ಎರಡು ಸಂಬಾಷಣೆ ಮತ್ತು ನಡುವಿನ ಅಂತರ

ಎರಡು ಸಂಬಾಷಣೆ ಮತ್ತು ನಡುವಿನ ಅಂತರ

ಸಂಬಾಷಣೆ - ೧
ಇಬ್ಬರು ಗೆಳತಿಯರ ನಡುವಿನ ಸಂಬಾಷಣೆ
ಗೆಳತಿ ೧ - "ನನ್ನ ನಿನ್ನೆಯ ಸಂಜೆ ತುಂಬಾ ಮಜವಾಗಿತ್ತು, ನಿನ್ನದು ...?"
ಗೆಳತಿ 2 - "ತುಂಬಾ ನಿರಾಶೆಯ ಸಂಜೆಯಾಗಿತ್ತು,ಆಫೀಸ್ ನಿಂದ ಬಂದ ಗಂಡ ೩ ನಿಮಿಷದಲ್ಲೇ ಊಟ ಮುಗಿಸಿ, ಮುಂದಿನ ೫ ನಿಮಿಷದಲ್ಲೇ ನಿದ್ರೆಗೆ ಶರಣಾಗಿದ್ದರು, ಅದಿರಲಿ ನಿನ್ನ ಬಗ್ಗೆ ಹೇಳು .." 
ಗೆಳತಿ ೧ -"ತುಂಬಾ ಚೆನ್ನಾಗಿತ್ತು ,ಮನೆಗೆ ಬಂದ ಗಂಡ ನನ್ನನ್ನು ಹೊರಗೆ ಊಟಕ್ಕೆಂದು ಕರೆದು ಹೋಗಿದ್ದರು,ಊಟದ ಬಳಿಕ ಹಾಗೆ ತಂಪಾದ ಗಾಳಿಯಲ್ಲಿ ಸುತ್ತಾಡಿದೆವು,ಮರಳಿ ಮನೆಗೆ ಬಂದ ಬಳಿಕ ಅವರು ನನಗಾಗಿ ಮನೆತುಂಬಾ ಕೆಂಡಲ್ ಹಚ್ಚಿ ನನ್ನಬಳಿಯಲ್ಲೇ ಕುಳಿತು ಒಂದು ಗಂಟೆ ನನ್ನ ಮಾತಿಗೆ ಹೂಂಗುಡುತ್ತಿದ್ದರು, ನಿಜಕ್ಕೂ ನಿನ್ನೆ ನನ್ನ ಬಾಳಿನ ಅನನ್ಯ ಸಂಜೆ ಆಗಿತ್ತು."

ಸಂಬಾಷಣೆ - ೨
ಇಬ್ಬರು ಗೆಳಯರ ನಡುವಿನ ಸಂಬಾಷಣೆ
ಗೆಳೆಯ ೧ - "ನಿನ್ನ ನಿನ್ನೆಯ ಸಂಜೆ ಹೇಗಿತ್ತು  ...?"
ಗೆಳೆಯ 2 - "ತುಂಬಾ ಚೆನ್ನಾಗಿತ್ತು, ಮನೆಗೆ ಹೋಗುತ್ತಿದ್ದಂತೆ ಟೇಬಲ್ ಮೇಲೆ ನನಗಾಗಿ ಮಾಡಿಟ್ಟ ರುಚಿಯಾದ ಅಡುಗೆ ಕಾಣಿಸಿತು, ೨ ನಿಮಿಷದಲ್ಲಿ ಊಟ ಮುಗಿಸಿ, ೫ ನೇ ನಿಮಿಷದಲ್ಲಿ ನಿದ್ದೆಗೆ ಜಾರಿದ್ದೆ, ನಿನ್ನದು ?" 
ಗೆಳೆಯ ೧ -"ತುಂಬಾ ಕೆಟ್ಟದಾಗಿತ್ತು,ಮನೆಗೆ ಹೋದಂತೆ ನಾನು ಬಿಲ್ ಪಾವತಿಸದ ಕಾರಣ ಮನೆಯಲ್ಲಿ  ಕರೆಂಟ್ ಇರಲಿಲ್ಲ, ಇದರಿಂದ ಹೆಂಡಂತಿಯೊಂದಿಗೆ ಹೋಟೆಲ್ ಗೆ ಹೋಗುದು ಅನಿವಾರ್ಯ ವಾಗಿತ್ತು, ಊಟ ಮುಗಿಸಿ ಹೊರ ಹೋದಂತೆ ಟಾಕ್ಸಿಗೂ ಹಣ ವಿರಲಿಲ್ಲ, ಅಷ್ಟು ದುಬಾರಿ ಹೋಟೆಲ್ ಗೆ ಹೋಗಿದ್ವಿ , ಹಾಗೆ ೧ ಗಂಟೆ ಮನೆವರೆಗೆ ನಡೆದೇ ಬರಬೇಕಿತ್ತು,ಮನೆಗೆ ಬಂದರೆ ಕರೆಂಟ್ ಇಲ್ಲದು ನೆನಪಾಯಿತು ,ಹಾಗೆ ಮನೆತುಂಬಾ ಮೊಂಬತ್ತಿ ಹಚ್ಚಿಯಿಟ್ಟೆ, ಬಳಿಕ ಕರೆಂಟ್ ಇಲ್ಲದೆ ನಿದ್ದೆ ಬರಲಿಲ್ಲ, ಹೀಗೆ ಹೆಂಡತಿಯ ಹತ್ತಿರ ಕೂತಿದ್ದೆ, ಅವಳ ಹಾಳು ಹರಟೆಗೆ ತಡರಾತ್ರಿಯವರೆಗೆ ನಿದ್ದೆಯೇ ಹತ್ತಲಿಲ್ಲ  :("

<?ಮಿಂಚಅಂಚೆಯಿಂದ ಬಂದ ಸಂಬಾಷಣೆ ?>

ಕಾಮತ್ ಕುಂಬ್ಳೆ

Rating
No votes yet

Comments