ಹಲೋ ..ಹಲೋ..

ಹಲೋ ..ಹಲೋ..

ಬರಹ

ಮಿಂಚಂಚೆಯಲ್ಲಿ ಬಂದದ್ದು...ಆಂಗ್ಲದಿಂದ ಕನ್ನಡಕ್ಕೆ ಅನುವಾದಿಸಿದ್ದೇನೆ...


 


ಹಲೋ ..ಹಲೋ..

 

ದಯವಿಟ್ಟು ಮಾತಾಡು ನನ್ ಜೊತೆ...ಯಾಕೆ ಫೋನ್ ಎತ್ತಲಿಲ್ಲ...?

 

"ಯಾಕೆ ಏನಾಯ್ತು, ಎಲ್ಲ ಚೆನ್ನಾಗಿದೆ ತಾನೇ?

 

ಏನ್ ಚೆನ್ನಾಗಿರೋದು..ಏನು ಚೆನ್ನಾಗಿಲ್ಲ...ಗಡಿಯಾರ ನೋಡು..ರಾತ್ರಿ ೧೧ ಗಂಟೆ...ಈಗಿನ್ನೂ ಆಫೀಸ್ ಮುಗಿಸಿಕೊಂಡು ಮನೆಗೆ ಹೋಗುತ್ತೀದ್ದೀನಿ..ಇವತ್ತೂ ಊಟ ಇಲ್ಲ.. ಈಗ ಮನೆಗೆ ಹೋಗಿ ನಾನೇ ಅಡಿಗೆ ಮಾಡಿ

ಊಟ ಮಾಡಬೇಕು..ಕಳೆದ ಮೂರು ದಿನದಿಂದ ಬರಿ ನೂಡಲ್ಸ್ ತಿನ್ನುತ್ತಿದ್ದೇನೆ..ನನ್ನ "ಪಿ..ಎಂ." ನನ್ನ ತಿನ್ನುತ್ತಿದ್ದಾನೆ...ಬೆಲೆ ಏರಿಕೆ ನೋಡಿದ್ಯಾ..ನಾಳೆಯಿಂದ ಎಲ್ಲ ೨/- ರೂಪಾಯಿ ಜಾಸ್ತಿ...ನನ್ನ ಸಂಬಳ ಒಂದನ್ನು ಬಿಟ್ಟು..

ನನಗನ್ನಿಸುತ್ತೆ ನಮ್ಮ ಆಫೀಸ್ ನ ಮುಂದಿರುವ ಭಿಕ್ಷುಕ ನನಗಿಂತ ಹೆಚ್ಚಾಗಿ ಸಂಪಾದಿಸುತ್ತಾನೆ ಎಂದು...

 

"ಏನಾಯ್ತು...ಏನ್ ಮಾತಾಡ್ತಾ ಇದ್ದೀಯ ನೀನು"?

 

ಏನ್ ಮಾತಾಡ್ತಾ ಇದೀನಾ???...ಇಲ್ಲ..ನಾನು ಮಾತಾಡ್ತಿಲ್ಲ.. ನಮ್ಮ ಮ್ಯಾನೇಜರ್ ಯಾರನ್ನು ಮಾತಾಡಲು ಬಿಡುವುದಿಲ್ಲ..ಕ್ಲೈಂಟ್ ಒಬ್ಬನನ್ನು ಬಿಟ್ಟು...ಅವನು ಯಾವಾಗಲೂ ಮಾತನಾಡುತ್ತಿರುತ್ತಾನೆ..ಕಳೆದ ಮೂರು

ತಿಂಗಳಿಂದ ಒಂದು ರಜೆ ತೆಗೆದುಕೊಂಡಿಲ್ಲ...ಈಗ ಕಳೆದ ಮೂರು ವಾರದಿಂದ ಒಂದು ರಜೆಗೊಸ್ಕರ ಭಿಕ್ಷೆ ಬೇಡುತ್ತಿದ್ದೇನೆ..ಅದಕ್ಕೆ ನನಗೆ ಸಿಕ್ಕ ಉತ್ತರ "ಯಾಕೆ ನಿನ್ನ ಜೀವನದ ಒಂದು ಅಮೂಲ್ಯವಾದ ದಿನವನ್ನು ಹಾಳು

ಮಾಡುತ್ತೀಯ ಎಂದು"?. ಅದಕ್ಕೆ ಈಗ ನಿರ್ಧರಿಸಿದ್ದೇನೆ ಇನ್ನು ಈ ಪ್ರಾಜೆಕ್ಟ್ನಲ್ಲಿ ಮುಂದುವರಿಯುವುದು ಬೇಡ ಎಂದು...ಆದರೆ ಅದು ಆಗುವುದಿಲ್ಲ...ಛೆ..

