ಖೆಡ್ಡಾಗೆ ಬೀಳಲಿದ್ದಾರೆಯೇ ಕುಮಾರಸ್ವಾಮಿ...?!

ಖೆಡ್ಡಾಗೆ ಬೀಳಲಿದ್ದಾರೆಯೇ ಕುಮಾರಸ್ವಾಮಿ...?!

ಬರಹ

"ಜಾತ್ಯಾತೀತ" ಜನತಾದಳದ ನಾಯಕ ಕುಮಾರಸ್ವಾಮಿಯವರು ಯಡಿಯೂರಪ್ಪನವರಿಗೆ ನಾಳೆ ನಡೆಯುವ ವಿಶ್ವಾಸಮತ ಯಾಚನೆಯ ಸಂದರ್ಭದಲ್ಲಿ ಸಕತ್ತಾಗಿ 'ಟಾಂಗ್' ಕೊಟ್ಟು ಕೆಡವಬಲ್ಲ ಲಕ್ಷಣಗಳು ಮೇಲ್ನೋಟಕ್ಕೆ ಗೋಚರಿಸುತ್ತಲಿದೆ. ಆದರೆ ಕಳೆದ ಹತ್ತು ದಿನಗಳ ರಾಜಕೀಯದ ಮೇಲಾಟಗಳನ್ನು ಅವಲೋಕಿಸಿದಾಗ ಆಡಳಿತ ಪಕ್ಷವು ಕಡೇ ಕ್ಷಣದಲ್ಲಿ ಕುಮಾರಸ್ವಾಮಿಯವರನ್ನು ಆಳವಾದ ಖೆಡ್ದದಲ್ಲಿ ಕೆಡವಲಿರುವ ಸೂಚನೆಗಳು ಎದ್ದು ಕಾಣುತ್ತಲಿವೆ! 


ಕುಮಾರಸ್ವಾಮಿಯವರು ರಾಜ್ಯ ಸರ್ಕಾರದ ಭ್ರಷ್ಟಾಚಾರಗಳನ್ನು ದಾಖಲೆಗಳ ಸಹಿತ ಬಹಿರಂಗ ಪಡಿಸಲು ಆರಂಭಿಸಿದ ಕ್ಷಣದಿಂದ ಖೆಡ್ದಾ ಕಾರ್ಯಾಚರಣೆಗೆ ವೇದಿಕೆ ಸಿದ್ಧಪಡಿಸಿಕೊಂಡಂತೆ ತೋರುತ್ತಿದೆ. ಅಂತಿಮ ಹಂತದಲ್ಲಿ 'ಅತೃಪ್ತ' ಶಾಸಕರಲ್ಲಿ ಎಂಟರಿಂದ ಹತ್ತು ಜನ ಯಡಿಯೂರಪ್ಪನವರ ಪರವಾಗಿ ಮತ ಚಲಾಯಿಸಿ ದಿಗ್ಬ್ರಮೆ ಉಂಟು ಮಾಡಿ ಕೆಲವು ನಾಯಕರ ಬಣ್ಣ ಬಯಲು ಮಾಡಿ ಜನಗಳ ದೃಷ್ಟಿ ಬೇರೆಡೆಗೆ ಹರಿಯುವಂತೆ ಮಾಡುವುದರ ಜೊತೆಗೆ 'ಎದುರಾಳಿ'ಗಳನ್ನು ಬಗ್ಗು ಬಡಿಯುವಂತೆ ಮಾಡುವುದೇ ಈ 'ಆಪರೇಷನ್'ನ ಉದ್ದೇಶವಾಗಿರುವಂತೆ ತೋರುವುದಿಲ್ಲವೇ..!? 


ಏನಂತೀರಾ...?