ರಾಜಕೀಯ "ಪಂಚರಂಗಿ"ಗಳು..

ರಾಜಕೀಯ "ಪಂಚರಂಗಿ"ಗಳು..

ಬರಹ

ಪಂಚರಂಗಿ ಸಿನಿಮಾದ ಪಂಚರಂಗಿ ನಾವುಗಳು ಹಾಡಿಗೆ ಇಂದಿನ ರಾಜಕೀಯದ ರೀಮಿಕ್ಸ್ ಮಾಡಿದೀನಿ...ಇದು ಕೇವಲ ಹಾಸ್ಯಕ್ಕಾಗಿ..


 


ಪಂಚರಂಗಿ ನಾವುಗಳು, ಪಂಚರ್ ಅಂಗಡಿ ಟೈರುಗಳು...

ಮೂರೋ, ನಾಲ್ಕೋ ಪಾರ್ಟಿಗಳು..ಜೊತೆಯಲಿ ಸ್ವತಂತ್ರ ಅಭ್ಯರ್ಥಿಗಳು..

ಕಾರಿನ ಮೇಲೆ ಕೆಂಪು ದೀಪಗಳೋ....

ಖಾಕಿ, ಖಾದಿ ಟೋಪಿಗಳು..ಮನೆ, ಕಾರು, ಬಂಗಲೆಗಳು..

ಇನ್ನು ಮುಂದೆ ಓದ್ತಾ ಇದ್ರೆ ಥ್ಯಾಂಕ್ಸ್ ಉಉಉ ಗಳು...

 

ಪಂಚರಂಗಿ ನಾವುಗಳು, ಪಂಚರ್ ಅಂಗಡಿ ಟೈರುಗಳು

ಏನೋ ಎಲೆಕ್ಷನ್ ಗಳು , ಎಂಥ  ವೋಟಿಂಗ್ ಗಳು,

ಎಲ್ಲ ರಾಜಕೀಯದ್ ಮ್ಯಾಚುಗಳು ..

ಎಲ್ರು ಒಳ್ಳೆ ತಲೆಗಳೋ...ನಾವು ಆದ್ವು ಕುರಿಗಳೋ..

ಮೂಕರಾಗಿ ನಿಂತಿರೋ statue ಗಳು..

 

ಬಿ.ಜೆ.ಪಿ.ಗಳು, ಕಾಂಗ್ರೆಸ್ ಗಳು, ಜೆ.ಡಿ.ಎಸ.ಗಳು,

ಸ್ವತಂತ್ರ ಅಭ್ಯರ್ಥಿಗಳು, ಎಲೆಕ್ಷನ್ ಗಳು, ಸರ್ಕಾರಗಳು,

ಗೃಹ,ಹಣ, ಆರೋಗ್ಯ ಮಂತ್ರಿಗಳು..

ಎಲೆಕ್ಷನ್ ಮುಗಿದ ಮೇಲೆ ತಿರುಗಿಯೂ ನೋಡದ ರಾಜಕಾರಣಿಗಳು..

ಅಭಿವೃದ್ಧಿಯೇ ಕಾಣದ ಹಳ್ಳಿಗಳು..ಕಷ್ಟದ ಬೆಳೆಗಳು..ಕುತ್ತಿಗೆಗೆ ಇರುವ ಸಾಲಗಳು..

ಸತ್ತರು ರೈತರುಗಳು..ಇದ್ದವು ಬ್ಯಾಂಕುಗಳು..ಪಿಳಿ ಪಿಳಿ ಪಿಳಿ ನಗುವ ಮಂತ್ರಿಗಳು..

ಕೊಡುವ ಆಶ್ವಾಸನೆಗಳು..ಭರವಸೆಗಳು...ಕಾಗದದ ಮೇಲೆ ಸ್ವಾಮಿ ಅಯ್ಯ ಅಪ್ಪ ಅನ್ನೋ ಮಂತ್ರಿಗಳು..

ಫ್ಲೆಕ್ಷಿನ ಮೇಲೆ ಇಂತಿ ನಿಮ್ಮ ಪ್ರೀತಿಯ ಎನ್ನುವ ಅಭಿಮಾನಿಗಳು..ಹಾಲಿ ಶಾಸಕರ ಮೆರವಣಿಗೆಗಳು,

ಮಾಜಿ ಶಾಸಕರ ಧರಣಿಗಳು..ಗುರುವರ್ಯ ಇವತ್ತಿಗೆ ಇಷ್ಟು ಸಾಕು ನಾನು ನಾಳೆ ಮಾತಾಡಲೇ...

