ಎಲ್ಲಕ್ಕೂ ವಿಜ್ಞಾನದಲ್ಲಿ ಉತ್ತರವಿಲ್ಲದಿದ್ದರೂ ಎಲ್ಲದರಲ್ಲೂ ಅದು ಅದನ್ನೇ ಬೇಡುತ್ತದೆಃ ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೫೦

ಎಲ್ಲಕ್ಕೂ ವಿಜ್ಞಾನದಲ್ಲಿ ಉತ್ತರವಿಲ್ಲದಿದ್ದರೂ ಎಲ್ಲದರಲ್ಲೂ ಅದು ಅದನ್ನೇ ಬೇಡುತ್ತದೆಃ ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೫೦

(೨೫೬) ಯಾವುದನ್ನಾದರೂ, ಏನನ್ನಾದರೂ ’ಕಾಲ’ವನ್ನಾಗಿ ಬದಲಿಸಬಹುದು. ಆದರೆ ಕಾಲವನ್ನು ಕಾಲಾತೀತವಾದ ಯಾವುದಕ್ಕೂ ಮಾರ್ಪಡಿಸಲಾಗದು. ಇದನ್ನು ಕುರಿತು ಚಿಂತಿಸಲು ಸ್ವಲ್ಪ ಕಾಲಾವಕಾಶ ಮಾಡಿಕೊಂಡು ನೋಡಿ.


(೨೫೭) ವಿಜ್ಞಾನವೆಂಬುದೊಂದು ಆಷಾಡಭೂತಿತನ. ಏಕೆಂದರೆ ಸ್ವತಃ ವಿಜ್ಞಾನದಲ್ಲಿ ಪ್ರತಿಯೊಂದಕ್ಕೂ ವಿವರಣೆ ದೊರಕದಿದ್ದರೂ ಪ್ರತಿಯೊಂದರಲ್ಲೂ ಅದು ಸೂಕ್ತ ವಿವರವನ್ನು ಒತ್ತಾಯಿಸುತ್ತಿರುತ್ತದೆ!


(೨೫೮) ಎಲ್ಲವೂ ಗುರುತ್ವಾಕರ್ಷಣೆಯಿಂದೇನೂ ಬೀಳುವುದಿಲ್ಲ. ಕೆಲವರು ಪ್ರೀತಿಯಲ್ಲಿ ಬೀಳುತ್ತಾರೆ!


(೨೫೯) ಸಿಹಿ ಸುದ್ದಿ ಏನಪ್ಪಾ ಅಂತಂದ್ರೆ ಎಲ್ಲರೂ ಒಂದಲ್ಲ ಒಂದು ದಿನ ಸಾಯುತ್ತಾರೆ. ಕೆಟ್ಟ ಸುದ್ದಿ ಏನಪ್ಪಾ ಅಂತಂದ್ರೆ ಮಿಕ್ಕವರೆಲ್ಲ ತದನಂತರ ನೂರ್ಕಾಲ ಸುಖವಾಗಿ ಬಾಳುತ್ತಾರೆ!


(೨೬೦) ಅಪಮಾನ, ಮುಖಭಂಗ, ಹಿಂಸೆ ಮತ್ತು ಕ್ರೌರ್ಯವು ಜ್ಞಾನಕ್ಕೆ ದಾರಿಗಳು! ಹೀಯಾಳಿಸಬೇಕೆಂಬ ನಿಮ್ಮಾಸೆಯನ್ನು ಅಪಮಾನ ಮಾಡಿ, ಗರ್ವದ ಮುಖಭಂಗಗೊಳಿಸಿ, ಆಸೆಯನ್ನು ಹಿಂಸಿಸಿ ಮತ್ತು ಹಿಂಜರಿಕೆಯನ್ನು ಕ್ರೌರ್ಯದ ಪಂಜಿಗಟ್ಟಿ.


 


 

Rating
No votes yet