ಮತದಾರರಾಗಿ ನಾವೇನು ಮಾಡಬೇಕು
ಮಾನ್ಯ ಮತದಾರರೇ,
ನಿಮ್ಮ ಮುಂದೆ ಒಂದು ಪ್ರಶ್ನೆ
ನಮ್ಮ ಮುಂದೆ ರಾಜ್ಯ ಸರಕಾರದ ಅಳಿವು ಉಳಿವಿನ ಪ್ರಶ್ನೆ ನಿಂತಿದೆ ಇಲ್ಲಿ ನಾವು ಪಕ್ಷ ಮರೆತು ಮತದಾರ ಹಾಗು ಪ್ರಜ್ಷಾವಂತ ಪ್ರಜೆಯಾಗಿ ಮುಂದಿನ ನಡೆ ನೋಡಬೇಕಾಗಿದೆ.
1. ಇಂದಿನ ಘಟನೆಗೆ ಮುಖ್ಯ ಕಾರಣವೇನು?
2. ಒಂದು ಬಹುಮತದ ಸರಕಾರ ಬಿಳಲು ಯಾರು ಕಾರಣ
3. ಎಂ.ಎಲ್.ಎ ಗಳಿಗೆ ಸ್ವಂತಿಕೆ, ಮತದಾರರ ಬಗ್ಗೆ ಗಮನವಿಲ್ಲವೇ?
4. ಎಂ.ಎಲ್.ಎ ಗಳಿಗೆ ಮಾನ ಎಂಬುವುದು ಇದೇಯೇ?
5. ಹಣ, ಅಧಿಕಾರ ಇವುಗಳ ನಮ್ಮನ್ನು ಮರೆತರೇ(ಮತದಾರನನ್ನು)
6. ಅಧಿಕಾರ ಹಿಂದಿನ ಬಾಗಿಲಿನಿಂದ ಪಡೆಯುವುದು ಸರಿಯೇ
7. ಇಂದಿನ ಪ್ರಹಸನದ ಹಿಂದೆ ಏನಾದರೂ ದೂರದ ಯೋಜನೆ ಇದೇಯಾ?
8. ದಿನಕ್ಕೊಂದು ಹೇಳಿಕೆ ನೀಡುವ ಜನ ಪ್ರತಿನಿಧಿ ನಮ್ಮ ಆಳಲು ಏಷ್ಟು ಸರಿಯಾಗಿದ್ದಾರೆ?
9. ನಮ್ಮ ರಾಜ್ಯ ಮರೆತು ಬೇರೆ ರಾಜ್ಯದಲ್ಲಿ ಸುಖ ಮಜ ಉಡಾಯಿಸುತ್ತಿರುವ ಇವರು ನಮ್ಮ ಪುನಃ ಆಳಲು ಬಂದರೆ ನಾವು ಏನು ಮಾಡಬೇಕು.
10. ಇದನೆಲ್ಲ ಮರೆತು ಮತ್ತೆ ಚುನಾವಣೆಗೆ ಹೋಗಬೇಕೇ?
11. ನಾವು ಮತ ಮಾಡಿ ವಿಧಾನಸೌಧಕ್ಕೆ ಇವರನ್ನು ವಾಪಾಸು ಕರೆಸಿಕೊಳ್ಳುವ ಹಕ್ಕು ನಮಗೆ ಬೇಕಾ?
ಈ ಪ್ರಶ್ನೆಗಳಿಗೆ ನಾವು ಪ್ರಾಮಾಣಿಕವಾಗಿ ಉತ್ತರ ಹಾಗುನಿಶ್ವಯ ಹುಡುಕಬೇಕಾಗಿದೆ.