 

ಹಾಲಪ್ಪಗಳು, ಆಚಾರ್ಯಗಳು, ಕಟ್ಟಾಜಿಗಳು ಗಣಿ ದೊರೆಗಳು..

ನರ್ಸಮ್ಮಗಳು, ವೀಡಿಯೊಗಳೋ, ಲಂಚಾಗಳು ಬರಿ ಹಗರಣಗಳು..

ಲೋಕಾಯುಕ್ತಗಳು...ಶಿಸ್ತಿನ ಅಧಿಕಾರಿಗಳು..ರಾಜಕೀಯದಾಟಕ್ಕೆ ಬಲಿಯಾಗಿರೋ ದಾಳಗಳು..

 

ಪಂಚರಂಗಿ ನಾವುಗಳು, ಪಂಚರ್ ಅಂಗಡಿ ಟೈರುಗಳು

 

ಕೊನೆಯ ಹಂತಕ್ಕೆ ಬಂದ ಸರ್ಕಾರಗಳು, ಹಳೆ ಮಂತ್ರಿಗಳು, ಹೊಸ ಮಂತ್ರಿಗಳು,

ಜಗಳಗಳು, ಗಲಾಟೆಗಳು, ಭಿನ್ನಮತಗಳು, ರೆಸಾರ್ಟ್ ಗಳು, ಹೋಟೆಲ್ ಗಳು. ಸರ್ಕಾರದ ದೋಣಿ ಮುಳುಗಡೆಗಳು,

ಬಹುಮತಗಳು, ಅನರ್ಹ ಶಾಸಕರುಗಳು, ಪ್ರತಿಪಕ್ಷದ ವಿರೋಧಗಳು,ಮಾಡಿದ ಎಡವಟ್ಟುಗಳು,

ಮಾರ್ಷಲ್ ಗಳು, ಪೋಲಿಸ್ ಗಳು, ತಲ್ಲಾಟಗಳು, ನೂಕಾಟಗಳು, ಅವಾಚ್ಯ ಶಬ್ಧಗಳು, ಪ್ರೆಸ್ ಗಳು, ಮೀಡಿಯಾ ಗಳು,

ಸಭೆಯಲ್ಲೇ ಬಟ್ಟೆ ಬಿಚ್ಚಿದ ಮಂತ್ರಿಗಳು, ರಾಜ್ಯದ ಮೇಲೆ ಆದ ಕಪ್ಪು ಚುಕ್ಕೆಗಳು..

ಇಂಥ ಸಂದರ್ಭದಲ್ಲಿ ನಾವು ನೋಡುತ್ತಿದ್ದೇವೆ, ನೀವು ಆಟ ಆಡುತ್ತಿದ್ದೀರಿ...

ಗುರುವರ್ಯ ರಾಜಕೀಯ ಬೋರು...ನಾನು ತಿರುಗಿ ನಿದ್ದೆ ಮಾಡಲೇ..

 

ಸ್ಪೀಕರ್ರುಗಳು, ಬಹುಮತಗಳು,ಗಲಾಟೆಗಳು...ವಾಯ್ಸು ಓಟುಗಳು,

ಗವರ್ನರ್ರುಗಳು, ಹೈಕೋರ್ಟುಗಳು ,ಗಡುವುಗಳು...ಮತ್ತೆ ಚಾನ್ಸುಗಳು..

ಶಾಸಕರ ಸಂಖ್ಯೆಗಳು, ಕತ್ತೆ ಕುದುರೆ ವ್ಯಾಪಾರಗಳು..ಪಕ್ಷ ಪ್ರತಿಪಕ್ಷಗಳ ಆಟದ ಸಾಂಪಲ್ಲುಗಳು..

ಎಲ್ಲ ಮಹಾ ಬೋರುಗಳು...ಒಡೆದ ಟೆನ್ನಿಸ್ ಬಾಲುಗಳು...ಆ ಆ ಆಯಿತು ಬಿಡಪ್ಪ..

ಹೊಸ ಹೊಟ್ಟೆ ಉರಿಗಳು ...ಹೇಳು ತಪ್ಪು ಸರಿಗಳು.. ನಗುವುದ ಮರೆತಿರೋ ಮಂತ್ರಿಗಳು..

ಒಂದು ಒಳ್ಳೆ ಪದವಿಗೆ...ಮೀನಿಂಗ್ ಫುಲ್ ಬದುಕಿಗೆ.,,ಎಲ್ಲೈತಪ್ಪ ಇಲ್ಲಿ ಜಾಗಾಗಳು..

 

ಪಂಚರಂಗಿ ನಾವುಗಳು...