ಬಾರೆ ಸಖಿ ನಾ ನೀರಿಗೆ ಹೋಗುವೆ

ಬಾರೆ ಸಖಿ ನಾ ನೀರಿಗೆ ಹೋಗುವೆ

ಬಾರೆ ಸಖಿ ನಾ ನೀರಿಗೆ ಹೋಗುವೆ
ತಪ್ಪಲಿನ ಸರೋವರಕೆ
ಬಾರೆ ಸಖಿ ನಾ ನೀರಿಗೆ ಹೋಗುವೆ
ಭಾವನೆಯ ಚಿಲುಮೆಗೆ 

ವರುಷ ವಾಗಿಹುದು ಇಪ್ಪತೈದು
ಹೊರೆಯಾಗಿಹೆನು ಮನೆ ಮಂದಿಗಿಂದು
ಚಡಪಡಿಸುತಲಿರುವೆನು ಮಾತಿನ ಶೂಲಕೆ
ಬೇಡವಾದೇನೆ ನಾ ನಮ್ಮವರಿಗೆ

ಅಪ್ಪನ ಹಿಂದೆ ಅಣ್ಣ ಹೊತ್ತಿರುವ ಸಂಸಾರ ನೊಗವ
ಎಲ್ಲ ವಿಚಾರಕ್ಕೆ ನೋಡುತಲಿರುವ ಅತ್ತಿಗೆ ಮೊಗವ
ನನ್ನ ಕೂಗು ಕೇಳುವುದು ಹೇಗೋ ಕಿವುಡು ಅಮ್ಮನಿಗೆ
ದಂಡೆಯ ಬದಿಯ ಹೂಗಿಡಗಳು ಸಾಕ್ಷಿಯಾದಿತು ನನ್ನೀ ಕಂಬನಿಗೆ

ನನಗಂತೂ ಸಾತಿ ಸಿಕ್ಕಿಹರು ಸರೋವರದ ದಂಡೆಯಲಿ
ಆಗತಾನೆ ಬಂದಿರುವ ಚಂದಮಾಮ,ನನಗೆ ದಿನಾ ವಿದಾಯ ಹೇಳುವ ಆ ರವಿ
ಆಲದ ಮರದಲ್ಲಿ ಕಟ್ಟಿರುವ ಒಂಟಿ ಜೋಕಾಲಿ, ತಾಯಿ ಕಳಕೊಂಡ ೨ ರ ಎಳೇ ಕರು
ಕಣ್ಣಿರನ್ನು ತನ್ನಲ್ಲಿ  ಲೀನವಾಗಿಸಿ ನನ್ನ ನೋಡಿ ಸಾಂತ್ವನ ನೀಡುವ ಆ ಸರೋವರವು

ನಾ ಕಂಡ ಕನಸು ಯಾವಾಗ ನನಸಾಗುವುದೋ
ಮುದುಡಿದ ಮೊಗ್ಗೊಂದು ಬಿರಿಯುವುವ ಕಾಲ ಬರುವುದೆಂದೋ
ನನ್ನ ದಾರಿಯಲ್ಲಿ ತಾರೆಗಳು ನಗೆ ಬೀರುವುದೆಂದೋ
ನನ್ನೀ ಕಂಬನಿ ಒರೆಸುವ ಆಸರೆಯ ಕೈ ಬರುವುದೆಂದೋ

ಕಾಮತ್ ಕುಂಬ್ಳೆ

Rating
No votes yet

Comments