 

"ಸರಿ...ಈಗ ಸಮಾಧಾನ ಮಾಡಿಕೋ"

 

ಹೇಗೆ ಸಮಾಧಾನಗೊಳ್ಳಲಿ.. ಮನಸ್ಸಿಗೆ ನೆಮ್ಮದಿ ಬರಲು ಜನ ಯೋಗ ಮಾಡುತ್ತಾರೆ...ಆದರೆ ಈಗ ರಾತ್ರಿ ನಾನು ಏನು ಮಾಡಲಿ...ಹೋಗಲಿ ಟಿ.ವಿ. ನೋಡೋಣ ಎಂದರೆ ಅದರಲ್ಲಿ ಅದೇ ಕೆಟ್ಟ ಸೀರಿಯಲ್ ಗಳು,

ಅದೇ ಕೆಟ್ಟ ನ್ಯೂಸ್ ಚಾನಲ್ಗಳು, ಅದೇ ಅರ್ಥವಿಲ್ಲದ ರಿಯಾಲಿಟಿ ಶೋ ಗಳು...ಹೋಗಲಿ ಸಿನಿಮಾ ನೋಡೋಣ ಎಂದರೆ ಲಾಜಿಕ್ ಇಲ್ಲದ ಕೆಟ್ಟ ಸಿನಿಮಾಗಳು...

ಉದಾಹರಣೆಗೆ : "Rock on " ಸಿನಿಮಾದ ಕೊನೆಯ ದೃಶ್ಯದಲ್ಲಿ ಅರ್ಜುನ್ ರಾಮ್ಪಾಲ್ ಹೆಂಡತಿ Taxi  driver ಗೆ ಹೇಳುತ್ತಾಳೆ ಬೇಗ ಏರ್ ಪೋರ್ಟ್ ಗೆ ಹೋಗು ಎಂದು...ಏರ್ ಪೋರ್ಟ್ ??? ಅರ್ಜುನ್ ರಾಮ್ಪಾಲ್

ಗೆ ಕೆಲಸ ಸಿಕ್ಕಿರುವುದು ಹಡಗಿನಲ್ಲಿ ಆದರೆ ಏರ್ ಪೋರ್ಟ್ ಗೆ ಏಕೆ ಹೋಗಬೇಕು...ಇನ್ನು "3 Idiots " ಸಿನಿಮಾದಲ್ಲಿ ಕರೀನಾ ಕಪೂರ್ doctor ಪಾತ್ರ ಮಾಡಿದ್ದಾಳೆ..ಅದರಲ್ಲೂ ಸರ್ಜನ್ ...ಸರ್ಜನ್ ಆಗಲು

ಕನಿಷ್ಠ ಪಕ್ಷ M B B S ( 5 ವರ್ಷ) + M S ( 3 ವರ್ಷ) ಅಂದರೆ ಅವಳಿಗೆ ೨೮ ವರ್ಷ.. ಮತ್ತೆ ಅಮೀರ್ ಖಾನ್ ವಿದ್ಯಾರ್ಥಿ ಅಂದರೆ ೧೮ - ೨೦ ವರ್ಷ??.. ಆಮೇಲೆ ೧೦ ವರ್ಷ ಅದ ಮೇಲೆ ಅವರಿಬ್ಬರೂ ಮದುವೆ

ಆಗಲು ನಿರ್ಧರಿಸುತ್ತಾರೆ...ಅಂದರೆ ಅವಳಿಗೆ ೩೮ ವರ್ಷ...???

ತೆಲುಗಿನ ಬಾಲಕೃಷ್ಣ ಹೇಗೆ ತೊಡೆ ತಟ್ಟಿ ರೈಲ್ ಅನ್ನು ಹಿಂದಕ್ಕೆ ಕಳುಹಿಸುತ್ತಾನೆ ???

ತಮಿಳಿನ ರಜನಿ ಕಾಂತ್ ಹೇಗೆ ರೆಕ್ಕೆ ಇಲ್ಲದೆ ಗಾಳಿಯಲ್ಲಿ ಹಾರುತ್ತಾನೆ ???

