ಮಾತುಪಲ್ಲಟ - ೧೦
♫♫♫ಮಾತುಪಲ್ಲಟ - ೧೦♫♫♫
♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣
ಚಿತ್ರ : ಪೞಶ್ಶಿರಾಜ♪
ಸಂಗೀತ : ಎಳೆಯರಾಜ♪
ಮೂಲ ಸಾಹಿತ್ಯ : ಒ. ಎನ್ ವಿ. ಕುರುಪ್♪
ಹಾಡುಗಾರರು : ಕೆ. ಎಸ್. ಚಿತ್ರಾ♪
ವಿಡಿಯೋ : http://www.youtube.com/watch?v=bGxS-es__rc
♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣
ಮೂಲ ಸಾಹಿತ್ಯ♪:
ಕುನ್ನತ್ತೆ ಕೊನ್ನಯ್ಕುಂ ಪೊನ್ ಮೋದಿರಂ |
ಇನ್ನೇದೋ ತಂಬುರಾನ್ ತನ್ನೇಪೊಯೋ |
ಪಲ್ಲಕ್ಕಿಲ್ ಏಱಿಯೋ ವನ್ನು ಮಾರನ್ |
ಪಂಚಮಿ ತಿಂಗಳೋ ವನ್ನು ಕೂಡೆ |
ವರವೇಲ್ಕುಗಯಾಯೋ ಕುರವಯಿಟ್ಟು ಕಿಳಿಗಳ್ ವೞಿನೀಳೆ |
ವರಿ ನೆಲ್ ಕದಿರಾಡಾನ್ ವಯಲಣಿಞ್ಞು ಒರು ನವವಧುಪೋಲೆ ||ಕುನ್ನತ್ತೆ ಕೊನ್ನಯ್ಕುಂ ||
ಆರೆ ನೀ ಕಣಿಕಾಣುವಾನ್ ಆಶತನ್ ತಿರಿನೀಳುಮೆನ್ |
ಪಾದಿರಾ ಮಣಿ ದೀಪಮೇ ಮಿೞಿಚಿಮ್ಮಿ ನಿಲ್ಕುಗಯಾಯ್|
ಓರೋರೋ ತಿರಿನಾಳವುಂ ಆ ಮುಖಂ ಕಣಿಕಣ್ಡಪೋಲ್ |
ಚಾರುಲಜ್ಜಯಿಲ್ ಎನ್ದಿನೋ ತುಡು ವರ್ಣಮಾಯ್ |
ಆಯಿಲ್ಯಂ ಕಾವಿಲೆ ಮಣಿ ನಾಗತ್ತಾನ್ಮಾರ್ಕಿನಿ |
ಆರಾರೋ ಕೂಟ್ಟುಪೋಯ್ ಒರು ಪಾಲೂಟ್ಟು ನೇರುನ್ನು |
ತುಣಯಾಯ್ ವರಣಂ ಇನಿ ಉಡಲಿಲ್ ನಾಗಮಣಿಯುಂ ಅಱಿಯಹರನೇ (೨) ||
ಈ ಶಂಖಿನ್ ತಿರುನೆಂಜಿಲೆ ತೀರ್ಥಮಾಯೊರು ನೀರ್ ಕಣಂ |
ಸ್ನೇಹಸಾಗರಮೇದಿನೀ ಕನಿವಾರ್ನು ನಲ್ಗಿಡುವಾನ್ |
ಈ ಮುಟ್ರತ್ತೊರು ತೈಮರಂ ಪೂತ್ತುನಿಲಪದಿಲ್ ಆಡುವಾನ್ |
ಮೋಹಮಾರ್ನ ನಿಲಾಕ್ಕಿಳಿ ವರುಮೋ ಇನಿ |
ಕಾದೋರಂ ಚೇರ್ನಿನಿ ಕಥಯೇದಾದ್ಯಂ ಚೊಲ್ಲಣಂ |
ಪಾಡಾತ್ತ ಪಾಟ್ಟುಗಳ್ ಇನಿಯೇದಾದ್ಯಾಂ ಮೂಳಣಂ |
