ಹುಸಿ ಮೋಸವ ಮಾಡಿದೆ ಗೆಳತಿ....

ಹುಸಿ ಮೋಸವ ಮಾಡಿದೆ ಗೆಳತಿ....

ಬರಹ

ನನ್ನ ಜೀವನದಲ್ಲಿ ಯಾವತ್ತೂ ಕವನ, ಕವಿತೆ ಗೀಚಿದವನಲ್ಲ.....ಪ್ರಥಮ ಬಾರಿಗೆ ಪ್ರಯತ್ನಿಸುತ್ತಿದ್ದೇನೆ...


ಇಷ್ಟ ಆದರೆ ಪ್ರತಿಕ್ರಿಯಿಸಿ...ಇಲ್ಲವಾದರೆ ನಿಮ್ಮ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಿದ್ದಕ್ಕೆ ಕ್ಷಮೆಯಿರಲಿ..


 


ಗೆಳತಿ ನಿನಗಾಗಿ ಕಾದು ಕುಳಿತಿದ್ದೆ,


ನಿನ್ನ ಬರುವಿಕೆಗಾಗಿ ಕಾದು ಕುಳಿತಿದ್ದೆ... 


 


ಬರದೆ, ಬರದೆ..ಕೊನೆಗೂ ಬಂದೆ...


ನನ್ನೆಲ್ಲ ಕನಸುಗಳನ್ನು ಪೂರೈಸುವೆ ಎಂದು ಬಂದೆ...


 


ಎಲ್ಲಿಂದಲೋ ಬಂದ ನಿನಗಾಗಿ ತೆರೆದೆ ನನ್ನ  ಹೃದಯದ ಬಾಗಿಲನು...


ನೀನೆ ಎಲ್ಲ ಎಂದು ಆರಾಧಿಸಿದೆನು ನಿನ್ನನು...


 


ನಿನ್ನ ಮುಗ್ಧತೆ, ನಿನ್ನ ಚೆಲುವು ತುಂಬಿತ್ತು ನನ್ನ ಮನಸೆಲ್ಲ...


ಆದರು ನಾ ನಿನ್ನ ಬಗ್ಗೆ ಹಾಡಲಿಲ್ಲ, ಹೊಗಳಲಿಲ್ಲ..


 


ಇಷ್ಟೆಲ್ಲಾ ಸಂತೋಷ, ಸಂಭ್ರಮ, ಪ್ರೀತಿ  ನನಗೆ ಕೊಟ್ಟ ನಿನ್ನ ಕಂಡು.....


ಆ ಭಗವಂತನಿಗೂ ಕೂಡ ಅಸೂಯೆ ಹುಟ್ಟದಿರದು....


 


ನಿನ್ನೆದುರು ತೆರೆದ ಪುಟದಂತಿದ್ದ ನಾನು..


ನನ್ನೆದುರು ಮುಚ್ಚಿಟ್ಟೆ ಯಾಕೆ ನೀನು ನಿನ್ನ ಮಾರಣಾಂತಿಕ ಖಾಯಿಲೆಯನ್ನು...


 


ಹೇಳದೆ ಕೇಳದೆ ಹೊರಟುಬಿಟ್ಟೆ ತಿರುಗಿ ಬಾರದ ಲೋಕಕೆ...


ಹುಸಿ ಮೋಸವ  ಮಾಡಿದೆ ಗೆಳತಿ ನೀನು ನನಗೆ ಯಾಕೆ? ಯಾಕೆ?...