ಸೋತ ಪ್ರೀತಿ
ಕಣ್ಣಿಗೆ ಮಾತು ಕಲಿಸಿ
ಎದೆಯೊಳಗೆ ನಗಾರಿ ಬಚ್ಚಿಟ್ಟ ಪ್ರೀತಿ
ಅವಳ ಪ್ರತಿ ನಗುವಿಗೆ ಗರಿಬಿಚ್ಚಿ ಕುಣಿವ
ಮಳೆಯ ಮುನ್ಸೂಚನೆ ಸಿಕ್ಕ
ನವಿಲು ಇವನ ಮನಸು
ಇವನ ಕವಿತೆಯ ಸಾಲುಗಳಿಗೆ
ರಾಗ ಹುಡುಕುವ ಅವಳ ಹುಚ್ಚು.
ಇವರ ಕಣ್ಣ ಮಾತಿನ ಪ್ರವಾಹಕ್ಕೆ
ಹೊಟ್ಟೆ ಉರಿಯ ಜನ ಎದೆ ನಗಾರಿಯ ಸದ್ದಿಗೆ
ಎಚ್ಚೆತ್ತು ಸದ್ದಿಲ್ಲದೇ ಮದ್ದು ಇಟ್ಟಾಗ
ಅವಳ ಪ್ರತಿ ನಗುವಿಗೆ
ಅರ್ಥ ಹಚ್ಚಿ ಸೋತ ಮಳೆಯಲ್ಲಿ
ತೋಯ್ದು ಮುದುರಿಕೂತ ನವಿಲು ಇವನ ಮನಸು
ಇವನ ಕವಿತೆಯ ಪ್ರತಿ ಸಾಲಲ್ಲೂ
ದೋಷ ಹುಡುಕುವ ಅವಳು
ರಾಗ ಹೊರಡಿಸದ ತಂತಿ ಹರಿದ ವೀಣೆ.
ಗೆದ್ದ ಜನರ ಬಾಯಿಗೆ ಹೊಸ ತಾಂಬೂಲ - ಸೋತ ಪ್ರೀತಿ
ಗಾಯಕ್ಕೆ ಉಪ್ಪು ಸವರಿದವರಿಗೆ ಮಾತ್ರ ಸಂತೃಪ್ತಿ.
Rating
Comments
ಉ: ಸೋತ ಪ್ರೀತಿ
In reply to ಉ: ಸೋತ ಪ್ರೀತಿ by santhosh_87
ಉ: ಸೋತ ಪ್ರೀತಿ
ಉ: ಸೋತ ಪ್ರೀತಿ
In reply to ಉ: ಸೋತ ಪ್ರೀತಿ by ksraghavendranavada
ಉ: ಸೋತ ಪ್ರೀತಿ
ಉ: ಸೋತ ಪ್ರೀತಿ
In reply to ಉ: ಸೋತ ಪ್ರೀತಿ by gopinatha
ಉ: ಸೋತ ಪ್ರೀತಿ
ಉ: ಸೋತ ಪ್ರೀತಿ
In reply to ಉ: ಸೋತ ಪ್ರೀತಿ by asuhegde
ಉ: ಸೋತ ಪ್ರೀತಿ