ್ರತಿ ನಿಮಿಷಕ್ಕು ಕೋಮಲ್.. ಕೋಮಲ್... ಅನ್ನೋ ಗೌಡ, ಈಗ ಮಂಜಣ್ಣ... ಮಂಜಣ್ಣ.... ಅಂತ ಜಪ ಮಾಡೌನು. ಇಳಿಯುವ ಸಮಯದಲ್ಲಿ ಪೂರ್ತಿ ಮಂಜಣ್ಣನ ಡ್ರೆಸ್ ಮತ್ತೆ ಬ್ರೇಸ್ ಲೆಟ್ , ಚೈನು ಎಲ್ಲ ಗೌಡಪ್ಪನ ಮೈ ಮೇಲೆ. ಸುಬ್ಬ ಏನ್ರೀ ಇದೆಲ್ಲ ಗೌಡ್ರೆ ಎಂದರೆ. ಲೇ ನಮ್ಮ ಮಂಜಣ್ಣಗೆ ನಾಲ್ಕು ಏಕೆರೆ ಗದ್ದೆ ಕೊಡ್ತೇನೆ ಎಂದು ಹೇಳಿದ್ದೇನೆ ಎಂದ. ರೀ ಗೌಡ್ರೆ ಮೊದಲೇ ನಿಮ್ಮ ನಾಲ್ಕು ಹೆಂಡತಿಯರಿಗೆ ಅಗಲೆ ವಿಲ್ ಬರೆದಿದ್ದೀರಲ್ಲ ಎಂದ. ಸುಮ್ಕಿರಲಾ ಎಂದ ಗೌಡ.ನಾನು ಸುಮ್ಕೀರೀತೀನಿ ಆದರೆ ನಮ್ಮ ಮಂಜಣ್ಣ ಸುಮ್ಕಿರಲ್ಲ ಗೊತ್ತಾ ಅವ್ರಿಗೆ ದುಬೈ ಚೊಟಾ ಚೇತನ್ ಗೊತ್ತು ಎಂದ ಸುಬ್ಬ. ಅದಕ್ಕೆ ಗೌಡಪ್ಪ ಹೆದರಿ ಎಲ್ಲ ಮಂಜನ್ಣಗೆ ವಾಪಸ್ ಕೊಟ್ಟಿದ್ದ. ನಮ್ಮ ನಿಂಗ ಆಗಲೇ ಬೇಗ ಇಳಿದು ತನ್ನ ಚಹಾ ಅಂಗಡಿ ಇಟ್ಟಿದ್ದ. ೫೦ ಪೈಸೆ ಒಂದು ಚಹಾ ಎಂದು ಬೋರ್ಡ್ ಬೇರೆ ನೇತು ಹಾಕಿ ಕೊಂಡಿದ್ದ.
ಎಲ್ಲರೂ ಸೇರಿ ದೇವರ ದರ್ಶನಕ್ಕೆ ಹೊರಟರು.
ಹಿಂದಿನ ಲೇಖನ - http://sampada.net/article/28326