ತಿರುಕನ ನುಡಿಗಳು

ತಿರುಕನ ನುಡಿಗಳು

* ಅಲ್ಲಾನಲ್ಲಿ ನಂಬುಗೆ, ಪುನರುತ್ಥಾನದಲ್ಲಿ, ನಂಬುಗೆ, ಪುಣ್ಯಕಾರ್ಯಗಳಲ್ಲಿ ನಂಬುಗೆ ಈ ಮೂರು ನಂಬುಗೆಯಿಂದ ಜೀವನ ನಡೆಯಿಸುವವನು ಯಾರೇ ಆದರೂ ಆತನಿಗೆ ಸಂಪೂರ್ಣತೆಯೂ, ಮೋಕ್ಷವೂ ಉಂಟಾಗುತ್ತದೆಂದು ಹೇಳುತ್ತದೆ ಖುರಾನ್. * ಭಗವಂತನ ಒಲುಮೆಗಾಗಿ ಎಲ್ಲ ಕಾರ್ಯವನ್ನೂ ಯಜ್ಞಭಾವದಿಂದ ಮಾಡಿ ನಮ್ಮಲ್ಲಿಯ ಪಶುತ್ವವನ್ನು ಅದರಲ್ಲಿ ಬಲಿಕೊಡಬೇಕು. * ಜೀವಧಾರಿಗಳಾದ ಮಾನವರೇ ಅಭಿನಯಕಾರರು, ವಿಶಾಲ ಪ್ರಪಂಚವೇ ಒಂದು ರಂಗಭೂಮಿ, ಜೀವರುಗಳ ಜೀವನವೇ ಒಂದು ಮಹಾನಾಟಕ. * ಪೂಜೆಯ ಸಾನುಗಳನ್ನು ತರಲು ಸಂತೆಗೆ ಹೋದ ಒಬ್ಬ ವ್ಯಕ್ತಿಯು ಅಲ್ಲಿ ಮಾರಾಟಕ್ಕೆ ಬಂದ ಸಾಮನುಗಳಿಂದ ಆಕರ್ಷಿತನಾಗಿ ಯಾವಯಾವುದೋ ಸಾಮಾನುಗಳನ್ನು ತಂದು, ತಿರು ತಿರುಗಿ ಪೂಜೆ ಸಾಮಾನಿಗಾಗಿ ಸಂತೆಗೆ ಹೋಗುವಂತೆ ಪರಮಾತ್ಮನು ಜೀವರುಗಳಿಗೆ ಲೋಕದಿಂದ ಭಕ್ತಿಯ ಜಲವನ್ನು ತುಂಬಿಕೊಂಡು ಬಾ ಎಂದು ಕಳುಹಿಸಿದರೆ ಜೀವರುಗಳು ಪ್ರಪಂಚದ ಮಾಯಾ ಜಾಲದಲ್ಲಿ ಸಿಕ್ಕು ಒದ್ದಾಡುತ್ತಾ ಹುಟ್ಟು ಸಾವಿನ ಪರಿಭ್ರಮಣಕ್ಕೆ ಗುರಿಯಗಿ ಒದ್ದಾಡುತ್ತಿರುತ್ತಾರೆ. * ಮರುದ್ವನಿಗೊಡುವ ಪ್ರಪಂಚವಿದು. ಬಿರುನುಡಿಗೆ-ಬಿರುನುಡಿ, ಪ್ರೇಮಕ್ಕೆ- ಪ್ರೇಮ ಇದು ಪ್ರಪಂಚ ಧರ್ಮ. * ಜ್ಞಾನ ಮತ್ತು ಬ್ರಹ್ಮಪಟ್ಟವು ಯವುದೇ ಒಂದು ಜಾತಿಗೆ ಮೀಸಲಾದ ಸ್ವತ್ತಲ್ಲ; ಅದು ಯಾವನೇ ಶ್ರದ್ಧಾವಂತ ಸಾಧಕನಿಗೆ ದೊರೆಯುವ ಅಂತಿಮ ಫಲ. * ಸಾಮಾನ್ಯ ವ್ಯಕ್ತಿಗಿಂತ ರಾಷ್ಟ್ರಕ್ಕಾಗಿ ದುಡಿವ ನಿಷ್ಕಾಮಕರ್ಮಿ ಸೇವಾ ಧುರೀಣರನ್ನು ಜನತೆ, ಸಮಾಜ, ಪುರಸ್ಕರಿಸಬೇಕು; ಗೌರವಿಸಬೇಕು. * ನಮ್ಮದೆಲ್ಲ ವೇದಿಕೆಯ ಭಾಷಣದಲ್ಲಿ ಏಕತೆಯ ಜೀವನ; ಆಚರಣೆಯಲ್ಲಿ ನೀವು ನೀವೆ- ನಾವು ನಾವೇ.