ಜನಾ (ಕಾಯೋ ಮಾ) ದೇಶ ...!.
ಏನಾಗಿದೆ ನಮ್ಮ ಜನಪ್ರತಿನಿಧಿಗಳಿಗೆ
ಕನ್ನಡಾಂಬೆಯ ಮಾನವನ್ನು
ಹಣಕ್ಕೂ ಅಧಿಕಾರಕ್ಕೂ
ಹೊರ ರಾಜ್ಯಗಳಲ್ಲಿಟ್ಟು ಮಾರುತಿಹರಲ್ಲ
ಇದು ಸರಿಯೇ ?.
ಘಳಿಗೆಗೊಂದು ಮಾತು
ದಿನಕ್ಕೊಂದು ಬಣ್ಣ
ಅಭಿವೃದ್ಧಿಯ ರತ್ನಗಂಬಳಿಯಾಗಬೇಕಿದ್ದ ಸರ್ಕಾರ
ಅಧಿಕಾರಕ್ಕಾಗಿ ಕಚ್ಚಾಡುತ್ತಿದೆಯಲ್ಲಾ
ಇದು ನ್ಯಾಯವೇ ?.
ಜನರಿಂದ ಗೆದ್ದು ಬಂದು
ಜನರಿಗಾಗಿ ಮಾಡುವ ಕಾರ್ಯಗಳ ಮರೆತು
ದಿನಕ್ಕೊಂದು ಸಮಸ್ಸೆಯನು ಸೃಷ್ಟಿಸಿ
ಶ್ರೀಮಂತ ರಾಜ್ಯವನು
ಲೂಟಿ ಕೋರರ ರಾಜ್ಯವಾಗಿಹರಲ್ಲ
ಇದು ಧರ್ಮವೇ ?.
ಜನತೆಯ ಮಾನವನ್ನು ಬೀದಿಯಲ್ಲಿಟ್ಟು
ಅಭಿವೃದ್ಧಿಯ ಆಶ್ವಾಸನೆ ಕೊಟ್ಟು
ಜನತೆಯ ಹಣದಿಂದ
ಮೋಜು ಮಸ್ತಿ ಮಾಡುತ್ತಿದ್ದರೆ
ರಾಜ್ಯದ ಗತಿಯೇನು ?
ಸಮಸ್ಸೆಗಳಿಗೆ ಉತ್ತರವೇನು ?
ಜನ ಸರ್ಕಾರವೋ
ಜಾಣರ ಸರ್ಕಾರವೋ
ಶ್ರೀಮಂತರ ರಾಜ್ಯದಲ್ಲಿ
ಸಾಮಾನ್ಯ ಜನರು ಉಸಿರಾಡದಂತ
ಸ್ಥತಿಗೆ ಕಾರಣರಾರು ?.
ಜನ ಮರಳೋ ಜಾತ್ರೆ ಮರಳೋ
ಜನನಾಯಕರೋ ಹಣಚೋರರೋ
ಉದ್ದರಿಸುವ ನೆಪದಲ್ಲಿ
ಹಾಳುಗೆಡವಿ ಸಾಗುತಿಹರಲ್ಲಾ
ಇದು ನ್ಯಾಯವೇ ?.
ನಮ್ಮ ರಾಜ್ಯದಲ್ಲೊಂದು
ಹೊಸ ಧಿಗಂತದ ಪರ್ವ ಬೇಕಿದೆ.
ಜನರನ್ನು ಜನರನ್ನಾಗಿ ಕಾಣುವಂತ
ಜನ ಶಕ್ತಿಗಳು ಒಂದಾಗಬೇಕಿದೆ.
ಸಮಸ್ಸೆಗಳನ್ನು ಸುಲಭವಾಗಿ ತಿಳಿಗೊಳಿಸುವಂತ
ಉನ್ನತ ಮನಸ್ಸುಗಳ ಕೊರತೆಯಿದೆ.
ಮತಚಲಾಯಿಸುವ ಮುನ್ನ
ಯೋಚಿಸಿ ಹೆಜ್ಜೆಯನಿಟ್ಟರೆ ಒಳ್ಳೆಯದು
ಇಲ್ಲದಿದ್ದಲ್ಲಿ ನಮಗೆ ನಾವೇ ಶತ್ರುಗಳಾಗುತ್ತೇವೆ.
ಇದಕ್ಕಾಗಿ ಕಾಯುವುದೊಂದು ಬಿಟ್ಟು
ಬೇರೇನು ಮಾಡಲಾಗದು
ಅಂತಹ ಸಮಯಕ್ಕಾಗಿ ಕಾಯಬೇಕಿದೆ.
ವಸಂತ್
ಚಿತ್ರಕೃಪೆ. http://www.southasianmedia.net
Comments
ಉ: ಜನಾ (ಕಾಯೋ ಮಾ) ದೇಶ ...!.
In reply to ಉ: ಜನಾ (ಕಾಯೋ ಮಾ) ದೇಶ ...!. by manju787
ಉ: ಜನಾ (ಕಾಯೋ ಮಾ) ದೇಶ ...!.