ಓ ಗುಲಾಬಿಯೇ...

ಓ ಗುಲಾಬಿಯೇ...

ಬರಹ

ಕಂಡೆ ನಾ ನಿನ್ನ ಮುಸ್ಸಂಜೆಯಲಿ..


ಜಿನುಗುಡುತ್ತಿದ್ದ  ಸೋನೆ ಮಳೆಯಲಿ.. 


 


ಏನೆಂದು ವರ್ಣಿಸಲಿ ನಾ ನಿನ್ನ ಅಂದವನು??


ಹೇಳಲು ಸಾಲದೇ ಹುಡುಕುತ್ತಿರುವೆನು ಪದಗಳನ್ನು...


 


ನಿನ್ನ ಮೇಲೆ ಕುಳಿತಿರುವ ಮುತ್ತಿನಂಥ ನೀರ ಹನಿಗಳನು...


ಕಂಡು ನಾನಾದೆ ಮೂಕ ವಿಸ್ಮಿತನು...


 


ಸುಂದರವಾಗಿದ್ದರೂ....ಆಗಲಿಲ್ಲ ನೀನೇಕೆ ಹುಡುಗಿ??


"ಓ ಗುಲಾಬಿಯೇ" ನಿನ್ನ ಕಂಡು ಹುಡುಗಿಯರೂ ಮುದುಡುವರು ಅಸೂಯೆಯಲ್ಲಿ ಕೊರಗಿ ಕೊರಗಿ....


 


ಕವಿಗಳಿಗೆ ಬರೆಯಲು ಆದೆ ನೀನು ಸ್ಪೂರ್ತಿ...


ಹೂವುಗಳಿಗೆ ರಾಣಿ ಎಂಬುದೇ ನಿನ್ನಯ ಕೀರ್ತಿ