ಇನಿಯಾ ತಿರುಮೊೞಿತನ್ ಅಮೃತ್ ತೇಡುಂ ಮಧುರ ಮಧುರ ನಿಮಿಷಂ (೨) ||
♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣
ಮಾತುಪಲ್ಲಟ♪:
ದೂರದಾ ಬೆಟ್ಟದ ಕಣಗಿಲೆಗೂ |
ರತ್ನವ ತೊಡಿಸಿದನಾರವನು |
ಚಾಮರ ಬಾಲೆ ತಾನೊಡಗೂಡೆ |
ಚೌತಿಯ ಕಾನ್ತಿಯ ತಿಂಗಳ ಕೂಡೆ |
ಹಾಱುವ ಬಾನಾಡಿಯೂ ಕಲರವದಿಂ ಸ್ವಾಗತಿಸುತ್ತ ದನಿಗೂಡೆ |
ತೊನೆವಾ ತೆನೆಹಸಿರಿನಿಂ ಸಂಭ್ರಮಿಸುತ್ತ ಬಯಲೂ ಕುಣಿದಾಡೆ || ದೂರದಾ ಬೆಟ್ಟದ ||
ಯಾರನ್ನೋ ಇದಿರುನೋಡುತ್ತ ಕಾತರದಲ್ಲಿ ಹುಡುಕಾಡುತ್ತ |
ಹೊಯ್ಗೆ ಬಟ್ಟಲ ಹರಳುಗಳನ್ ಒನ್ದೊನ್ದಾಗಿ ಎಣಿಸುತ್ತ |
ಗೞಿಗೆಗಳ ಕಾಯುತ್ತ ಯಾರನ್ನೋ ನೆನೆನೆನೆಯುತ್ತ |
ನಸುನಾಚಲ್ ಏಕಿದು ಕೆಂಬಣ್ಣವೀ ಕೆನ್ನೆ |
ಇನ್ನಿಲ್ಲದ ಮಾಟದ ಸವಿಗನಸುಗಳ ಕಾಣುತ್ತ |
ಹಿರಿಬನದ ನಾಗನ ಮನದೊಳಗೇ ಜಾನ್ಸುತ್ತ |
ಕರುಣದಿ ಕನಿಕರಿಸಿರೆನ್ದು ಬೇಡುವೆ ನಾಗದೇವದೇವಿಯರನ್ನು (೨) ||
ಆ ಸುರಗೆ ಸಂಪಗೆಯ ಕಂಪಿನೊಳ್ ಮೆಯ್ ಮಱೆಯುತ್ತಲೇ |
ಊದುಗೊಳವೆಯ ನಾದಕ್ಕೆ ತಲೆದೂಗಿ ನಿನ್ತಿರಲು |
ಅನ್ದೆನ್ದೋ ಕೇಳಿದ ಮೆಲುಹಾಡನ್ನೇ ಗುನುಗುನುಗುತ್ತ |
ನಸುನಾಚಲ್ ಏಕಿದು ಹೊಂಬಣ್ಣವೀ ಬಾನು |
ಮೆಲುದನಿಯ ಭಾಷೆಯ ಪಿಸುಮಾತಿನೊಳ್ ಒನ್ದೊಸಗೆಯ |
ಮೂಡಣದ ದೇವನ ಏೞು ಕುದುರೆಗಳ ಹೋಲುವ |
ಬಣ್ಣದ ವಚನವನ್ನೆನಗಿತ್ತ ವೀರನ ದಾರಿ ಕಾಯುತ್ತಿರುವೆ (೨) ||
♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣
ಟಿಪ್ಪಣಿ♪:
ಹೊಯ್ಗೆ ಬಟ್ಟಲು = ಗೞಿಗೆ ಬಟ್ಟಲು.
ಜಾನ್ಸು = ಧ್ಯಾನಿಸು
ಊದುಗೊಳವೆ = ಕೊೞಲು
Comments
ಉ: ಮಾತುಪಲ್ಲಟ - ೧೦
In reply to ಉ: ಮಾತುಪಲ್ಲಟ - ೧೦ by ksraghavendranavada
ಉ: ಮಾತುಪಲ್ಲಟ - ೧೦