 

"ಹೇ...ಸಾಕು ನಿಲ್ಲಿಸು"

 

ನಾನೇನು ರೈಲಾ ಚೈನ್ ಎಳೆದು ನಿಲ್ಲಿಸಲು.. ಓ ...ನನಗೆ ಅರ್ಥ ಆಗುತ್ತಿಲ್ಲ...ಕಳೆದ ಮೂರು ತಿಂಗಳಿಂದ ಒಂದು ಸಿನಿಮಾ ನೋಡಿಲ್ಲ...ಹೇಗೆ ತಾನೇ ನೋಡಲು ಸಾಧ್ಯ?? ದಿನ ಬೆಳಗಾದರೆ..ಆಫೀಸ್ ನಲ್ಲಿ

ಕಂಪ್ಯೂಟರ್ ಪರದೆ ನೋಡುತ್ತಿರುತ್ತೇನೆ...ರಾತ್ರಿ ಹೊತ್ತಿನಲ್ಲಿ ಕಣ್ಣು ಬಿಟ್ಟರು ಸಹ ಬರಿ "username " "Password " ಕಾಣಿಸುತ್ತಿದೆ...ನಾನೀಗ ಶಾಂತವಾಗಬೇಕು...10 9 8 7 6 5 4 3 2 1 ..

 

ಆದರೆ ಹೇಗೆಂದು ಯಾರಾದರೂ ಹೇಳಿ..ನಾನು ಮನೆಯಲ್ಲಿ ಇರುವ ಹೊತ್ತು ಬಿಟ್ಟು ಬೇರೆ ಎಲ್ಲ ಸಮಯದಲ್ಲೂ ವಿದ್ಯುತ್ ಇರುತ್ತದೆ...ಅದೂ ಈ ಒಂಟಿ ರೂಮಿನಲ್ಲಿ ಈ ದಿಂಬಿನ ಜೊತೆ ಇರುತ್ತೇನೆ...

ನನ್ನ ಶತ್ರುಗಳಿಗೆ ಇರುವ ಹಾಗೆ ನನಗೂ ಒಬ್ಬಳು "Girl Freind " ಇರಬೇಕು ಎನಿಸುತ್ತದೆ..ಸ್ಮಿತಾ, ರಶ್ಮಿ, ಪ್ರೀತಿ, ಸುಧಾ ಯಾರಾದರೂ ಸರಿ...ಆದರೆ ಎಲ್ಲರಿಗು ನಿಶ್ಚಿತಾರ್ಥ ಆಗಿಬಿಟ್ಟಿದೆ..ಯಾಕೆ ಅಂತ ಗೊತ್ತ?

ಅವರ ಹುಡುಗರು ಯಾರು ಐ.ಟಿ. ಕಂಪನಿ ಯಲ್ಲಿ ಕೆಲಸದಲ್ಲಿಲ್ಲ..ಬೇರೆ ಹುಡುಗೀರು ಮಾತಾಡುತ್ತಾರೆ ಆದರೆ ಸಂಬಳದ ದಿನ ಮಾತ್ರ.. ಇದುವರೆಗೂ ೩೧ ಜನ ಹುಡುಗಿಯರು ನನ್ನನ್ನು ತಿರಸ್ಕರಿಸಿದ್ದಾರೆ

ಯಾಕೆ ಅಂತ ಗೊತ್ತ...ನೀನೆಲ್ಲಿರುವುದು ಅಂತ ಅವರು ಕೇಳಿದರೆ ...ನನ್ನ "Cubicle " ಅಂತ ಉತ್ತರಿಸುತ್ತೇನೆ...ಯಾಕೆಂದರೆ ಯಾವಾಗಲು ನನ್ನ ಆತ್ಮ ಅಲ್ಲೇ ತಾನೇ ಇರುವುದು...

 

ಅಷ್ಟರಲ್ಲಿ ಆ ಕಡೆಯಿಂದ ಕಾಲ್ "Disconnect " ಆಯಿತು...

 

ಮರುದಿನ ಬೆಳಿಗ್ಗೆ ಆಫೀಸ್ ನಲ್ಲಿ...

 

ಮ್ಯಾನೇಜರ್  - "ಸೌರಬ್, ಇಲ್ಲಿ ಬನ್ನಿ "

 

ಹೇಳಿ ಸರ್ ,,,

 

ನಾನು ನಿಮ್ಮ ರಜೆ ಮಂಜೂರು ಮಾಡಿದ್ದೇನೆ...ಹೋಗಿ ಮಜಾ ಮಾಡಿ ಬನ್ನಿ...

 

ಆಚೆ ಬಂದು ಮೊಬೈಲ್ ತೆಗೆದು "Dialed list " ನೋಡಿದರೆ ನೆನ್ನೆ ರಾತ್ರಿ ನಾನು ಕರೆ ಮಾಡಿದ್ದು ನನ್ನ ಮ್ಯಾನೇಜರ್ ಗೆ...